ಡಾರ್ಲಿಂಗ್‌ ಕೃಷ್ಣ, ನಿಶ್ವಿಕಾ ನಾಯ್ಡು ಮತ್ತು ಮೇಘ ಶೆಟ್ಟಿ ಮುಖ್ಯಭೂಮಿಕೆಯಲ್ಲಿರುವ ‘ದಿಲ್‌ ಪಸಂದ್‌’ ಸಿನಿಮಾದ ಫಸ್ಟ್‌ ಗ್ಲಿಮ್ಸ್‌ ಬಿಡುಗಡೆಯಾಗಿದೆ. ಶಿವ ತೇಜಸ್‌ ನಿರ್ದೇಶನದ ಲವ್‌ ಸಿನಿಮಾಗೆ ಅರ್ಜುನ್‌ ಜನ್ಯ ಸಂಗೀತ ಸಂಯೋಜನೆಯಿದೆ.

ನಿರೀಕ್ಷೆ ಮೂಡಿಸಿರುವ ಕೆಲವು ಲವ್‌ ಸಿನಿಮಾಗಳ ಪೈಕಿ ‘ದಿಲ್‌ ಪಸಂದ್‌’ ಪ್ರಮುಖವಾದುದು. ಡಾರ್ಲಿಂಗ್‌ ಕೃಷ್ಣ, ನಿಶ್ವಿಕಾ ನಾಯ್ಡು ಮತ್ತು ಮೇಘಾ ಶೆಟ್ಟಿ ಪ್ರಮುಖ ಪಾತ್ರಧಾರಿಗಳು. ಇದೀಗ ಹೀರೋ ಡಾರ್ಲಿಂಗ್‌ ಕೃಷ್ಣ ಬರ್ತ್‌ಡೇವೆಂದು ಚಿತ್ರತಂಡ ಫಸ್ಟ್‌ ಗ್ಲಿಮ್ಸ್‌ ವೀಡಿಯೋ ರಿಲೀಸ್‌ ಮಾಡಿದೆ. ಆನಂದ್‌ ಆಡಿಯೋ ಮೂಲಕ ಬಿಡುಗಡೆಯಾಗಿರುವ ವೀಡಿಯೋ ತುಂಟುತನದ ಸನ್ನಿವೇಶ, ಮಾತುಗಳೊಂದಿಗೆ ಕಚಗುಳಿ ಇಡುತ್ತದೆ. ವೀಡಿಯೋ ಮೂಲಕ ಚಿತ್ರದ ಮೂರು ಪ್ರಮುಖ ಪಾತ್ರಗಳನ್ನು ಪರಿಚಯಿಸಲಾಗಿದೆ. ಸಿನಿಮಾದಲ್ಲಿ ತ್ರಿಕೋನ ಪ್ರೀತಿಯ ಕತೆ ಇರಬಹುದು ಎಂದು ಮೊದಲ ನೋಟಕ್ಕೆ ಅನಿಸುತ್ತಾದರೂ ನಿರ್ದೇಶಕರು ಯಾವುದೇ ಸುಳಿವು ಬಿಟ್ಟುಕೊಡುವುದಿಲ್ಲ. ಸದ್ಯ ಚಿತ್ರದ ಮಾತಿನ ಭಾಗದ ಚಿತ್ರೀಕರಣ ಮುಗಿದಿದ್ದು, ಹಾಡುಗಳ ಚಿತ್ರೀಕರಣ ಬಾಕಿಯಿದೆ. ಸುಮಂತ್ ಕ್ರಾಂತಿ ನಿರ್ಮಿಸುತ್ತಿರುವ ಚಿತ್ರವನ್ನು ಶಿವ ತೇಜಸ್ ನಿರ್ದೇಶಿಸುತ್ತಿದ್ದಾರೆ. ಅರ್ಜುನ್ ಜನ್ಯ ಸಂಗೀತ, ಶೇಖರ್ ಚಂದ್ರ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ ಚಿತ್ರಕ್ಕಿದೆ. ಸಾಧುಕೋಕಿಲ, ರಂಗಾಯಣ ರಘು, ತಬಲ ನಾಣಿ, ಗಿರಿ, ಹರೀಶ್ ದೇವಿ ತಂದ್ರೆ, ಚಿತ್ಕಲ ಬಿರಾದಾರ್, ಅರುಣಾ ಬಾಲರಾಜ್ ಚಿತ್ರದ ತಾರಾಬಳಗದಲ್ಲಿದ್ದಾರೆ.

Previous articleಟೀಸರ್‌ | Squid Game Season 2 ಘೋಷಿಸಿದ ನೆಟ್‌ಫ್ಲಿಕ್ಸ್‌
Next article‘The Broken News’ ಮೂಲಕ OTTಗೆ ಪದಾರ್ಪಣೆ ಮಾಡಿದ ನಟಿ ಸೋನಾಲಿ

LEAVE A REPLY

Connect with

Please enter your comment!
Please enter your name here