ಲೀಗಲ್‌ – ಡ್ರಾಮಾ ‘ದಿ ಜಡ್ಜ್‌ಮೆಂಟ್‌’ ಸಿನಿಮಾದ ಪಬ್‌ ಸಾಂಗ್‌ಗೆ ದಿಗಂತ್‌ ಮತ್ತು ಧನ್ಯ ರಾಮಕುಮಾರ್‌ ಹೆಜ್ಜೆ ಹಾಕಿದ್ದಾರೆ. ಪ್ರಮೋದ್‌ ಮರವಂತೆ ರಚನೆಯ ಈ ಹಾಡಿಗೆ ಅನೂಪ್‌ ಸಿಳೀನ್‌ ಸಂಗೀತ ಸಂಯೋಜಿಸಿದ್ದು, ರಾಮ್‌ಕಿರಣ್‌ ಮತ್ತು ತಂಡದವರು ನೃತ್ಯ ಸಂಯೋಜಿಸಿದ್ದಾರೆ.

ಗುರುರಾಜ ಕುಲಕರ್ಣಿ ನಿರ್ದೇಶನದ ‘ದಿ ಜಡ್ಜ್‌ಮೆಂಟ್‌’ ಸಿನಿಮಾಗೆ ಪಬ್‌ ಸಾಂಗ್‌ವೊಂದನ್ನು ಚಿತ್ರಿಸಿಕೊಳ್ಳಲಾಗಿದೆ. ಚಿತ್ರದ ಮುಖ್ಯಭೂಮಿಕೆಯಲ್ಲಿ ನಟಿಸಿರುವ ದಿಗಂತ್‌ ಮತ್ತು ಧನ್ಯ ರಾಮಕುಮಾರ್‌ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಅಶ್ವಿನ್‌, ಸುಶೀಲ್‌ ನಾಗ್‌, ಸುವೀಷ್‌ ಹಾಗೂ ಸುಮಾರು 75 ನೃತ್ಯಕಲಾವಿದರು ಮತ್ತು 50 ಸಹಕಲಾವಿದರು ಪಾಲ್ಗೊಂಡ ಈ ಹಾಡನ್ನು ಅದ್ಧೂರಿಯಾಗಿ ಚಿತ್ರಿಸಲಾಗಿದೆ. ಪ್ರಮೋದ್‌ ಮರವಂತೆ ರಚನೆಯ ಈ ಹಾಡಿಗೆ ಅನೂಪ್‌ ಸಿಳೀನ್‌ ಸಂಗೀತ ಸಂಯೋಜಿಸಿದ್ದಾರೆ. ಹೊಸತನದ ಬೀಟ್‌ನ ಈ ಹಾಡಿಗಾಗಿ, ಬಾಲಿವುಡ್‌ನಿಂದ ಊರ್ವಶಿ ಮತ್ತು ಗೋವಾದಿಂದ ಸಾನಿಯಾ ಅವರನ್ನು, ಸಿನಿಮಾ ತಂಡ ವಿಶೇಷವಾಗಿ ಆಹ್ವಾನಿಸಿದೆ. ರಾಮ ಕಿರಣ್‌ ಮತ್ತು ತಂಡ ಈ ಹಾಡಿಗೆ ನೃತ್ಯ ಸಂಯೋಜಿಸಿದೆ.

‘ದ ಜಡ್ಜ್‌ಮೆಂಟ್‌’ ಲೀಗಲ್ – ಥ್ರಿಲ್ಲರ್ ಜಾನರ್‌ ಸಿನಿಮಾ. ಇಂದಿನ ಪ್ರಸ್ತುತ ವಿದ್ಯಮಾನಗಳನ್ನು, ಘಟನೆಗಳನ್ನು ಆಧಾರವಾಗಿಟ್ಟುಕೊಂಡು ಕತೆ ಹೆಣೆಯಲಾಗಿದೆ. ಈ ಸಿನಿಮಾ ಪ್ರೇಕ್ಷಕರಿಗೆ ಹೊಸ ಅನುಭವ ಕೊಡಲಿದೆ ಎನ್ನುತ್ತಾರೆ ಚಿತ್ರನಿರ್ದೇಶಕ ಗುರುರಾಜ ಕುಲಕರ್ಣಿ. ವಿ ರವಿಚಂದ್ರನ್‌, ದಿಗಂತ್ ಮಂಚಾಲೆ, ಮೇಘನಾ ಗಾಂವ್ಕರ್, ಧನ್ಯಾ ರಾಮಕುಮಾರ್, ಲಕ್ಷ್ಮೀ ಗೋಪಾಲಸ್ವಾಮಿ, ಟಿ ಎಸ್ ನಾಗಾಭರಣ, ಪ್ರಕಾಶ ಬೆಳವಾಡಿ, ಕೃಷ್ಣ ಹೆಬ್ಬಾಳೆ, ರಂಗಾಯಣ ರಘು, ರಾಜೇಂದ್ರ ಕಾರಂತ್, ಸುಜಯ್ ಶಾಸ್ತ್ರೀ ಚಿತ್ರದ ತಾರಾಬಳಗದಲ್ಲಿದ್ದಾರೆ. ಪಿ ಕೆ ಎಚ್ ದಾಸ್ ಛಾಯಾಗ್ರಹಣ, ಕೆಂಪರಾಜು ಬಿ ಎಸ್ ಸಂಕಲನ, ರವಿವರ್ಮ ಸಾಹಸ ನಿರ್ದೇಶನ, ರೂಪೇಂದ್ರ ಆಚಾರ್ ಕಲಾ ನಿರ್ದೇಶನ ಚಿತ್ರಕ್ಕಿದೆ. ಎಂ ಎಸ್ ರಮೇಶ್ ಸಂಭಾಷಣೆ ಬರೆದಿದ್ದಾರೆ.

LEAVE A REPLY

Connect with

Please enter your comment!
Please enter your name here