ಅಮೇಜಾನ್‌ ಪ್ರೈಮ್‌ ವೀಡಿಯೋ ‘ಮಹಾನ್‌’ ತಮಿಳು ಸಿನಿಮಾದ ಟೀಸರ್‌ ಬಿಡುಗಡೆ ಮಾಡಿದೆ. ಕಾರ್ತೀಕ್‌ ಸುಬ್ಬರಾಜ್‌ ನಿರ್ದೇಶನದಲ್ಲಿ ವಿಕ್ರಂ ಮತ್ತು ಧ್ರುವ್‌ ನಟಿಸಿರುವ ಸಿನಿಮಾ ಫೆ.10ರಿಂದ ಸ್ಟ್ರೀಮ್‌ ಆಗಲಿದೆ.

ನಟ ವಿಕ್ರಂ ಮತ್ತು ಅವರ ಪುತ್ರ ಧ್ರುವ್‌ ನಟಿಸಿರುವ ‘ಮಹಾನ್‌’ ಸಿನಿಮಾದ ಟೀಸರ್‌ ಬಿಡುಗಡೆಯಾಗಿದ್ದು, ವಿಕ್ರಂ ಸಂಕೀರ್ಣವಾದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಟ್ರೈಲರ್‌ ಪ್ರಕಾರ ಹೀರೋ ವಿಕ್ರಂ ಪಾತ್ರದ ತಂದೆ ಮಹಾತ್ಮಾ ಗಾಂಧೀಜಿ ಅವರ ಅಪ್ಪಟ ಅನುಯಾಯಿ. ಪುತ್ರನಿಗೆ ‘ಮಹಾನ್‌ ಗಾಂಧಿ’ ಎಂದು ಹೆಸರಿಟ್ಟು ಕರೆಯುವಷ್ಟು ಗಾಂಧಿ ಅಭಿಮಾನಿ. ಗಾಂಧೀಜಿ ಹಾದಿಯಲ್ಲೇ ಸಾಗಬೇಕೆನ್ನುವ ತಂದೆಯ ಒತ್ತಡದಿಂದ ಮಹಾನ್‌ ಗಾಂಧಿ ವ್ಯಕ್ತಿತ್ವ ರೂಪುಗೊಳ್ಳುವ ಸಂಕೀರ್ಣವಾದ ಸನ್ನಿವೇಶಗಳು ಟ್ರೈಲರ್‌ನಲ್ಲಿವೆ. ಗೊಂದಲದ ಬಾಲ್ಯ ಆತನದ್ದು. ಇದರಿಂದಾಗಿ ಅವನು ಶಾಂತಿಧೂತನಾಗುವನೇ? ದುಷ್ಟ ಗ್ಯಾಂಗ್‌ಸ್ಟರ್‌ ಅಗಿ ರೂಪುಗೊಳ್ಳುವನೇ? ವಿಫಲ ತಂದೆಯಾಗಿಯೂ ವಿಕ್ರಂ ಪಾತ್ರದ ಚಿತ್ರಣವಿದೆ. ನಿರ್ದೇಶಕ ಕಾರ್ತೀಕ್‌ ಸುಬ್ಬರಾಜ್‌ ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ಪಾತ್ರಗಳನ್ನು ಹೆಣೆದಿದ್ದು, ವಿಕ್ರಂ ಅವರ ಪುತ್ರ ಧ್ರುವ್‌ ‘ದಾದಾ’ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಮೇಜಾನ್‌ ಪ್ರೈಮ್‌ನಲ್ಲಿ ಸಿನಿಮಾ ಫೆಬ್ರವರಿ 10ರಿಂದ ಸ್ಟ್ರೀಮ್‌ ಆಗಲಿದೆ.

LEAVE A REPLY

Connect with

Please enter your comment!
Please enter your name here