ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್‌ ಆಗುತ್ತಿರುವ ‘ಯೆಹ್‌ ಕಾಲಿ ಕಾಲಿ ಆಂಖೇ’ ಸರಣಿ ಜನಪ್ರಿಯವಾಗಿದೆ. ವೀಕ್ಷಕರು ಸರಣಿಯ ಎರಡನೇ ಸೀಸನ್‌ ಎದುರುನೋಡುತ್ತಿದ್ದಾರೆ. ಈ ಸರಣಿ ಕುರಿತಾಗಿ ಮೆಮೊ, ರೀಲ್ಸ್‌ಗಳು ಓಡಾಡುತ್ತಿದ್ದು, ನಟಿ ದಿಶಾ ಪಟಾನಿ ಶೀರ್ಷಿಕೆಗೆ ಡ್ಯಾನ್ಸ್‌ ಮಾಡಿದ್ದಾರೆ.

ನೆಟ್‌ಫ್ಲಿಕ್ಸ್‌ನ ಲೇಟೆಸ್ಟ್‌ ಸರಣಿ ‘ಯೆಹ್‌ ಕಾಲಿ ಕಾಲಿ ಆಂಖೇ’ ಎಂಟ ಎಪಿಸೋಡ್‌ಗಳು ಸ್ಟ್ರೀಮ್‌ ಆಗುತ್ತಿವೆ. ತ್ರಿಕೋನ ಪ್ರೇಮಕತೆಯ ಸರಣಿ ವೀಕ್ಷಕರಿಗೆ ಇಷ್ಟವಾಗಿದೆ. ಅವರೀಗ ಸರಣಿಯ ಎರಡನೇ ಸೀಸನ್‌ಗಾಗಿ ಎದುರುನೋಡುತ್ತಿದ್ದಾರೆ. ಶ್ವೇತಾ ತ್ರಿಪಾಠಿ, ತಾಹಿರ್‌ ರಾಜ್‌ ಭಾಸಿನ್‌, ಆಂಚಲ್‌ ಸಿಂಗ್‌ ಮುಖ್ಯ ಪಾತ್ರಗಳಲ್ಲಿರುವ ರೊಮ್ಯಾಂಟಿಕ್‌ – ಥ್ರಿಲ್ಲರ್‌ ಸರಣಿ ಜನವರಿ 14ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್‌ ಆಗುತ್ತಿದೆ. ಸರಣಿಗೆ ದೊಡ್ಡ ಮಟ್ಟದ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ವಿಕ್ರಾಂತ್‌ (ತಾಹಿರ್‌ ಪಾತ್ರ) ಬದುಕಿನಲ್ಲಿ ಏನೆಲ್ಲಾ ತಿರುವು ಸಿಗಲಿದೆ ಎಂದು ವೀಕ್ಷಕರು ಕುತೂಹಲದಿಂದ ಸೆಕೆಂಡ್‌ ಸೀಸನ್‌ಗೆ ಎದುರು ನೋಡುತ್ತಿದ್ದಾರೆ. ಶಾರುಖ್‌ ಖಾನ್‌ ಸೂಪರ್‌ಹಿಟ್‌ ಸಿನಿಮಾ ‘ಬಾಜಿಗಾರ್‌’ ಸಿನಿಮಾದ ಹಾಡಿನ ಸಾಲುಗಳನ್ನೇ ಶೀರ್ಷಿಕೆಯನ್ನಾಗಿಸಿಕೊಂಡ ಸರಣಿ ಕುರಿತಾಗಿ ಸೋಷಿಯಲ್‌ ಮೀಡಿಯಾದಲ್ಲೀಗ ಮೆಮೊ, ರೀಲ್ಸ್‌ಗಳು ಓಡಾಡುತ್ತಿವೆ. ನಟಿ ದಿಶಾ ಪಟಾನಿ ಈ ಹಾಡಿಗೆ ಡ್ಯಾನ್ಸ್‌ ಮಾಡಿದ್ದಾರೆ. ‘Can’t keep calm because the Yeh Kaali Kaali Ankhein dance mix is here. Come take this groovy challenge with us!’ ಎನ್ನುವ ಶೀರ್ಷಿಕೆಯೊಂದಿಗೆ ನೆಟ್‌ಫ್ಲಿಕ್ಸ್‌ ತನ್ನ ಇನ್‌ಸ್ಟಾಗ್ರಾಮ್‌ ಅಕೌಂಟ್‌ನಲ್ಲಿ ದಿಶಾ ಡ್ಯಾನ್ಸ್‌ ವೀಡಿಯೋ ಶೇರ್‌ ಮಾಡಿದೆ.

LEAVE A REPLY

Connect with

Please enter your comment!
Please enter your name here