ವರುಣ್‌ ತೇಜ್‌ ನಟನೆಯ ‘ಗಾಂಡೀವಧಾರಿ ಅರ್ಜುನ’ ತೆಲುಗು ಸಿನಿಮಾ ಟ್ರೈಲರ್‌ ಬಿಡುಗಡೆಯಾಗಿದೆ. ಪ್ರವೀಣ್‌ ಸತ್ತಾರು ಕತೆ ರಚಿಸಿ ನಿರ್ದೇಶಿಸಿರುವ ಸಿನಿಮಾದ ನಾಯಕಿ ಸಾಕ್ಷಿ ವೈದ್ಯ. ಈ ಆಕ್ಷನ್‌ – ಥ್ರಿಲ್ಲರ್‌ ಆಗಸ್ಟ್‌ 25ರಂದು ತೆರೆಕಾಣಲಿದೆ.

ಪ್ರವೀಣ್‌ ಸತ್ತಾರು ನಿರ್ದೇಶನದಲ್ಲಿ ವರುಣ್‌ ತೇಜ್‌ ನಟಿಸಿರುವ ‘ಗಾಂಡೀವಧಾರಿ ಅರ್ಜುನ’ ತೆಲುಗು ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ಇದೊಂದು ಸಸ್ಪೆನ್ಸ್‌ – ಆಕ್ಷನ್‌ – ಥ್ರಿಲ್ಲರ್‌. ಚಿತ್ರದಲ್ಲಿ ಸಚಿವನಾಗಿ ನಟಿಸಿರುವ ನಾಜರ್‌ ಹೇಳಿಕೆಯೊಂದಿಗೆ ಟ್ರೈಲರ್‌ ಆರಂಭವಾಗುತ್ತದೆ. ವರುಣ್‌ ತೇಜ್, ನಾಸರ್‌ರನ್ನು ಬೆದರಿಕೆಗಳಿಂದ ರಕ್ಷಿಸುವ ಏಜೆಂಟ್‌ ಪಾತ್ರ ನಿರ್ವಹಿಸಿದ್ದಾರೆ. ಹವಾಮಾನ ಬದಲಾವಣೆಯ ಕುರಿತು ಪಿತೂರಿ ನಡೆಸುವ ವಿವಿಧ ಘಟನೆಗಳ ಮೇಲೆ ಕೇಂದ್ರೀಕೃತವಾಗಿರುವ ಚಿತ್ರದ ಟ್ರೈಲರ್ ರಹಸ್ಯ ಕಾರ್ಯಾಚರಣೆಯನ್ನು ಹೊಂದಿದೆ. ಸಾಕ್ಷಿ ವೈದ್ಯ ಚಿತ್ರದ ನಾಯಕಿ. ಪ್ರವೀಣ್‌ ಸತ್ತಾರು ಕತೆ ಬರೆದು ನಿರ್ದೇಶಿಸಿರುವ ಚಿತ್ರವನ್ನು BVSN ಪ್ರಸಾದ್‌ ನಿರ್ಮಿಸಿದ್ದಾರೆ. ವಿಮಲಾ ರಾಮನ್‌, ನರೇನ್‌, ವಿನಯ್‌ ರೈ, ರೋಶಿನಿ ಪ್ರಕಾಶ್‌, ಮನೀಶ್‌ ಚೌಧರಿ, ಅಭಿನವ್‌ ಗೋಮತಮ್‌ ಇತರೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಮಿಕ್ಕಿ ಮೇಯರ್‌ ಸಂಗೀತ, ಮುಖೇಶ್‌ ಜಿ ಛಾಯಾಗ್ರಹಣ ಚಿತ್ರಕ್ಕಿದೆ. ಆಗಸ್‌ 25ರಂದು ಸಿನಿಮಾ ತೆರೆಕಾಣಲಿದೆ.

Previous articleಮೆಲ್ಬೋರ್ನ್‌ ಚಿತ್ರೋತ್ಸವ | ‘ಹದಿನೇಳೆಂಟು’ ಪೃಥ್ವಿ ಕೊಣನೂರು ಅತ್ಯುತ್ತಮ ನಿರ್ದೇಶಕ
Next articleದೀಕ್ಷಿತ್ ಶೆಟ್ಟಿ – ಚೈತ್ರಾ ಆಚಾರ್‌ ವೈಜ್ಞಾನಿಕ ಸಿನಿಮಾ ‘ಬ್ಲಿಂಕ್’ ನವೆಂಬರ್‌ನಲ್ಲಿ ತೆರೆಗೆ

LEAVE A REPLY

Connect with

Please enter your comment!
Please enter your name here