ಫರ್ಹನ್‌ ಅಖ್ತರ್‌ ಕತೆ ಬರೆದು ನಿರ್ದೇಶಿಸಲಿರುವ ‘ಡಾನ್‌ 3’ ಹಿಂದಿ ಸಿನಿಮಾದ ಟೈಟಲ್‌ ಟೀಸರ್‌ ಬಿಡುಗಡೆಯಾಗಿದೆ. ‘ಡಾನ್‌’ ಫ್ರಾಂಚೈಸ್‌ನ ಮೂರನೇ ಸಿನಿಮಾದಲ್ಲಿ ರಣವೀರ್‌ ಸಿಂಗ್‌ ನಟಿಸುತ್ತಿದ್ದಾರೆ. ಈ ಸಿನಿಮಾ 2025ರಲ್ಲಿ ತೆರೆಕಾಣಲಿದೆ.

‘ಮಲಗಿರುವ ಸಿಂಹ ಯಾವಾಗ ಎಚ್ಚರಗೊಳ್ಳುತ್ತದೆ? ಎಲ್ಲರೂ ಅದನ್ನು ತಿಳಿಯಲು ಬಯಸುತ್ತಾರೆ. ಅವರಿಗೆ ಹೇಳಿ ನಾನು ಇಲ್ಲಿದ್ದೇನೆ ಎಂದು. ನಾನು ಏನು ಮಾಡಿದ್ದೇನೆ ಎಂಬುದನ್ನು ನಿಮಗೆ ತೋರಿಸಲು ಬಂದಿದ್ದೇನೆ. ಸಾವಿನೊಂದಿಗೆ ಸರಸವಾಡಿಯೂ ನಾನೇ ಗೆಲ್ಲುತ್ತೇನೆ. 11 ರಾಷ್ಟ್ರಗಳ ಪೊಲೀಸರು ನನ್ನನ್ನು ಹುಡುಕುತ್ತಿದ್ದಾರೆ. ನಾನು ಯಾರು ಗೊತ್ತಾ? ಮೈ ಹೂ ಡಾನ್‌!’ ಎನ್ನುವ ಸಂಭಾಷಣೆಯ ಟೀಸರ್‌ ಮೂಲಕ ‘ಡಾನ್‌ 3’ ಹಿಂದಿ ಸಿನಿಮಾದಲ್ಲಿನ ರಣವೀರ್‌ ಸಿಂಗ್‌ ಲುಕ್‌ ರಿವೀಲ್‌ ಆಗಿದೆ. ಈ ಮೂಲಕ ಜನಪ್ರಿಯ ‘ಡಾನ್‌’ ಫ್ರಾಂಚೈಸ್‌ನ ಮೂರನೇ ಚಿತ್ರಕ್ಕೆ ಚಾಲನೆ ಸಿಕ್ಕಿದೆ.

1978ರಲ್ಲಿ ಬಿಗ್‌ ಬಿ ಅಮಿತಾಬ್‌ ಬಚ್ಚನ್‌ ‘ಡಾನ್‌’ ಪಾತ್ರ ನಿರ್ವಹಿಸಿದ್ದರು. 2011ರಲ್ಲಿ ಬಿಡುಗಡೆಯಾಗಿದ್ದ ‘ಡಾನ್‌ 2’ ಚಿತ್ರದಲ್ಲಿ ಶಾರುಖ್‌ ಖಾನ್‌, ಪ್ರಿಯಾಂಕಾ ಚೋಪ್ರಾ, ದೀಪಿಕಾ ಪಡುಕೋಣೆ, ಜಾಕ್ವಲೀನ್‌ ಫರ್ನಾಡಿಸ್‌, ಕುನಾಲ್‌ ಕಪೂರ್ ಅಭಿನಯಿಸಿದ್ದರು. ಈ ಸಿನಿಮಾ ದೊಡ್ಡ ಯಶಸ್ಸು ಕಂಡಿತ್ತು. ಇದೀಗ ಫರ್ಹನ್‌ ‘ಡಾನ್‌ 3’ ಆರಂಭಿಸಿದ್ದಾರೆ. ಫರ್ಹಾನ್‌ ಅಖ್ತರ್‌ ಮತ್ತು ರಿತೇಶ್‌ ಸಿದ್ವಾನಿ ನಿರ್ಮಿಸುತ್ತಿರುವ ಚಿತ್ರವನ್ನು ಫರ್ಹನ್‌ ಅಖ್ತರ್‌ ನಿರ್ದೇಶಿಸುತ್ತಿದ್ದಾರೆ. ಪ್ರೀ ಪ್ರೊಡಕ್ಷನ್‌ ಕೆಲಸಗಳು ಶುರುವಾಗಿದ್ದು ಸದ್ಯದಲ್ಲೇ ಶೂಟಿಂಗ್‌ ಶುರುವಾಗಲಿದೆ. ನಿರ್ದೇಶಕ ಫರ್ಹಾನ್‌ ಅಖ್ತರ್‌ ತಮ್ಮ ಟ್ವಿಟರ್‌ ಖಾತೆಯಲ್ಲಿ, ‘A new era of Don begins in 2025, watch this space’ ಎಂದು ಪತ್ರವೊಂದನ್ನು ಹಂಚಿಕೊಂಡಿದ್ದಾರೆ. 2025ರಲ್ಲಿ ಸಿನಿಮಾ ತೆರೆಕಾಣಲಿದೆ.

Previous article‘ಆಯಿರತೊನ್ನು ನುಣಕಲ್’ ಟ್ರೈಲರ್‌ | ಥಾಮರ್‌ ಟಿ ವಿ ನಿರ್ದೇಶನದ ಮಲಯಾಳಂ ಸಿನಿಮಾ
Next article‘ದಿ ಜಡ್ಜ್‌ಮೆಂಟ್‌’ | ಪಬ್‌ ಸಾಂಗ್‌ನಲ್ಲಿ ದಿಗಂತ್‌ ಮತ್ತು ಧನ್ಯ ರಾಮಕುಮಾರ್‌

LEAVE A REPLY

Connect with

Please enter your comment!
Please enter your name here