ಸುಮನ್‌ ಕುಮಾರ್‌ ನಿರ್ದೇಶನದ ‘ರಘು ತಥಾ’ ಸಿನಿಮಾದ ಫಸ್ಟ್‌ಲುಕ್‌ ಪೋಸ್ಟರ್‌ ಮತ್ತು ಗ್ಲಿಂಪ್ಸಸ್‌ ಬಿಡುಗಡೆಯಾಗಿದೆ. ರಾಷ್ಟ್ರಪ್ರಶಸ್ತಿ ಪುರಸ್ಕೃತ ನಟಿ ಕೀರ್ತಿ ಸುರೇಶ್‌ ಪ್ರಮುಖ ಪಾತ್ರದಲ್ಲಿ ನಟಿಸಿರುವ ಚಿತ್ರವನ್ನು ಕನ್ನಡದ ಹೊಂಬಾಳೆ ಸಂಸ್ಥೆ ನಿರ್ಮಿಸುತ್ತಿದೆ.

ಕೀರ್ತಿ ಸುರೇಶ್ ಮುಖ್ಯಭೂಮಿಕೆಯಲ್ಲಿರುವ ‘ರಘು ತಥಾ’ ತಮಿಳು ಚಿತ್ರದ ಫಸ್ಟ್‌ಲುಕ್‌ ಪೋಸ್ಟರ್‌ ಮತ್ತು ಗ್ಲಿಂಪ್ಸಸ್‌ ಬಿಡುಗಡೆಯಾಗಿದೆ. ಈ ಚಿತ್ರದ ಮೂಲಕ ಮೊದಲ ಬಾರಿಗೆ ಹೊಂಬಾಳೆ films ಕಾಲಿವುಡ್‌ನಲ್ಲಿ ಸಿನಿಮಾ ನಿರ್ಮಾಣದಲ್ಲಿ ತೊಡಗಿಸಿಕೊಂಡಿದೆ. ಚಿತ್ರದಲ್ಲಿ ಮಹಿಳೆಯರ ಹಕ್ಕುಗಳು ಮತ್ತು ತನ್ನ ಪಾಲಿನ ಭೂಮಿಗಾಗಿ ಹೋರಾಟ ನಡೆಸುವ ಒಂಟಿ ಮಹಿಳೆಯ ಪಾತ್ರದಲ್ಲಿ ಕೀರ್ತಿ ಸುರೇಶ್‌ ಕಾಣಿಸಿಕೊಳ್ಳುತ್ತಿದ್ದಾರೆ. ಕೆ ಭಾಗ್ಯರಾಜ್ ಅವರು ನಿರ್ದೇಶಿಸಿ, ನಟಿಸಿದ್ದ ‘ಇಂದ್ರು ಪೊಯ್ ನಾಲೈ ವಾ’ (1981) ಜನಪ್ರಿಯ ಹಾಸ್ಯ ಚಿತ್ರದಿಂದ ‘ರಘು ತಥಾ’ ಸಿನಿಮಾ ಸ್ಫೂರ್ತಿ ಪಡೆದಿದೆ. ಈ ಚಿತ್ರಕ್ಕೆ ಇಳಯರಾಜ ಅವರು ಸಂಗೀತ ಸಂಯೋಜಿಸಿದ್ದರು. ಸಿನಿಮಾದಲ್ಲಿ ದೇವದರ್ಶಿನಿ, ಎಂ ಎಸ್‌ ಭಾಸ್ಕರ್‌, ರವೀಂದ್ರ ವಿಜಯ್‌ ಸೇರಿದಂತೆ ಅನೇಕರು ಕಾಣಿಸಿಕೊಳ್ಳಲಿದ್ದಾರೆ. ‘ಫರ್ಜಿ’, ತಾಪ್ಸೆ ಪನ್ನು ನಟಿಸಿರುವ ‘ಗೇಮ್‌ ಓವರ್‌’, ‘ಫ್ಯಾಮಿಲಿ ಮ್ಯಾನ್‌’ನಂತಹ ಚಿತ್ರಗಳಿಗೆ ಕಥೆ ಬರೆದಿರುವ ಸುಮನ್‌ ಕುಮಾರ್‌ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ವಿಜಯ್ ಕಿರಗಂದೂರು ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಸಿಯನ್‌ ರೊಲ್ಡನ್‌ ಸಂಗೀತ ಸಂಯೋಜನೆ, ಟಿ ಎಸ್‌ ಸುರೇಶ್‌ ಸಂಕಲನ, ಯಾಮಿನಿ ಯಗ್ನಮೂರ್ತಿ ಛಾಯಾಗ್ರಹಣವಿದೆ.

LEAVE A REPLY

Connect with

Please enter your comment!
Please enter your name here