ಖ್ಯಾತ ನಿರ್ದೇಶಕ ಮಣಿರತ್ನಂ ಅವರ ‘ಪೊನ್ನಿಯಿನ್‌ ಸೆಲ್ವನ್‌ 2’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಪ್ರೊಮೋಷನ್‌ಗೆ ಪೂರ್ವಭಾವಿಯಾಗಿ ಚಿತ್ರದ ‘ಕಿರುನಗೆ’ ಹಾಡು ಹೊರಬಿದ್ದಿದೆ. ಕನ್ನಡ ಅವತರಣಿಕೆಗಾಗಿ ಚಿತ್ರಸಾಹಿತಿ ಜಯಂತ ಕಾಯ್ಕಿಣಿ ಈ ಹಾಡು ರಚಿಸಿದ್ದು, ರಕ್ಷಿತಾ ಸುರೇಶ್‌ ಹಾಡಿದ್ದಾರೆ.

ಚಿತ್ರನಿರ್ದೇಶಕ ಮಣಿರತ್ನಂ ಅವರ ಡ್ರೀಮ್‌ ಪ್ರಾಜೆಕ್ಟ್‌ ‘ಪೊನ್ನಿಯಿನ್‌ ಸೆಲ್ವನ್‌’ ಮೊದಲ ಸರಣಿಗೆ ಸಿನಿಪ್ರಿಯರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದೀಗ ಎರಡನೇ ಸರಣಿ ಬಿಡುಗಡೆಗೆ ಸಿದ್ಧವಾಗಿದ್ದು, ಏಪ್ರಿಲ್‌ 28ರಂದು ತೆರೆಗೆ ಬರಲಿದೆ. ಇಂದು ಚಿತ್ರದ ಲಿರಿಕಲ್‌ ಸಾಂಗ್‌ ಬಿಡುಗಡೆಯಾಗಿದ್ದು, ಕನ್ನಡ ಅವತರಣಿಕೆ ‘ಕಿರುನಗೆ’ ಸದ್ದು ಮಾಡುತ್ತಿದೆ. ಮ್ಯೂಸಿಕ್‌ ಸೆನ್ಸೇಷನ್‌ ಎ.ಆರ್‌.ರೆಹಮಾನ್‌ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ ‘ಕಿರುನಗೆ’ ಹಾಡಿಗೆ ಜಯಂತ್ ಕಾಯ್ಕಿಣಿ ಅಂದದ ಸಾಲುಗಳನ್ನು ರಚಿಸಿದ್ದು, ಗಾಯಕಿ ರಕ್ಷಿತಾ ಸುರೇಶ್ ದನಿಯಾಗಿದ್ದಾರೆ.

ಲೈಕಾ ಪ್ರೊಡಕ್ಷನ್ಸ್ ಮತ್ತು ಮದ್ರಾಸ್ ಟಾಕೀಸ್ ಬ್ಯಾನರ್‌ನಡಿ ಅದ್ಧೂರಿಯಾಗಿ ನಿರ್ಮಾಣವಾಗಿರುವ ಚಿತ್ರವಿದು. ಬಹುತಾರಾಗಣದ ಚಿತ್ರದಲ್ಲಿ ಕಾರ್ತಿ, ಐಶ್ವರ್ಯಾ ರೈ, ಚಿಯಾನ್ ವಿಕ್ರಮ್, ಜಯಂ ರವಿ, ತ್ರಿಶಾ, ಶರತ್ ಕುಮಾರ್, ಪ್ರಕಾಶ್ ರಾಜ್ ಇತರರು ಅಭಿನಯಿಸಿದ್ದಾರೆ. ಸೆಪ್ಟೆಂಬರ್‌ 30ರಂದು ತೆರೆಕಂಡ ‘ಪೊನ್ನಿಯಿನ್‌ ಸೆಲ್ವನ್‌’ ದೊಡ್ಡ ಯಶಸ್ಸಿನ ಹಿನ್ನೆಲೆಯಲ್ಲಿ ಸರಣಿ ಸಿನಿಮಾ ನಿರೀಕ್ಷೆ ಹೆಚ್ಚುಮಾಡಿದೆ. ಮಣಿರತ್ನಂ, ಎ.ಆರ್‌.ರೆಹಮಾನ್‌ ಜೊತೆ ರವಿವರ್ಮನ್‌ ಛಾಯಾಗ್ರಹಣ ಸಿನಿಮಾದ ಹೆಚ್ಚುಗಾರಿಕೆ. ಲೇಖಕ, ಸ್ವಾತಂತ್ರ್ಯ ಹೋರಾಟಗಾರ ಕಲ್ಕಿ ಕೃಷ್ಣಮೂರ್ತಿ ರಚನೆಯ ಕಾದಂಬರಿ ಆಧರಿಸಿದ ಚಿತ್ರವಿದು. ಏಪ್ರಿಲ್ 28ಕ್ಕೆ ಸರಣಿ ತೆರೆಕಾಣಲಿದೆ.

Previous articleಟ್ರೈಲರ್‌ | ಆಕ್ಷನ್‌ – ಡ್ರಾಮಾ ಧನಂಜಯ ‘ಹೊಯ್ಸಳ’ ಮಾರ್ಚ್‌ 30ಕ್ಕೆ ತೆರೆಗೆ
Next articleಟ್ರೈಲರ್‌ | ದಿವಾಕರ ಡಿಂಡಿಮ ನಿರ್ದೇಶನದ ಸಿನಿಮಾ ‘ಜುಗಲ್‌ ಬಂದಿ’

LEAVE A REPLY

Connect with

Please enter your comment!
Please enter your name here