ಧನಂಜಯ ಅಭಿನಯದ ಬಹುನಿರೀಕ್ಷಿತ ‘ಹೊಯ್ಸಳ’ ಸಿನಿಮಾದ ಟ್ರೈಲರ್‌ ಇಂದು ಬಿಡುಗಡೆಯಾಗಿದೆ. ಇದು ಅವರ 25ನೇ ಸಿನಿಮಾ. ಇಲ್ಲಿಯವರೆಗಿನ ಅವರ ಚಿತ್ರಗಳ ಪೈಕಿ ‘ಹೊಯ್ಸಳ’, ಬಜೆಟ್‌ ಮತ್ತು ಕ್ಯಾನ್ವಾಸ್‌ ದೃಷ್ಟಿಯಿಂದ ದುಬಾರಿ ಎನ್ನುವುದು ಟ್ರೈಲರ್‌ ನೋಡಿದಾಗ ಅರಿವಿಗೆ ಬರುತ್ತದೆ.

ಇತ್ತೀಚೆಗೆ KCC ಪಂದ್ಯದ ವೇಳೆ ಧನಂಜಯ ಅವರ ‘ಹೊಯ್ಸಳ’ ಟೈಟಲ್‌ ಟ್ರ್ಯಾಕ್‌ ಬಿಡುಗಡೆಯಾಗಿತ್ತು. ಖಡಕ್‌ ಪೊಲೀಸ್‌ ಅಧಿಕಾರಿಯಾಗಿ ಧನಂಜಯ ಅವರನ್ನು ಹಾಡಿನಲ್ಲಿ ಪ್ರಸೆಂಟ್‌ ಮಾಡಿದ್ದರು. ಇಂದು ನಟ ಸುದೀಪ್‌ ಅವರು ಚಿತ್ರದ ಟ್ರೈಲರ್‌ ಬಿಡುಗಡೆ ಮಾಡಿದ್ದಾರೆ. ಧನಂಜಯ ಪಾತ್ರದ ಇನ್ನಷ್ಟು ಡೀಟೇಲಿಂಗ್‌ ಇಲ್ಲಿ ಸಿಗುತ್ತದೆ. ಭರ್ಜರಿ ಆಕ್ಷನ್‌ ದೃಶ್ಯಗಳಿವೆ. KRG ಸ್ಟುಡಿಯೋಸ್‌ ಬ್ಯಾನರ್‌ನಡಿ ತಯಾರಾಗಿರುವ ಚಿತ್ರದಲ್ಲಿ ಅದ್ಧೂರಿತನ ಯತೇಚ್ಛವಾಗಿ ಇರಲಿದೆ ಎನ್ನುವ ಸುಳಿಯೂ ಇಲ್ಲಿದೆ. ಧನಂಜಯ ನಟನೆಯ 25ನೇ ಸಿನಿಮಾ ಎನ್ನುವ ಲ್ಯಾಂಡ್‌ಮಾರ್ಕ್‌ ಕೂಡ ಈ ಪ್ರಯೋಗಕ್ಕಿದ್ದು, ಸ್ವತಃ ಅವರೂ ದೊಡ್ಡ ನಿರೀಕ್ಷೆಯಲ್ಲಿದ್ದಾರೆ. ‘ಪಾಪ್‌ಕಾರ್ನ್‌ ಮಂಕಿ ಟೈಗರ್‌’, ‘ಬಡವ ರಾಸ್ಕಲ್‌’ ಚಿತ್ರಗಳ ನಂತರ ಇಲ್ಲಿ ಮೂರನೇ ಬಾರಿ ನಟಿ ಅಮೃತ ಅಯ್ಯಂಗಾರ್‌ ಅವರು ಧನಂಜಯ್‌ಗೆ ಜೋಡಿಯಾಗಿದ್ದಾರೆ. ವಿಜಯ್‌ ಎನ್‌. ನಿರ್ದೇಶನದ ಚಿತ್ರಕ್ಕೆ ಅಜನೀಶ್‌ ಲೋಕನಾಥ್‌ ಸಂಗೀತವಿದೆ. ‘ಗುಲ್ಟು’ ಸಿನಿಮಾ ಖ್ಯಾತಿಯ ನವೀನ್‌ ಶಂಕರ್‌ ಖಳನಾಗಿ ನಟಿಸಿರುವುದು ವಿಶೇಷ. ಅಚ್ಯುತಕುಮಾರ್, ಪ್ರತಾಪ್ ನಾರಾಯಣ್ ಅವಿನಾಶ್ ಕೆ.ಜಿ.ಎಫ್, ರಾಘು ಶಿವಮೊಗ್ಗ ಇತರೆ ಪ್ರಮುಖ ಕಲಾವಿದರು.

Previous articleಅದ್ಧೂರಿ ಮೇಕಿಂಗ್‌ ನೆಪದಲ್ಲಿ ಕತೆಯಿಲ್ಲದೆ ಸೊರಗಿದ ‘ಕಬ್ಜ’
Next article‘ಪೊನ್ನಿಯಿನ್‌ ಸೆಲ್ವನ್‌ 2’ ಲಿರಿಕಲ್‌ ಸಾಂಗ್‌ ‘ಕಿರುನಗೆ’; ಏಪ್ರಿಲ್‌ 28ಕ್ಕೆ ಸಿನಿಮಾ

LEAVE A REPLY

Connect with

Please enter your comment!
Please enter your name here