ಪ್ರೇಮ್‌ ನಿರ್ದೇಶನದ ‘ಏಕ್‌ ಲವ್‌ ಯಾ’ ಸಿನಿಮಾ ಏಪ್ರಿಲ್‌ 8ರಿಂದ ZEE5ನಲ್ಲಿ ಸ್ಟ್ರೀಮ್‌ ಆಗಲಿದೆ. ಸಹೋದರ ರಾಣಾಗಾಗಿ ರಕ್ಷಿತಾ ಪ್ರೇಮ್‌ ನಿರ್ಮಿಸಿದ ಈ ಚಿತ್ರದ ನಾಯಕಿಯಾಗಿ ರೀಷ್ಮಾ ನಾಣಯ್ಯ ನಟಿಸಿದ್ದಾರೆ.

ಚಿತ್ರಮಂದಿರಗಳಲ್ಲಿ ಸದ್ದು ಮಾಡಿದ ಇತ್ತೀಚಿನ ಹಲವು ಸಿನಿಮಾಗಳು ZEE5ನಲ್ಲಿ ಸ್ಟ್ರೀಮ್‌ ಆಗುತ್ತಿವೆ. ಈ ಪಟ್ಟಿಗೆ ಹೊಸ ಸೇರ್ಪಡೆ ಪ್ರೇಮ್‌ ನಿರ್ದೇಶನದ ‘ಏಕ್‌ ಲವ್‌ ಯಾ’. ರಕ್ಷಿತಾ ಅವರ ಸಹೋದರ, ಹೊಸಪ್ರತಿಭೆ ರಾಣಾ ನಾಯಕನಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ಸಿನಿಮಾ ಫೆಬ್ರವರಿ 24ರಂದು ತೆರೆಕಂಡಿತ್ತು. ಬಿಡುಗಡೆಗೆ ಮುನ್ನ ಹಾಡುಗಳಿಂದ ಸುದ್ದಿಯಾಗಿದ್ದ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲೂ ಸದ್ದು ಮಾಡಿತ್ತು. ರಾಣಾಗೆ ಜೋಡಿಯಾಗಿ ರೀಷ್ಮಾ ನಾಣಯ್ಯ ಹಾಗೂ ಮುಖ್ಯ ಪಾತ್ರದಲ್ಲಿ ರಚಿತಾ ರಾಮ್‌ ನಟಿಸಿದ್ದರು. ನಿರ್ದೇಶಕ ಪ್ರೇಮ ಅವರು ಲವ್‌ಸ್ಟೋರಿ ಜೊತೆ ಸಂದೇಶವೊಂದನ್ನು ಹೇಳಿದ್ದರು. ಇದೀಗ ಈ ಸಿನಿಮಾ ಏಪ್ರಿಲ್‌ 8ರಿಂದ ZEE5ನಲ್ಲಿ ಸ್ಟ್ರೀಮ್‌ ಆಗಲಿದೆ. ಥಿಯೇಟರ್‌ನಲ್ಲಿ ವೀಕ್ಷಿಸಲು ಸಾಧ್ಯವಾಗದ ಸಿನಿಪ್ರಿಯರು ಟೀವಿ, ಮೊಬೈಲ್‌ಗಳಲ್ಲಿ ನೋಡುವ ಅವಕಾಶವನ್ನು ZEE5 ಓಟಿಟಿ ಪ್ಲಾಟ್‌ಫಾರ್ಮ್‌ ಒದಗಿಸಿದೆ. ಚರಣ್ ರಾಜ್, ಶಶಿಕುಮಾರ್, ಸೂರಜ್, ‘ಶಿಷ್ಯ’ ದೀಪಕ್ ಮತ್ತಿತರರು ಚಿತ್ರದಲ್ಲಿ ನಟಿಸಿದ್ದಾರೆ. ರಕ್ಷಿತಾ ತಮ್ಮದೇ ರಕ್ಷಿತಾ ಫಿಲ್ಮಂ ಫ್ಯಾಕ್ಟರಿ ಬ್ಯಾನರ್‌ನಡಿ ನಿರ್ಮಾಣ ಮಾಡಿದ್ದರು. ಅರ್ಜುನ್ ಜನ್ಯ ಸಂಗೀತ, ಮಹೇನ್ ಸಿಂಹ ಕ್ಯಾಮೆರಾ ಚಿತ್ರಕ್ಕಿದೆ.

Previous articleನೈಜ ಘಟನೆ, ರಿಯಲಿಸ್ಟಿಕ್‌ ನಿರೂಪಣೆಯ ‘ಪಡ’
Next articleಕನ್ನಡ ಚಿತ್ರರಂಗದ ಮಹತ್ವದ ಪ್ರಯೋಗ ‘ಬಂಗಾರದ ಮನುಷ್ಯ’ ಸಿನಿಮಾಗೆ 50 ವರ್ಷ!

LEAVE A REPLY

Connect with

Please enter your comment!
Please enter your name here