‘ಕ್ರಶ್‌’ ಕಿರುಚಿತ್ರದ ಮೂಲಕ ಗಮನ ಸೆಳೆದಿದ್ದ ಸತೀಶ್‌ ವಜ್ರ ‘ಲಗೋರಿ’ ಟೆಲಿಫಿಲ್ಮ್‌ನೊಂದಿಗೆ ಮರಳಿದ್ದಾರೆ. ಯುವಿ ಹರೀಶ್‌ ಗೌಡ ನಿರ್ದೇಶನದ ಈ ಲವ್‌ಸ್ಟೋರಿಯಲ್ಲಿ ದೀಪಿಕಾ ಆರಾಧ್ಯ ಮತ್ತು ಸೋನು ಶ್ರೀನಿವಾಸ್‌ ಗೌಡ ನಾಯಕಿಯರು.

ಈ ಹಿಂದೆ ‘ಕ್ರಶ್‌’ ಕಿರುಚಿತ್ರ ಮಾಡಿದ್ದ ಯುವ ಪ್ರತಿಭೆ ಸತೀಶ್‌ ವಜ್ರ ಮತ್ತೊಂದು ಕಿರುಚಿತ್ರದೊಂದಿಗೆ ಮರಳಿದ್ದಾರೆ. ಈ ಬಾರಿ ಪ್ರೇಮಕಥಾಹಂದರದ ‘ಲಗೋರಿ’ ಟೆಲಿ ಫಿಲ್ಮ್ ಮೂಲಕ ಪ್ರೇಕ್ಷಕರನ್ನು ಸತೀಶ್ ರಂಜಿಸುತ್ತಿದ್ದಾರೆ. ಸತೀಶ್ ವಜ್ರ ನಾಯಕನಾಗಿ ನಟಿಸಿರುವ ಟೆಲಿ ಫಿಲ್ಮ್‌ನಲ್ಲಿ ದೀಪಿಕಾ ಆರಾಧ್ಯ ಹಾಗೂ ಸೋನು ಶ್ರೀನಿವಾಸ್ ಗೌಡ ನಾಯಕಿಯರಾಗಿ ಬಣ್ಣ ಹಚ್ಚಿದ್ದಾರೆ. ಯುವಿ ಹರೀಶ್ ಗೌಡ ನಿರ್ದೇಶನ, ಅಕ್ಷಯ್ ಆರ್. ರಿಷಬ್ ಮ್ಯೂಸಿಕ್, ಸತೀಶ್ ರಾಜೇಂದ್ರನ್ ಕ್ಯಾಮೆರಾ ವರ್ಕ್ ಇದೆ. ಕೀರ್ತಿರಾಜ್ ಡಿ. ಎಡಿಟಿಂಗ್ ಜವಾಬ್ದಾರಿ ಹೊತ್ತಿದ್ದಾರೆ. ಡ್ರೀಮ್ ಹಂಟರ್ ಪ್ರೊಡಕ್ಷನ್ ಬ್ಯಾನರ್‌ನಡಿ ಸಂತೋಷ್ ಸಿ. ಗೌಡ ‘ಲಗೋರಿ’ಗೆ ಬಂಡವಾಳ ಹೂಡಿದ್ದಾರೆ. ಬೆಂಗಳೂರು ಹಾಗೂ ಮಂಡ್ಯ ಸುತ್ತಮುತ್ತ ಶೂಟಿಂಗ್ ನಡೆಸಲಾಗಿದೆ. 48 ನಿಮಿಷದ ಪ್ರಾಮಿಸಿಂಗ್‌ ‘ಲಗೋರಿ’ ಸತೀಶ್ ವಜ್ರ ಯೂಟ್ಯೂಬ್‌ನಲ್ಲಿ ವೀಕ್ಷಕರಿಗೆ ಸಿಗುತ್ತದೆ.

Previous articleಸೆಟ್ಟೇರಿದ ‘ವಾಮನ’; ಅಖಾಡಕ್ಕೆ ಧುಮುಕಿದ ಶೋಕ್ದಾರ್‌ ಧನ್ವೀರ್‌
Next article‘ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ’ ಟ್ರೈಲರ್‌; ದಿಗಂತ್‌ ಸಿನಿಮಾ ಶೀಘ್ರ ತೆರೆಗೆ

LEAVE A REPLY

Connect with

Please enter your comment!
Please enter your name here