ಡಾರ್ಲಿಂಗ್‌ ಕೃಷ್ಣ ನಟಿಸಿ, ನಿರ್ಮಿಸಿ, ನಿರ್ದೇಶಿಸಿರುವ ‘ಲವ್‌Mocktail 2’ ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ‘ಲವ್‌Mocktail’ ಚಿತ್ರದ ಪಾತ್ರಗಳೊಂದಿಗೆ ಹೊಸದಾಗಿ ಮತ್ತಷ್ಟು ಪಾತ್ರಗಳು ಇಲ್ಲಿರಲಿವೆ.

ನಿನ್ನೆ ಜನವರಿ 31ಕ್ಕೆ ‘ಲವ್‌Mocktail’ ಸಿನಿಮಾ ತೆರೆಕಂಡು ಎರಡು ವರ್ಷ. ಕೋವಿಡ್‌ ಸಂಕಷ್ಟದ ದಿನಗಳಲ್ಲಿ ಗೆದ್ದ ಕನ್ನಡ ಚಿತ್ರಗಳ ಪೈಕಿ ಇದೂ ಒಂದು. ದೊಡ್ಡ ಸದ್ದು ಮಾಡದೆ ಬಿಡುಗಡೆಯಾದ ಸಿನಿಮಾ ನಿಧಾನವಾಗಿ ಪ್ರೇಕ್ಷಕರಿಗೆ ಆಪ್ತವಾಯ್ತು. ಥಿಯೇಟರ್‌ನಲ್ಲಿ ಬಿಡುಗಡೆಯಾಗುವ ಹೊತ್ತಿಗೆ ಕೋವಿಡ್‌ ಬಂದೆರಗಿತ್ತು. ಮುಂದೆ OTTಯಲ್ಲಿ ಸಿನಿಮಾವನ್ನು ಜನರು ಮುಗಿಬಿದ್ದು ನೋಡಿದ್ದರು. ಚಿತ್ರದಲ್ಲಿ ನಟಿಸಿದ್ದ ಡಾರ್ಲಿಂಗ್‌ ಕೃಷ್ಣ ಮತ್ತು ಮಿಲನಾ ಈಗ ದಂಪತಿ. ಇದೀಗ ಇಬ್ಬರೂ ‘ಲವ್‌Mocktail 2’ ಸಿನಿಮಾ ನಿರ್ಮಿಸಿ ತೆರೆಗೆ ತರುತ್ತಿದ್ದಾರೆ. ಇಂದು ಟ್ರೈಲರ್‌ ಬಿಡುಗಡೆಯಾಗಿದ್ದು, ನಿಧಿ ತೀರಿಕೊಂಡ ಎರಡು ವರ್ಷಗಳ ನಂತರದಿಂದ ಕತೆ ಶುರುವಾಗುತ್ತದೆ.

ಮೊದಲ ಪಾರ್ಟ್‌ನಲ್ಲಿದ್ದ ಅಮೃತಾ ಅಯ್ಯಂಗಾರ್‌, ಅಭಿಲಾಷ್‌ ಅವರ ಪಾತ್ರಗಳು ಮುಂದುವರೆದಿದ್ದು, ಜೊತೆಗೆ ಮತ್ತೆ ಕೆಲವು ಹೊಸ ಪಾತ್ರಗಳು ಸೇರಿಕೊಂಡಿವೆ. ಆ ಚಿತ್ರದ ಯಶಸ್ಸಿನಿಂದಾಗಿ ನಮಗೆ ದೊಡ್ಡ ಜವಾಬ್ದಾರಿ ಇತ್ತು. ಪ್ರೇಕ್ಷಕರ ಎಕ್ಸ್‌ಪೆಕ್ಟೇಷನ್‌ ಕೂಡ ಹೆಚ್ಚೇ ಇದೆ. ಹಾಗಾಗಿ ತುಂಬಾ ಎಚ್ಚರಿಕೆಯಿಂದ ಸಿನಿಮಾ ಮಾಡಿದ್ದೇವೆ. ಆದಿ ಯಾರನ್ನು ಮದುವೆ ಆಗ್ತಾನೆ? ಅವರ ಮುಂದಿನ ಬದುಕಿನ ಸುತ್ತ ಸೀಕ್ವೆಲ್‌ ಸಿನಿಮಾ ಇರುತ್ತದೆ” ಎನ್ನುತ್ತಾರೆ ಚಿತ್ರದ ಹೀರೋ, ನಿರ್ದೇಶಕ ಕೃಷ್ಣ. ಕೋವಿಡ್‌ ದಿನಗಳಲ್ಲೇ ಹೆಣೆದು ಚಿತ್ರೀಕರಿಸಿದ ಸಿನಿಮಾ ಈಗ ಬಿಡುಗಡೆಗೆ ಸಿದ್ಧವಾಗಿದೆ. ಥಿಯೇಟರ್‌ಗಳಲ್ಲಿ 100 ಪರ್ಸೆಂಟ್‌ ಆಕ್ಯುಪೆನ್ಸೀ ಸಿಕ್ಕಿದಾಕ್ಷಣ ರಿಲೀಸ್‌ ಡೇಟ್‌ ಘೋಷಿಸುವುದಾಗಿ ಹೇಳುತ್ತಾರೆ ಕೃಷ್ಣ. ‘ಲವ್‌Mocktail 2’ ಚಿತ್ರಕ್ಕೆ ರಾಘವೇಂದ್ರ ಕಾಮತ್‌ ಗೀತೆಗಳನ್ನು ರಚಿಸಿದ್ದು, ನಕುಲ್‌ ಅಭಯಂಕರ್‌ ಸಂಗೀತ ಸಂಯೋಜಿಸಿದ್ದಾರೆ.

Previous articleಟೀಸರ್‌ | ವಿಕ್ರಂ ಗ್ಯಾಂಗ್‌ಸ್ಟರ್‌ ಡ್ರಾಮಾ ‘ಮಹಾನ್‌’; ಅಮೇಜಾನ್‌ ಪ್ರೈಮ್‌ನಲ್ಲಿ ಫೆ.10ರಿಂದ
Next articleಫೆಬ್ರವರಿ ಪ್ರಮುಖ OTT ರಿಲೀಸ್‌ಗಳು; ಲೂಪ್‌ ಲಪೇಟಾ, ದಿ ಗ್ರೇಟ್‌ ಇಂಡಿಯನ್‌ ಮರ್ಡರ್‌.. ಇತರೆ

LEAVE A REPLY

Connect with

Please enter your comment!
Please enter your name here