ಕಾಲಿವುಡ್‌ನ ಖ್ಯಾತ ನಟ ಹಾಗೂ ನಿರ್ದೇಶಕ ಧನುಷ್‌ ಅವರ ‘ರಾಯನ್‌’ ಚಿತ್ರತಂಡ ಸಿಹಿ ಸುದ್ದಿ ಕೊಟ್ಟಿದೆ. ಧನುಷ್‌ ನಿರ್ದೇಶನದ 2ನೇ ಸಿನಿಮಾ ‘ರಾಯನ್‌’ ಚಿತ್ರಕ್ಕೆ ಸಂಬಂಧಿಸಿದಂತೆ ದೊಡ್ಡ ಅಪ್ಡೇಟ್‌ ಒಂದು ಸಿಕ್ಕಿದೆ.

ನಟನೆಯ ಜೊತೆಗೆ ಸಿನಿಮಾ ನಿರ್ದೇಶನಕ್ಕೂ ಕಾಲಿಟ್ಟಿರುವ ಧನುಷ್‌ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ರಾಯನ್‌’. ನಟ ಧನುಷ್‌ ಈ ಸಲ ಚಿತ್ರದಲ್ಲಿ ಮೂರು ದೊಡ್ಡ ಜವಾಬ್ದಾರಿಗಳನ್ನು ವಹಿಸಿಕೊಂಡಿದ್ದಾರೆ. ಅವರೇ ಸಿನಿಮಾಗೆ ಕಥೆ ಬರೆದು, ನಿರ್ದೇಶನ ಮಾಡುವುದರ ಜೊತೆಗೆ ಚಿತ್ರದಲ್ಲಿ ನಟಿಸುತ್ತಿದ್ದಾರೆ. 2017ರಲ್ಲಿ ತೆರೆಕಂಡ ‘ಪಾ ಪಾಂಡಿ’ ಚಿತ್ರದ ಮೂಲಕ ಧನುಷ್ ನಿರ್ದೇಶಕರಾಗಿ ಬಡ್ತಿ ಪಡೆದಿದ್ದರು. ರಾಯನ್‌ ಸಿನಿಮಾ ಅನೌನ್ಸ್‌ ಆದ ಆರಂಭದಲ್ಲಿ ಪೋಸ್ಟರ್‌ಗಳಿಂದಲೇ ಸಖತ್‌ ಸದ್ದು ಮಾಡಿತ್ತು ‘ರಾಯನ್‌’ ಚಿತ್ರ. ನಂತರದಲ್ಲಿ ಟೀಸರ್‌ ರಿಲೀಸ್‌ ಆಗಿತ್ತು. ಈಗ ಸಾಲು ಸಾಲು ಪೋಸ್ಟರ್‌ಗಳು ಬಿಡುಗಡೆ ಬಿಡುಗಡೆಯಾಗುತ್ತಿವೆ. ಧನುಷ್‌ ಸಖತ್‌ ರಗಡ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಧನುಷ್‌ ನಿರ್ದೇಶನ ಮಾಡುತ್ತಿರುವ ‘ರಾಯನ್‌’ ಸಿನಿಮಾ ಕುರಿತಾಗಿ ಮಾಹಿತಿಯೊಂದು ಈಗ ಹೊರ ಬಿದ್ದಿದೆ. ಖುದ್ದು ನಟನೇ ಒಂದು ವಿಷಯವನ್ನ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ತಾವೇ ಬರೆದ ಪಾತ್ರಗಳ ಜೊತೆ ನಿಂತಿರುವ ಪೋಸ್ಟರ್‌ ಒಂದನ್ನ ಶೇರ್‌ ಮಾಡಿದ್ದಾರೆ. ಜೊತೆಗೆ ಶೀಘ್ರದಲ್ಲೇ ಸಿನಿಮಾದ ಮೊದಲ ಹಾಡು ಬಿಡುಗಡೆಯಾಗಲಿದೆ ಎಂದು ಬರೆದುಕೊಂಡಿದ್ದಾರೆ. ಎ ಆರ್ ರೆಹಮಾನ್ ಸಂಗೀತ ಕೊಟ್ಟಿರುವ ಈ ಚಿತ್ರದ ಹಾಡಿನ ಬಗ್ಗೆ ನಿರೀಕ್ಷೆ ಕೊಂಚ ಹೆಚ್ಚಾಗಿಯೇ ಇದೆ. ಸನ್‌ ಪಿಕ್ಚರ್ಸ್‌ ನಿರ್ಮಾಣದ ‘ರಾಯನ್‌’ ಸಿನಿಮಾದ ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದೆಯಂತೆ. ಆದರೆ ಇಲ್ಲಿಯವರೆಗೂ ಒಂದು ಹಾಡೂ ಬಿಡುಗಡೆಯಾಗಿಲ್ಲ. ಟೀಸರ್‌ ನಂತರ ಪೋಸ್ಟರ್‌ಗಳನ್ನು ಮಾತ್ರ ಬಿಡುಗಡೆ ಮಾಡುತ್ತಿದೆ ಚಿತ್ರತಂಡ. ರಾಯನ್ ಚಿತ್ರದಲ್ಲಿ ಪ್ರಕಾಶ್ ರಾಜ್, ಸಂದೀಪ್ ಕಿಶನ್ ಹಾಗೂ ಕಾಳಿದಾಸ್ ಜಯರಾಮ್ ಅಭಿನಯಿಸಿದ್ದಾರೆ.

LEAVE A REPLY

Connect with

Please enter your comment!
Please enter your name here