ಶ್ರೀನಿಧಿ ಬೆಂಗಳೂರು ನಿರ್ದೇಶನದ ‘ಬ್ಲಿಂಕ್‌’ ವೈಜ್ಞಾನಿಕ ಕನ್ನಡ ಸಿನಿಮಾ ನವೆಂಬರ್‌ನಲ್ಲಿ ತೆರೆಗೆ ಬರಲಿದೆ. ದೀಕ್ಷಿತ್‌ ಶೆಟ್ಟಿ ಮತ್ತು ಚೈತ್ರ ಆಚಾರ್‌ ನಟನೆಯ ಚಿತ್ರವಿದು.

ದೀಕ್ಷಿತ್‌ ಶೆಟ್ಟಿ ಮತ್ತು ಚೈತ್ರ ಜೆ ಆಚಾರ್‌ ನಟನೆಯ ‘ಬ್ಲಿಂಕ್‌’ ವೈಜ್ಞಾನಿಕ ಚಿತ್ರವನ್ನು ನವೆಂಬರ್‌ನಲ್ಲಿ ತೆರೆಗೆ ತರುವುದಾಗಿ ನಿರ್ಮಾಪಕರು ಹೇಳಿಕೊಂಡಿದ್ದಾರೆ. ‘ದಿಯಾ’ ಮತ್ತು ‘ದಸರಾ’ (ತೆಲುಗು) ಚಿತ್ರಗಳ ಯಶಸ್ಸಿನ ನಂತರ ದೀಕ್ಷಿತ್ ಶೆಟ್ಟಿ ಅವರು ಬಿಡುಗಡೆಗೆ ಸಿದ್ದವಿರುವ ತಮ್ಮ ಮುಂದಿನ ‘ಬ್ಲಿಂಕ್’ ಚಿತ್ರದ ಬಗ್ಗೆ ಉತ್ಸಾಹದಿಂದ ಮಾತನಾಡುತ್ತಾರೆ. ದೀಕ್ಷಿತ್ ಅವರ ಗೆಳೆಯ ಶ್ರೀನಿಧಿ ಬೆಂಗಳೂರು ನಿರ್ದೇಶನದ ಚಿತ್ರದ ನಾಯಕಿ ಚೈತ್ರ ಆಚಾರ್‌ ಅವರ ಎರಡು ಸಿನಿಮಾಗಳು ಸದ್ಯದಲ್ಲೇ ಬಿಡುಗಡೆಯಾಗುತ್ತಿವೆ. ರಾಜ್‌ ಬಿ ಶೆಟ್ಟಿ ರಚಿಸಿ, ನಟಿಸಿರುವ ‘ಟೋಬಿ’ ಮತ್ತು ‘ಸಪ್ತಸಾಗರದಾಚೆ ಎಲ್ಲೋ’ ಚೈತ್ರ ಅವರ ಎರಡು ಪ್ರಮುಖ ಸಿನಿಮಾಗಳು. ಈ ಸಿನಿಮಾಗಳು ತೆರೆಕಂಡ ನಂತರ ‘ಬ್ಲಿಂಕ್‌’ ಥಿಯೇಟರ್‌ಗೆ ಬರಲಿದೆ ಎಂದು ಚಿತ್ರದ ನಿರ್ಮಾಪಕ ಜನನಿ ಪಿಕ್ಚರ್ಸ್‌ನ ರವಿಚಂದ್ರ ಹೇಳುತ್ತಾರೆ. ವಜ್ರಧನ ಜೈನ್‌, ಮಂದಾರ ಬಟ್ಟಲಹಳ್ಳಿ, ಸುರೇಶ್‌ ಅನಗಳ್ಳಿ, ಗೋಪಾಲಕೃಷ್ಣ ದೇಶಪಾಂಡೆ ಚಿತ್ರದ ಪ್ರಮುಖ ಪಾತ್ರಗಳಲ್ಲಿದ್ದಾರೆ. ಅವಿನಾಶ ಶಾಸ್ತ್ರಿ ಛಾಯಾಗ್ರಹಣ, ಪ್ರಸನ್ನಕುಮಾರ್ ಸಂಗೀತ ಚಿತ್ರಕ್ಕಿದೆ.

Previous article‘ಗಾಂಡೀವಧಾರಿ ಅರ್ಜುನ’ ಟ್ರೈಲರ್‌ | ವರುಣ್‌ ತೇಜ್‌ ತೆಲುಗು ಸಿನಿಮಾ ಆಗಸ್ಟ್‌ 25ಕ್ಕೆ
Next articleಉಪೇಂದ್ರರ ಮೇಲೆ ‘ಅಟ್ರಾಸಿಟಿ’ ಪ್ರಕರಣದಡಿ ದೂರು | ಕೋರ್ಟ್‌ ಮೊರೆ ಹೋದ ನಟ

LEAVE A REPLY

Connect with

Please enter your comment!
Please enter your name here