ಇದೊಂದು ಅಪರೂಪದ ಸಂದರ್ಭ. ಒಂದೇ ವೇದಿಕೆಯಲ್ಲಿ ವಿವಿಧ ಭಾಷೆಗಳ ಆರು ಸಿನಿಮಾಗಳು ಸೆಟ್ಟೇರಿದವು. ‘ಡೆಕ್ಕನ್ ಕಿಂಗ್’ ಸಂಸ್ಥೆ ನಿರ್ಮಾಣ ಮಾಡುತ್ತಿರುವ ‘ಸ್ಥಂಭಂ’, ‘ಸಮರ್ಥ್’, ‘ಮಂಗಳೂರು’ ಮತ್ತು ‘ಫೆಬ್ರವರಿ 29 ಸೂರ್ಯಗಿರಿ’ ಚಿತ್ರಗಳ ಶೀರ್ಷಿಕೆ ಅನಾವರಣ ಕಾರ್ಯಕ್ರಮ ನಡೆದಿದೆ.

ಏಕಕಾಲಕ್ಕೆ ಆರು ಸಿನಿಮಾಗಳನ್ನು ನಿರ್ಮಿಸುವುದು ಬಹುದೊಡ್ಡ ಸವಾಲು. ‘ಡೆಕ್ಕನ್ ಕಿಂಗ್’ ಸಂಸ್ಥೆಯ ಬಿಜು ಶಿವಾನಂದ್‌ ಇಂಥದ್ದೊಂದು ಸಾಹಸಕ್ಕೆ ಕೈಹಾಕಿದ್ದು, ಆರು ಸಿನಿಮಾಗಳ ನಿರ್ಮಾಣದ ಹೊಣೆ ಹೊತ್ತಿದ್ದಾರೆ. ಕನ್ನಡ ಮಾತ್ರವಲ್ಲದೇ ತಮಿಳು, ಮಲಯಾಳಂ, ತುಳು, ಕೊಂಕಣಿ ಭಾಷೆಗಳಲ್ಲಿ ಈ ಸಿನಿಮಾಗಳು ಸೆಟ್ಟೇರಿವೆ. ಹೊಸಬರಿಗೆ ಅವಕಾಶ ಕಲ್ಪಿಸುವುದು ಇವರ ಉದ್ದೇಶ. ಸಂಸ್ಥೆಯಿಂದ ನಿರ್ಮಾಣ ಆಗುತ್ತಿರುವ ‘ಸ್ಥಂಭಂ’, ‘ಸಮರ್ಥ್’, ‘ಮಂಗಳೂರು’ ಮತ್ತು ‘ಫೆಬ್ರವರಿ 29 ಸೂರ್ಯಗಿರಿ’ ಚಿತ್ರಗಳ ಶೀರ್ಷಿಕೆಗಳು ಅನಾವರಣಗೊಂಡವು.

‘ಡೆಕ್ಕನ್ ಕಿಂಗ್’ ಸಂಸ್ಥೆಯ ಬೆನ್ನು ತಟ್ಟಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಹಲವು ಗಣ್ಯರು ಆಗಮಿಸಿದ್ದರು. ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್ ಶುಭಕೋರಿದರು. ಈ ಸಿನಿಮಾಗಳಲ್ಲಿ ಕನ್ನಡಿಗರಲ್ಲದೆ ಪರಭಾಷೆಯ ತಂತ್ರಜ್ಞರೂ ಕೆಲಸ ಮಾಡುತ್ತಿದ್ದಾರೆ. ಮುಂದಿನ ಸುದ್ದಿಗೋಷ್ಠಿ ಹೊತ್ತಿಗೆ ಕನ್ನಡ ಕಲಿತು ಮಾತನಾಡುವ ಭರವಸೆ ಅವರಿಂದ ಸಿಕ್ಕಿತು. ‘ಡೆಕ್ಕನ್ ಕಿಂಗ್’ ಬ್ಯಾನರ್ ಮೂಲಕ ನಿರ್ಮಾಣ ಆಗುತ್ತಿರುವ ‘ಸಮರ್ಥ್’ ಚಿತ್ರಕ್ಕೆ ತಮಿಳಿನಲ್ಲಿ ‘ವೇದಾದ್ರಿ’ ಎನ್ನುವ ಹೆಸರಿಡಲಾಗಿದೆ. ಈ ಚಿತ್ರವನ್ನು ರಾಜಾ ವೆಂಕಯ್ಯ ನಿರ್ದೇಶನ ಮಾಡುತ್ತಿದ್ದಾರೆ. ಇದು ಅವರ ಚೊಚ್ಚಲ ನಿರ್ದೇಶನದ ಸಿನಿಮಾ. ಕನ್ನಡದಲ್ಲಿ ಪ್ರವೀರ್ ಶೆಟ್ಟಿ ಮತ್ತು ಸೋನಲ್ ಮೊಂತೆರೋ ಅಭಿನಯಿಸುತ್ತಿದ್ದರೆ, ತಮಿಳಿನಲ್ಲಿ ಕಿಶೋರ್ ಮತ್ತು ಏಸ್ತರ್ ನರೋನಾ ನಟಿಸುತ್ತಿದ್ದಾರೆ. ಪ್ರತಾಪ್ ಪೋತನ್, ಅವಿನಾಶ್, ಪವಿತ್ರಾ ಲೋಕೇಶ್, ಸಂದೀಪ್ ಮಲಾನಿ ಕನ್ನಡ ಮತ್ತು ತಮಿಳು ಎರಡೂ ವರ್ಷನ್‌ಗಳಲ್ಲಿ ನಟಿಸಲಿದ್ದಾರೆ. ಕಾರ್ತಿಕ್ ಸುಬ್ರಹ್ಮಣ್ಯಂ ಛಾಯಾಗ್ರಹಣ, ಭಾರದ್ವಾಜ್ ಸಂಗೀತ ನಿರ್ದೇಶನ ಮಾಡಲಿದ್ದಾರೆ.

ಇನ್ನೊಂದು ಚಿತ್ರ ‘ಸ್ತಂಭಂ’ನಲ್ಲಿ ‘ಕೆಜಿಎಫ್’ ಖ್ಯಾತಿಯ ನಟ ಗರುಡ ರಾಮ್ ಬಣ್ಣ ಹಚ್ಚಲಿದ್ದಾರೆ. ಸಂದೀಪ್ ಶೆರಾವತ್ ನಾಯಕ. ಹೊಸ ಕಲಾವಿರಾದ ಆಲಿಯಾ ಮತ್ತು ರಕ್ಷಿತ್ ಅವರಿಗೆ ಈ ಸಿನಿಮಾದಲ್ಲಿ ಅವಕಾಶ ನೀಡಲಾಗಿದೆ. ಸಂದೀಪ್ ಮಲಾನಿ ನಿರ್ದೇಶಿಸಲಿರುವ ‘ಮಂಗಳೂರು’ ಚಿತ್ರಕ್ಕೂ ‘ಡೆಕ್ಕನ್ ಕಿಂಗ್’ ಬ್ಯಾನರ್ ಮೂಲಕ ಬಂಡವಾಳ ಹೂಡುತ್ತಿದೆ. ಈ ಚಿತ್ರಕ್ಕೆ ಇನ್ನಷ್ಟೇ ಕಲಾವಿದರ ಆಯ್ಕೆ ಪ್ರಕ್ರಿಯೆ ನಡೆಯಬೇಕಿದೆ. ಈ ಚಿತ್ರ ಕನ್ನಡದ ಜೊತೆಗೆ ಕೊಂಕಣಿ, ತುಳು ಮತ್ತು ಬ್ಯಾರಿ ಭಾಷೆಗಳಲ್ಲಿ ಮೂಡಿಬರಲಿದೆ. ಕರಾವಳಿ ಪ್ರತಿಭೆಗಳಿಗೆ ಅವಕಾಶ ನೀಡುವುದಾಗಿ ಚಿತ್ರತಂಡ ಹೇಳಿಕೊಂಡಿದೆ. ಮತ್ತೊಂದು ಸಿನಿಮಾಗೆ ‘ಫೆಬ್ರವರಿ 29 ಸೂರ್ಯಗಿರಿ’ ಎಂದು ಭಿನ್ನ ಶೀರ್ಷಿಕೆಯನ್ನಿಟ್ಟಿದ್ದಾರೆ. ಇದು ಕೂಡ ದ್ವಿಭಾಷಾ ಚಿತ್ರವಾಗಿದ್ದು, ಕನ್ನಡ ಮತ್ತು ತಮಿಳಿನಲ್ಲಿ ನಿರ್ಮಾಣ ಆಗಲಿದೆ. ಇದರಲ್ಲೂ ಪ್ರವೀರ್ ಶೆಟ್ಟಿ, ಏಸ್ತರ್ ನೊರಾನಾ, ಪ್ರಗತಿ, ಗೋಕುಲ್ ಶಿವಾನಂದ್ ಮತ್ತು ಸಂದೀಪ್ ಮಲಾನಿ ನಟಿಸುತ್ತಿದ್ದಾರೆ.

Previous articleಟ್ರೈಲರ್ | ಇದೇ ಡಿಸೆಂಬರ್‌ 10ಕ್ಕೆ ‘ದೃಶ್ಯ 2’; ಕೇಸ್‌ ರೀಓಪನ್ಸ್
Next article‘ಮಿಲಿ’ ಚಿತ್ರೀಕರಣ ಪೂರ್ಣಗೊಳಿಸಿದ ಜಾಹ್ನವಿ ಕಪೂರ್; ತಂದೆ ಬೋನಿ ಕಪೂರ್‌ರಿಗೆ ನಟಿಯ ಭಾವುಕ ಪತ್ರ

LEAVE A REPLY

Connect with

Please enter your comment!
Please enter your name here