‘ಶ್ರೀಮದ್‌ ರಾಮಾಯಣ’ ಪೌರಾಣಿಕ ಮೆಗಾ ಹಿಂದಿ ಧಾರಾವಾಹಿ 2024ರ ಜನವರಿಯಿಂದ ಸೋನಿ ಚಾನೆಲ್‌ನಲ್ಲಿ ಮೂಡಿಬರಲಿದೆ. Swasthik Productions ಬ್ಯಾನರ್‌ ಅಡಿಯಲ್ಲಿ ಸಿದ್ದಾರ್ಥ್‌ ಕುಮಾರ್‌ ತಿವಾರಿ ನಿರ್ಮಿಸಿರುವ ಸರಣಿಯಿದು.

ಸಿದ್ದಾರ್ಥ್‌ ಕುಮಾರ್‌ ತಿವಾರಿ ನಿರ್ಮಾಣದಲ್ಲಿ ತಯಾರಾಗಿರುವ ‘ಶ್ರೀಮದ್‌ ರಾಮಾಯಣ’ ಹಿಂದಿ ಧಾರಾವಾಹಿಯನ್ನು Sony ವಾಹಿನಿಯು 2024 ಜನವರಿಯಿಂದ ಪ್ರಸಾರ ಮಾಡಲಿದೆ. ವಾಹಿನಿಯು ತನ್ನ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಧಾರಾವಾಹಿಯ ಪ್ರೋಮೋ ಹಂಚಿಕೊಂಡಿದ್ದು, ಇದರಲ್ಲಿ ಭರತನು ಶ್ರೀರಾಮನ ಪಾದುಕೆಗಳನ್ನು ಹಿಡಿದು ಕಾಯುತ್ತಿರುವ ದೃಶ್ಯಗಳನ್ನು ಕಾಣಬಹುದು. ವಾಲ್ಮೀಕಿ ವಿರಚಿತ ರಾಮಾಯಣವನ್ನು ಆಧರಿಸಿರುವ ಈ ಧಾರಾವಾಹಿಯಲ್ಲಿ ಶ್ರೀರಾಮ, ಸೀತೆ, ಹನುಮಂತ, ಲಂಕೆ, ರಾವಣ ಸೇರಿದಂತೆ ಅನೇಕ ವಿಚಾರಗಳಿವೆ. ‘ರಾಮಾಯಣʼ ಕಥೆ ಆಧರಿಸಿದ ಧಾರಾವಾಹಿ 1987ರಲ್ಲಿ ದೂರದರ್ಶನದಲ್ಲಿ ಪ್ರಸಾರವಾಗಿತ್ತು. ರಮಾನಂದ ಸಾಗರ್‌ ನಿರ್ದೇಶನದ ಈ ಧಾರಾವಾಹಿ ಇಂದಿಗೂ ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. ಈಗ ‘ರಾಮಾಯಣ’ ಕುರಿತು ಮತ್ತೊಂದು ಹೊಸ ಧಾರಾವಾಹಿ ಕಿರುತೆರೆಯಲ್ಲಿ ಪ್ರಸಾರವಾಗಲಿದೆ.

2024ರ ಜನವರಿಯಿಂದ ‘ಶ್ರೀಮದ್‌ ರಾಮಾಯಣ’ Sony Entertainmentsನಲ್ಲಿ ಪ್ರಸಾರ ಆರಂಭಿಸಲಿದೆ. ಈಗಾಗಲೇ ವಾಹಿನಿಯು ಧಾರಾವಾಹಿಯ ಟೀಸರ್‌ ಹಂಚಿಕೊಂಡಿದ್ದು ಪ್ರೇಕ್ಷಕರು ಹೊಸ ಧಾರಾವಾಹಿ ವೀಕ್ಷಿಸಲು ಕಾಯುತ್ತಿದ್ದಾರೆ. ಟೀಸರ್‌ಗೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈವರೆಗೂ ‘ರಾಮಾಯಣ’ ಕುರಿತಾದ ಅನೇಕ ಧಾರಾವಾಹಿಗಳು, ಸಿನಿಮಾಗಳು ತಯಾರಾಗಿವೆ ಹಾಗೂ ತಯಾರಾಗುತ್ತಿವೆ. ಈ ಧಾರಾವಾಹಿಯನ್ನು Swasthik Productions ಬ್ಯಾನರ್‌ ಅಡಿಯಲ್ಲಿ ಸಿದ್ದಾರ್ಥ್‌ ಕುಮಾರ್‌ ತಿವಾರಿ ನಿರ್ಮಿಸುತ್ತಿದ್ದಾರೆ. ತಿವಾರಿ ಇದುವರೆಗೂ Star ಸುವರ್ಣದಲ್ಲಿ ಪ್ರಸಾರವಾದ ‘ಮಹಾಭಾರತ’, ‘ರಾಧಾಕೃಷ್ಣ’ ಮತ್ತು ‘ಸೂರ್ಯಪುತ್ರ ಕರ್ಣ್’, Star ಭಾರತ್‌ನ ‘ರಾಮ್‌ ಸಿಯಾ ಕೆ ಲವ್‌ ಕುಶ್‌’ ಸೇರಿದಂತೆ ಅನೇಕ ಪೌರಾಣಿಕ ಧಾರಾವಾಹಿಗಳನ್ನು ನಿರ್ಮಿಸಿದ್ದಾರೆ. ಈ ಧಾರಾವಾಹಿ ಪಾತ್ರಗಳ ಬಗ್ಗೆ ವಾಹಿನಿಯು ಶೀಘ್ರದಲ್ಲೇ ಮಾಹಿತಿ ಹಂಚಿಕೊಳ್ಳಲಿದೆ.

LEAVE A REPLY

Connect with

Please enter your comment!
Please enter your name here