ನಾ ಸುಸೀಂತಿರನ್‌ ನಿರ್ದೇಶನದ ‘ವಲ್ಲಿ ಮಾಯಿಲ್‌’ ತಮಿಳು ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ಚಿತ್ರದಲ್ಲಿ ವಿಜಯ್‌ ಆಂಟೋನಿ ಪೊಲೀಸ್‌ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದ ಮೂಲಕ ‘ಜಾತಿ ರತ್ನಲು’ ಚಿತ್ರ ಖ್ಯಾತಿಯ ಫರಿಯಾ ಅಬ್ದುಲ್ಲಾ ಅವರು ಕಾಲಿವುಡ್‌ಗೆ ಪದಾರ್ಪಣೆ ಮಾಡುತ್ತಿದ್ದಾರೆ.

ವಿಜಯ್ ಆಂಟೋನಿ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ವಲ್ಲಿ ಮಾಯಿಲ್‌’ ತಮಿಳು ಚಿತ್ರದ ಟೀಸರ್‌ ಬಿಡುಗಡೆಯಾಗಿದೆ. ಈ ಸಿನಿಮಾವನ್ನು ನಾ ಸುಸೀಂತಿರನ್ ನಿರ್ದೇಶಿಸಿದ್ದಾರೆ. ಟೀಸರ್‌, ಶಕ್ತಿ ಸರವಣನ್ (ವಿಜಯ್ ಆಂಟೋನಿ) ಎಂಬ ಪೊಲೀಸ್ ಅಧಿಕಾರಿಯ ಸುತ್ತ ಸುತ್ತುತ್ತದೆ ಹಾಗೂ ಪೊಲೀಸ್ ಜಗತ್ತನ್ನು ಪರಿಚಯಿಸಿದೆ. ಶಕ್ತಿ ಸರವಣನ್ ಆಗಿ ವಿಜಯ್‌ ಸಮಾಜದ ಅವ್ಯವಸ್ಥೆ ಮತ್ತು ದಬ್ಬಾಳಿಕೆಯ ವಿರುದ್ಧ ಹೋರಾಡುವ ದಕ್ಷ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದ ಮೂಲಕ ‘ಜಾತಿ ರತ್ನಲು’ ಚಿತ್ರ ಖ್ಯಾತಿಯ ಫರಿಯಾ ಅಬ್ದುಲ್ಲಾ ಅವರು ಕಾಲಿವುಡ್‌ಗೆ ಪದಾರ್ಪಣೆ ಮಾಡುತ್ತಿದ್ದಾರೆ.

ಸತ್ಯರಾಜ್, ತಂಬಿ ರಾಮಯ್ಯ, ಭಾರತಿರಾಜ, ಮನೋಜ್ ಭಾರತಿರಾಜ, ಸುನಿಲ್, ರೆಡಿನ್ ಕಿಂಗ್‌ಸ್ಲೀ, ಕಣಿ, ಜಿ ಪಿ ಮುತ್ತು ಮತ್ತು ಅರಂತಂಗಿ ನಿಶಾ ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿದ್ದಾರೆ. ಚಿತ್ರವನ್ನು D N ತಾಯ್ ಸರವಣನ್ ಅವರ Nallusamy Pictures ಬ್ಯಾನರ್‌ ಅಡಿಯಲ್ಲಿ ನಿರ್ಮಿಸಲಾಗುತ್ತಿದೆ. ವಿಜಯ್ ಕೆ ಚಕ್ರವರ್ತಿ ಮತ್ತು ವಾಂಜಿನಾಥನ್ ಮುರುಗೇಶನ್ ಅವರ ಛಾಯಾಗ್ರಹಣ, ಡಿ ಇಮ್ಮಾನ್ ಸಂಗೀತ ಸಂಯೋಜನೆ ಚಿತ್ರಕ್ಕಿದೆ. ವಿಜಯ್ ಆಂಟೋನಿ ಅವರು ‘ಅಗ್ನಿ ಸಿರಗುಗಲ್’, ‘ರೋಮಿಯೋ’, ‘ಹಿಟ್ಲರ್’ ಮತ್ತು ‘ಮಜೈ ಪಿಡಿಕಥಾ ಮಾನಿತನ್’ ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

LEAVE A REPLY

Connect with

Please enter your comment!
Please enter your name here