2022ರ ಆಸ್ಕರ್ ಪ್ರಶಸ್ತಿಗೆ ಭಾರತದಿಂದ ‘ಕೂಝಂಗಳ್‌’ ತಮಿಳು ಸಿನಿಮಾ ನಾಮನಿರ್ದೇಶನಗೊಂಡಿದೆ. ವಿಘ್ನೇಶ್ ಶಿವನ್ ಮತ್ತು ನಯನತಾರಾ ನಿರ್ಮಾಣದ ಚಿತ್ರವನ್ನು ವಿನೋದ್‌ರಾಜ್ ನಿರ್ದೇಶಿಸಿದ್ದಾರೆ.

ತೊಂಬತ್ನಾಲ್ಕನೇ ಅಕಾಡೆಮಿ ಪ್ರಶಸ್ತಿ ಸ್ಪರ್ಧೆಗೆ ಭಾರತದಿಂದ ‘ಕೂಝಂಗಳ್‌’ (ಪೆಬಲ್ಸ್‌) ತಮಿಳು ಸಿನಿಮಾ ಆಯ್ಕೆಯಾಗಿದೆ. ಕುಡುಕ ಗಂಡ, ಆತನ ಕಾಟ ತಡೆಯಲಾರದೆ ಮನೆ ಬಿಡುವ ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿರುವ ಆತನ ಪತ್ನಿ, ದೂರವಾದ ಪತ್ನಿಯನ್ನು ಪುತ್ರನ ಜೊತೆ ಸೇರಿ ಹುಡುಕುವ ಕುಡುಕ ಪತಿ… ಇಂಥದ್ದೊಂದು ಕಥಾಹಂದರವಿರುವ ಈ ಸಿನಿಮಾ ವಿಮರ್ಶಕರ ಅಪಾರ ಮೆಚ್ಚುಗೆಗೆ ಪಾತ್ರವಾಗಿದೆ. ನಿರ್ದೇಶಕ ವಿಘ್ನೇಶ್ ಶಿವನ್ ಮತ್ತು ನಟಿ ನಯನತಾರಾ ದಂಪತಿ ನಿರ್ಮಿಸಿರುವ ಈ ಚಿತ್ರವನ್ನು ಪಿ.ಎಸ್.ವಿನೋದ್‌ ರಾಜ್ ನಿರ್ದೇಶಿಸಿದ್ದಾರೆ. ಸಂಗೀತ ಸಂಯೋಜನೆ ಯುವನ್ ಶಂಕರ್ ರಾಜಾ.

“ಇಂಥದ್ದೊಂದು ಅವಕಾಶದ ಬಗ್ಗೆ ಯೋಚಿಸುವುದೇ ಹೆಮ್ಮೆಯ ಸಂಗತಿ. ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಯ ಹೊಸ್ತಿಲಲ್ಲಿದ್ದೇವೆ. ನಮ್ಮ ಬದುಕಿನ ಬಹುದೊಡ್ಡ ಖುಷಿಯಿದು” ಎಂದು ನಿರ್ದೇಶಕ ವಿಘ್ನೇಶ್ ಶಿವನ್‌ ಟ್ವೀಟ್ ಮಾಡಿದ್ದಾರೆ. 50ನೇ ರಾಟರ್‌ಡಾಮ್‌ ಸಿನಿಮೋತ್ಸವದಲ್ಲಿ ‘ಕೂಝಂಗಳ್‌’ ಅತ್ಯುತ್ತಮ ಚಿತ್ರ ವಿಭಾಗದಲ್ಲಿ ಟೈಗರ್ ಅವಾರ್ಡ್‌ ಗೌರವಕ್ಕೆ ಪಾತ್ರವಾಗಿತ್ತು. ಲಾಸ್‌ ಏಂಜಲೀಸ್‌ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿದ್ದ ಚಿತ್ರ ಇದೀಗ ಆಸ್ಕರ್‌ಗೆ ಭಾರತದಿಂದ ಅಫಿಷಿಯಲ್ ಎಂಟ್ರಿ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. 2022ರ ಮಾರ್ಚ್‌ 27ರಂದು ಆಸ್ಕರ್ ಪ್ರಶಸ್ತಿ ಸಮಾರಂಭ ನಡೆಯಲಿದೆ.

LEAVE A REPLY

Connect with

Please enter your comment!
Please enter your name here