ನೆಟ್‌ಫ್ಲಿಕ್ಸ್‌ನ ಜನಪ್ರಿಯ ಸರಣಿ ‘Squid Game’ ಸೆಕೆಂಡ್‌ ಸೀಸನ್‌ ಸಿದ್ಧವಾಗುತ್ತಿದೆ. ಈ ಕುರಿತ ಟೀಸರ್‌ ಮತ್ತು ಸರಣಿ ನಿರ್ದೇಶಕ – ನಿರ್ಮಾಪಕ Hwang Dong-hyuk ಅವರ ಪತ್ರವನ್ನು ನೆಟ್‌ಫ್ಲಿಕ್ಸ್‌ ಟ್ವೀಟ್‌ ಮಾಡಿದೆ.

ನೆಟ್‌ಫ್ಲಿಕ್ಸ್‌ ತನ್ನ ಜನಪ್ರಿಯ ವೆಬ್‌ ಸರಣಿ ‘Squid Game’ ಸೆಕೆಂಡ್‌ ಸೀಸನ್‌ ಘೋಷಿಸಿದೆ. ‘Squid Game’ ಸೀಸನ್‌ 2 ಟೀಸರ್‌ನೊಂದಿಗೆ, “Red light… GREENLIGHT! Squid Game is officially coming back for Season 2!” ಎನ್ನುವ ಸಂದೇಶದೊಂದಿಗೆ ಟೀಸರ್‌ ಹೊರಬಿದ್ದಿದೆ. ಸರಣಿಯ ನಿರ್ದೇಶಕ, ನಿರ್ಮಾಪಕ Hwang Dong-hyuk ಅವರ ಪತ್ರವನ್ನೂ ನೆಟ್‌ಫ್ಲಿಕ್ಸ್‌ ಹಂಚಿಕೊಂಡಿದೆ. ಈ ಪತ್ರದಲ್ಲಿ, “Squid Game ಮೊದಲ ಸೀಸನ್‌ ರೂಪಿಸಲು 12 ವರ್ಷಗಳು ಬೇಕಾಯ್ತು. ಆದರೆ ಕೇವಲ 12 ದಿನಗಳಲ್ಲೇ ನೆಟ್‌ಫ್ಲಿಕ್ಸ್‌ನ ಜನಪ್ರಿಯ ಸರಣಿಯಾಗಿ ಇದು ಹೆಸರು ಮಾಡಿತು. Squid Game ನ ನಿರ್ದೇಶಕ, ನಿರ್ಮಾಪಕನಾಗಿ ಜಗತ್ತಿನ ಹಲವೆಡೆಯಿಂದ ನನಗೆ ಮೆಚ್ಚುಗೆ ವ್ಯಕ್ತವಾಗಿದೆ. ಇದೆಲ್ಲದಕ್ಕೂ ಧನ್ಯವಾದ. ಈಗ Gi-hun ಮರಳುತ್ತಿದ್ದಾನೆ. The Front Man ಮರಳುತ್ತಿದ್ದಾನೆ. Season 2 ಬರುತ್ತಿದೆ. Young-hee ಬಾಯ್‌ಫ್ರೆಂಡ್‌ Cheol-su ನಿಮಗೆ ಈ ಸರಣಿಯಲ್ಲಿ ಪರಿಚಯವಾಗುತ್ತಿದ್ದಾನೆ. ಹೊಸ ಅನುಭವಕ್ಕಾಗಿ ಸೀಸನ್‌ 2 ವೀಕ್ಷಿಸಿ” ಎನ್ನುವ ಒಕ್ಕಣಿಯಿದೆ. ಸೆಕೆಂಡ್‌ ಸೀಸನ್‌ ಸ್ಟ್ರೀಮಿಂಗ್‌ ದಿನಾಂಕ ಮುಂದಿನ ಕೆಲವೇ ದಿನಗಳಲ್ಲಿ ಹೊರಬೀಳಲಿದೆ.

LEAVE A REPLY

Connect with

Please enter your comment!
Please enter your name here