ಫೊರ್ಬ್ಸ್‌ ಮ್ಯಾಗಜಿನ್‌ನಲ್ಲಿ ದಕ್ಷಿಣದ ತಾರೆಯರಾದ ನಯನತಾರಾ, ಯಶ್‌ ಮತ್ತು ದುಲ್ಕರ್ ಸಲ್ಮಾನ್‌ ಕುರಿತ ಕವರ್ ಸ್ಟೋರಿಗಳಿವೆ. ಕವರ್ ಪೇಜ್‌ನಲ್ಲಿ ಮಿಂಚಿರುವ ಯಶ್‌ ಅವರಿಗೆ ಸೋಷಿಯಲ್ ಮೀಡಿಯಾದಲ್ಲಿ ಅಭಿನಂದನೆಗಳು ಸಂದಿವೆ.

ಪ್ರತಿಷ್ಠಿತ ಬ್ಯುಸಿನೆಸ್ ಮ್ಯಾಗಜಿನ್‌ ‘ಫೋರ್ಬ್ಸ್‌’ ಈ ಬಾರಿಯ ವಾರ್ಷಿಕ ಸಂಚಿಕೆಯಲ್ಲಿ ಸಿನಿಮಾ ಮತ್ತು ಸೂಪರ್‌ಸ್ಟಾರ್ಸ್‌ಗಳ ಕುರಿತ ವರದಿಯಿದೆ. ಸಾಮಾನ್ಯವಾಗಿ ಪತ್ರಿಕೆಯಲ್ಲಿ ಬಾಲಿವುಡ್‌ ಕುರಿತಂತೆ ಹೆಚ್ಚಾಗಿ ಬರೆಯುತ್ತಿದ್ದರು. ಇದೀಗ ದಕ್ಷಿಣ ಭಾರತದ ಸಿನಿಮಾರಂಗಗಳ ಮೇಲೆ ಬೆಳಕುಚೆಲ್ಲಿದ್ದಾರೆ. ಮ್ಯಾಗಜಿನ್‌ ಕವರ್‌ ಪೇಜ್‌ನಲ್ಲಿ ನಟ ಯಶ್‌ರನ್ನು ಫೋಕಸ್ ಮಾಡಿದ್ದಾರೆ. ಈ ಗೌರವ ಪಡೆದ ಮೊದಲ ಕನ್ನಡ ನಟ ಎನ್ನುವ ಹೆಗ್ಗಳಿಕೆಗೆ ಯಶ್ ಪಾತ್ರರಾಗಿದ್ದಾರೆ. ಮೈಸೂರಿನ ಮಧ್ಯಮವರ್ಗದ ಕುಟುಂಬದಲ್ಲಿ ಬೆಳೆದ ಯಶ್‌ ಹೇಗೆ ಪ್ಯಾನ್ ಇಂಡಿಯಾ ಹೀರೋ ಆಗಿ ಬೆಳೆದರು ಎನ್ನುವ ಬಗ್ಗೆ ಪತ್ರಿಕೆಯಲ್ಲಿ ವರದಿಯಿದೆ.

ಫೋರ್ಬ್ಸ್‌ನ ಈ ಸಂಚಿಕೆಯಲ್ಲಿ ಇನ್‌ಸ್ಟಾಗ್ರಾಂನ ಮೂವತ್ತು ದಕ್ಷಿಣ ಭಾರತದ ಇನ್‌ಫ್ಲ್ಯುಯೆನ್ಶಿಯಲ್‌ ನಟ-ನಟಿಯರನ್ನು ಪಟ್ಟಿ ಮಾಡಲಾಗಿದೆ. ಮೂರು ಕವರ್ ಸ್ಟೋರಿಗಳಿವೆ. ಬಹುಭಾಷಾ ನಟಿ ನಯನತಾರಾ, ಓಟಿಟಿ ಪ್ಲಾಟ್‌ಫಾರ್ಮ್‌ನ ಜನಪ್ರಿಯ ನಟ ಮಲಯಾಳಂನ ದುಲ್ಕರ್ ಸಲ್ಮಾನ್‌ ಮತ್ತು ಕನ್ನಡ ನಟ ಯಶ್ ಕುರಿತು ಕವರ್ ಸ್ಟೋರಿಗಳಿವೆ. ಫೋರ್ಬ್ಸ್‌ ಕವರ್‌ನಲ್ಲಿ ಮಿಂಚಿರುವ ಯಶ್‌ ಕುರಿತು ಅವರ ಅಭಿಮಾನಿಗಳು ಹೆಮ್ಮೆ ಪಟ್ಟಿದ್ದಾರೆ. ಹಲವು ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಮ್ಯಾಗಜಿನ್ ಕವರ್ ಪೇಜ್‌ ಹಾಕಿಕೊಂಡು ಯಶ್‌ರನ್ನು ಅಭಿನಂದಿಸಿದ್ದಾರೆ.

LEAVE A REPLY

Connect with

Please enter your comment!
Please enter your name here