2021ರ ಯಶಸ್ವೀ ಸಿನಿಮಾ ‘ಬಡವ ರಾಸ್ಕಲ್‌’ VOOT Selectನಲ್ಲಿ ಜನವರಿ 26ರಿಂದ ಸ್ಟ್ರೀಮ್‌ ಆಗಲಿದೆ. ಚಿತ್ರದ ಹೀರೋ, ನಿರ್ಮಾಪಕ ಧನಂಜಯ ಟ್ವಿಟರ್‌ನಲ್ಲಿ ಟ್ರೈಲರ್‌ನೊಂದಿಗೆ ಈ ಸುದ್ದಿಯನ್ನು ಹಂಚಿಕೊಂಡಿದ್ದಾರೆ.

ಶಂಕರ್‌ ಗುರು ನಿರ್ದೇಶನದಲ್ಲಿ ಧನಂಜಯ ನಟಿಸಿರುವ ‘ಬಡವ ರಾಸ್ಕಲ್‌’ ಸಿನಿಮಾ 2021ರ ಡಿಸೆಂಬರ್‌ 24ರಂದು ತೆರೆಕಂಡಿತ್ತು. ಉತ್ತಮ ಪ್ರೊಮೋಷನ್‌ ಜೊತೆ ಹೊಸತನದ ನಿರೂಪಣೆ, ತಾಜಾ ಗುಣದಿಂದಾಗಿ ಸಿನಿಮಾ ಪ್ರೇಕ್ಷಕರನ್ನು ದೊಡ್ಡ ಮಟ್ಟದಲ್ಲಿ ತಲುಪಿತು. ಬೆಂಗಳೂರು ಸೇರಿದಂತೆ ರಾಜ್ಯದ ಇತರೆಡೆ ಕೂಡ ಜನರು ಚಿತ್ರವನ್ನು ಮೆಚ್ಚಿ ವೀಕ್ಷಿಸಿದರು. ‘ಪುಷ್ಪ’ ತೆಲುಗು ಚಿತ್ರದಲ್ಲಿ ಖಳನಾಗಿ ನಟಿಸಿದ್ದ ಧನಂಜಯ್‌ ಇಲ್ಲಿ ಹೀರೊ ಆಗಿ ಮಿಂಚಿದ್ದರು. ಲವ್‌ಸ್ಟೋರಿ ಜೊತೆ ಮಧ್ಯಮವರ್ಗದ ಕುಟುಂಬದ ಸೆಂಟಿಮೆಂಟ್‌ ಪ್ರೇಕ್ಷಕರಿಗೆ ಕನೆಕ್ಟ್‌ ಆಗಿದ್ದು ಸಿನಿಮಾ ಯಶಸ್ಸಿಗೆ ಕಾರಣ. ಥಿಯೇಟರ್‌ನಲ್ಲಿ ಯಶಸ್ಸು ಕಂಡ ಸಿನಿಮಾ ಇದೀಗ OTTಗೆ ಬರುತ್ತಿದೆ. VOOT Selectನಲ್ಲಿ ಜನವರಿ 26ರ ಗಣರಾಜ್ಯೋತ್ಸವಂದು ಸಿನಿಮಾ ಸ್ಟ್ರೀಮ್‌ ಆಗಲಿದೆ.

“ಇದು ನಾವು ಸ್ನೇಹಿತರೇ ಸೇರಿಕೊಂಡು ಮಾಡಿದ ಸಿನಿಮಾ. ಹಾಗಾಗಿ ನನಗೆ ತುಂಬಾ ವಿಶೇಷ ಪ್ರಯೋಗ. ದಶಕಗಳಿಂದ ನನ್ನ ಜೊತೆಗಿದ್ದ ಸ್ನೇಹಿತರು ಪಾತ್ರಧಾರಿಗಳಾಗಿ, ತಂತ್ರಜ್ಞರಾಗಿ ಸಿನಿಮಾಗೆ ಕೆಲಸ ಮಾಡಿದ್ದಾರೆ. ಮಧ್ಯಮವರ್ಗದ ಕುಟುಂಬದ ಯುವಕನ ಛಲ, ಪ್ರೀತಿಯ ಕತೆ, ತಾಯಿ ಸೆಂಟಿಮೆಂಟ್‌, ಸ್ನೇಹ ಸಂಬಂಧಗಳು… ಎಲ್ಲವೂ ಚಿತ್ರದಲ್ಲಿದ್ದು, ಬಹುಶಃ ಜನರು ಪಾತ್ರಗಳಲ್ಲಿ ತಮ್ಮನ್ನು ಕಂಡುಕೊಂಡರು ಎನಿಸುತ್ತದೆ. ಕೋವಿಡ್‌ನಿಂದಾಗಿ ಬಹಳಷ್ಟು ಜನರಿಗೆ ಥಿಯೇಟರ್‌ಗೆ ಬಂದು ಸಿನಿಮಾ ನೋಡಲು ಸಾಧ್ಯವಾಗಿಲ್ಲ. ಅವರೀಗ ಓಟಿಟಿಯಲ್ಲಿ ಸಿನಿಮಾ ವೀಕ್ಷಿಸಬಹುದು” ಎನ್ನುತ್ತಾರೆ ಧನಂಜಯ. ಅಮೃತಾ ಅಯ್ಯಂಗಾರ್‌ ಚಿತ್ರದ ನಾಯಕಿಯಾಗಿ ನಟಿಸಿದ್ದು, ರಂಗಾಯಣ ರಘು ಮತ್ತು ತಾರಾ ಪ್ರಮುಖ ಪಾತ್ರಗಳಲ್ಲಿದ್ದಾರೆ. ವಾಸುಕಿ ವೈಭವ್‌ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ.

Previous articleಪ್ರಯೋಗಶೀಲ ಚಿತ್ರಕಥೆ, ಕಮಲ್‌ರ ಅಪೂರ್ವ ಸಿನಿಮಾ ‘ವಿರುಮಾಂಡಿ’
Next article2022ಕ್ಕೆ ನೆಟ್‌ಫ್ಲಿಕ್ಸ್‌ನಲ್ಲಿ 39 ಹೊಸ ಸೀರೀಸ್‌; ಇವುಗಳ ಪೈಕಿ 25 ಕೊರಿಯನ್‌ ಡ್ರಾಮಾ

LEAVE A REPLY

Connect with

Please enter your comment!
Please enter your name here