2022ರಲ್ಲಿ ತೆರೆಕಂಡು ಬಾಕ್ಸಾಫೀಸನ್ನು ಲೂಟಿ ಮಾಡಿದ್ದ ಸಿನಿಮಾ ‘ವಿಕ್ರಮ್‌’. ಇಂತಹ ಚಿತ್ರವನ್ನ ನಿರ್ದೇಶನ ಮಾಡಿ ಸೈ ಎನಿಸಿಕೊಂಡಿರುವ ನಿರ್ದೇಶಕ ಲೋಕೇಶ್‌ ಕನಕರಾಜ್‌ ತಮ್ಮ ಹೊಸ ಸಿನಿಮಾ ಪ್ರಕಟಿಸಿದ್ದಾರೆ.

ಕಮಲ ಹಾಸನ್‌ ಅಭಿನಯದ ‘ವಿಕ್ರಮ್‌’ ಸಿನಿಮಾ ನಿರ್ದೇಶನ ಮಾಡಿರುವ ಡೈರೆಕ್ಟರ್‌ ಲೋಕೇಶ್‌ ಕನಕರಾಜ್‌ ತಮ್ಮ ಹೊಸ ಸಿನಿಮಾ ಅನೌನ್ಸ್‌ ಮಾಡಿದ್ದಾರೆ. ಸಿನಿಮಾಗೆ ‘ಬೆಂಜ್‌’ ಎಂದು ಶೀರ್ಷಿಕೆ ಕೊಟ್ಟಿದ್ದು, ಟೈಟಲ್‌ ಪೋಸ್ಟರ್‌ ಬಿಡುಗಡೆ ಮಾಡಿದ್ದಾರೆ. ಡೈರೆಕ್ಟರ್‌, ಕೊರಿಯೋಗ್ರಾಫರ್‌ ಹಾಗೂ ನಟನಾಗಿ ಹೆಸರು ಮಾಡಿರುವ ರಾಘವ ಲಾರೆನ್ಸ್‌ ಈ ಸಿನಿಮಾದ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ‘ಸುತ್ತ ಕಾದಲ್’ ಮತ್ತು ‘ಸುಂದರ್ ಸಿ’ ನಂತಹ ಚಿತ್ರಗಳ ಮೂಲಕ ಮುನ್ನಲೆಗೆ ಬಂದ ಬಕ್ಕಿಯರಾಜ್ ಕಣ್ಣನ್ ‘ಬೆಂಜ್‌’ ಚಿತ್ರಕ್ಕೆ ಆಕ್ಷನ್‌ ಕಟ್‌ ಹೇಳುತ್ತಿದ್ದಾರೆ.

‘ಪ್ರೀತಿಯ ಲಾರೆನ್ಸ್‌ ಅವರ ಜತೆ ಈ ಸಿನಿಮಾಗಾಗಿ ಕೈ ಜೋಡಿಸಿದ್ದು ತುಂಬಾ ಖುಷಿ ನೀಡಿದೆ. ನಮ್ಮ ತಂಡದ ಮೇಲೆ ಅವರು ಇಟ್ಟಿರುವ ನಂಬಿಕೆಗೆ ಧನ್ಯವಾದ’ ಎಂದು ನಿರ್ದೇಶಕ ಲೋಕೇಶ್‌ ಕನಕರಾಜ್‌ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಅಲ್ಲದೆ ಈ ಸಿನಿಮಾದಲ್ಲಿನ ತಾರಾಬಳಗದ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಲೋಕೇಶ್‌ ಕನಕರಾಜ್‌ ಅವರು ಈ ಸಿನಿಮಾ ನಿರ್ಮಾಣ ಮಾಡುವುದರ ಜೊತೆಗೆ ಕಥೆಯನ್ನೂ ಬರೆದಿದ್ದಾರೆ. ಕಮಲ ಹಾಸನ್‌ ಅವರ ‘ವಿಕ್ರಮ್‌’ ಸಿನಿಮಾ ಸೂಪರ್‌ ಹಿಟ್‌ ಆದ ನಂತರ ಪ್ರಕಟಿಸಿರುವ ‘ಬೆಂಜ್‌’ ಚಿತ್ರದ ಮೇಲೆ ಸಿನಿಪ್ರಿಯರಿಗೆ ಬೆಟ್ಟದಷ್ಟು ನಿರೀಕ್ಷೆ ಇದೆ.

LEAVE A REPLY

Connect with

Please enter your comment!
Please enter your name here