ಸಾಯಿ ಧರಮ್‌ ತೇಜ್‌ ಮತ್ತು ಸ್ವಾತಿ ರೆಡ್ಡಿ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿರುವ ‘ದಿ ಸೋಲ್‌ ಆಫ್‌ ಸತ್ಯ’ ಮ್ಯೂಸಿಕಲ್‌ ತೆಲುಗು ಕಿರುಚಿತ್ರದ ಟೀಸರ್‌ ಬಿಡುಗಡೆಯಾಗಿದೆ. ನವೀನ್‌ ವಿಜಯಕೃಷ್ಣ ನಿರ್ದೇಶನದ ದೇಶಭಕ್ತಿ ಸಾರುವ ಕಿರುಚಿತ್ರ ಆಗಸ್ಟ್‌ 15ರಂದು ಬಿಡುಗಡೆಯಾಗಲಿದೆ.

ನಟ ಸಾಯಿ ಧರಮ್‌ ತೇಜ್‌ ಮತ್ತು ಸ್ವಾತಿ ರೆಡ್ಡಿ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿರುವ ‘ದಿ ಸೋಲ್‌ ಆಫ್‌ ಸತ್ಯ’ (The Soul Of Sathya) ಮ್ಯೂಸಿಕಲ್‌ ತೆಲುಗು ಕಿರುಚಿತ್ರದ ಪ್ರೋಮೋ ಟೀಸರ್‌ ಬಿಡುಗಡೆಯಾಗಿದೆ. ನಟ, ರಾಜಕಾರಣಿ ನರೇಶ್ ಅವರ ಪುತ್ರ ನವೀನ್ ವಿಜಯಕೃಷ್ಣ ಈ ಕಿರುಚಿತ್ರ ನಿರ್ದೇಶಿಸುತ್ತಿದ್ದಾರೆ. ಚಿತ್ರದ ಹಾಡು ಇದೇ ಆಗಸ್ಟ್‌ 15ರ ಸ್ವಾತಂತ್ರ್ಯ ದಿನಾಚರಣೆಯಂದು ಬಿಡುಗಡೆಯಾಗಲಿದೆ. ಕಿರುಚಿತ್ರದ ಪ್ರೋಮೋ ಟೀಸರ್ ಸಾಯಿ ಧರಮ್ ತೇಜ್ ಮತ್ತು ಸ್ವಾತಿ ರೆಡ್ಡಿ ಮದುವೆಯಾಗುತ್ತಿರುವ ಸನ್ನಿವೇಶದ ಮೂಲಕ ತೆರೆದುಕೊಳ್ಳುತ್ತದೆ. ಆ ದಂಪತಿಗಳು ಅನ್ನೋನ್ಯವಾಗಿ ಜೀವನ ಸಾಗಿಸುತ್ತಿರುವ ದೃಶ್ಯಗಳು ಟೀಸರ್‌ನಲ್ಲಿದೆ. ಸಾಯಿ ಧರಮ್ ತೇಜ್ ಸೈನಿಕನಾಗಿ ಕಾಣಿಸಿಕೊಂಡಿದ್ದು, ಸೈನಿಕನ ಪತ್ನಿಯಾಗಿ ದೇಶಕ್ಕಾಗಿ ಮಾಡಿದ ತ್ಯಾಗವನ್ನು ಈ ಕಿರುಚಿತ್ರ ಬಿಂಬಿಸಲಿದೆ.

Mystical ಥ್ರಿಲ್ಲರ್ ಸಿನಿಮಾ ‘ವಿರೂಪಾಕ್ಷ’ ಮತ್ತು ‘ಬ್ರೋ’ ಚಿತ್ರದಲ್ಲಿ ಪವನ್ ಕಲ್ಯಾಣ್ ಅವರೊಂದಿಗೆ ಸ್ಕ್ರೀನ್‌ ಹಂಚಿಕೊಂಡ ನಂತರ, ಸಾಯಿ ಧರಮ್ ‘ಸತ್ಯ’ ಎಂಬ ಸಂಗೀತ ಕಿರುಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಕಿರುಚಿತ್ರವನ್ನು ದಿಲ್ ರಾಜು ಪ್ರೊಡಕ್ಷನ್ ಬ್ಯಾನರ್‌ ಅಡಿಯಲ್ಲಿ ‘ಬಲಗಂ’ ಚಿತ್ರದ ನಿರ್ಮಾಪಕರಾದ ಹರ್ಷಿತ್ ರೆಡ್ಡಿ ಮತ್ತು ಹನ್ಶಿತಾ ರೆಡ್ಡಿ ನಿರ್ಮಿಸಿದ್ದಾರೆ. ಗಾಯಕಿ ಶ್ರುತಿ ರಂಜನಿ ಕಿರುಚಿತ್ರಕ್ಕೆ ಸಂಗೀತ ನಿರ್ದೇಶಿಸಿದ್ದು, ಸಾಕೇತ್ ಕೊಮಂಡೂರಿ ಹಿನ್ನೆಲೆ ಸಂಗೀತ ಸಂಯೋಜಿಸಿದ್ದಾರೆ. ಈ ಕಿರುಚಿತ್ರ ಮೂಲ ತೆಲುಗು ಸೇರಿದಂತೆ ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

Previous article‘ದಿ ಜಡ್ಜ್‌ಮೆಂಟ್‌’ | ಪಬ್‌ ಸಾಂಗ್‌ನಲ್ಲಿ ದಿಗಂತ್‌ ಮತ್ತು ಧನ್ಯ ರಾಮಕುಮಾರ್‌
Next article‘ನಾನ್ ಸ್ಟಾಪ್ ಧಮಾಲ್’ ಟ್ರೈಲರ್‌ | ಇರ್ಷಾದ್‌ ಖಾನ್‌ ರಚಿಸಿ, ನಿರ್ದೇಶಿಸಿರುವ ಸಿನಿಮಾ

LEAVE A REPLY

Connect with

Please enter your comment!
Please enter your name here