ಹಿಂದಿ ಕಿರುತೆರೆ ನಿರ್ಮಾಪಕಿ, ನಿರ್ದೇಶಕಿ ಏಕ್ತಾ ಕಪೂರ್‌ ‘International Emmy Directorate Award’ ಗೌರವ ಪಡೆದಿದ್ದಾರೆ. ನಟ ವೀರ್‌ ದಾಸ್‌ ಅವರಿಗೆ Netflix ಹಾಸ್ಯ ಸರಣಿ ‘ವೀರ್ ದಾಸ್: ಲ್ಯಾಂಡಿಂಗ್‌’ಗಾಗಿ Emmy ಪ್ರಶಸ್ತಿ ಸಂದಿದೆ.

ಇಂಟರ್‌ನ್ಯಾಷನಲ್‌ ಎಮ್ಮಿ ಅವಾರ್ಡ್ಸ್- 2023ರಲ್ಲಿ ಏಕ್ತಾ ಕಪೂರ್‌ ‘International Emmy Directorate Award’ ಗೌರವ ಪಡೆದಿದ್ದಾರೆ. ನಟ ವೀರ್‌ ದಾಸ್‌ ಅವರು Netflix ಹಾಸ್ಯ ಸರಣಿ ‘ವೀರ್ ದಾಸ್: ಲ್ಯಾಂಡಿಂಗ್‌’ಗಾಗಿ Emmy ಗೌರವಕ್ಕೆ ಭಾಜನರಾಗಿದ್ದಾರೆ. ಈ ಗೌರವವನ್ನು ಪಡೆದ ಮೊದಲ ಭಾರತೀಯರು ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದಾರೆ. ವೀರ್ ದಾಸ್ ತಮ್ಮ X ಖಾತೆಯಲ್ಲಿ ಈ ಕುರಿತು, ‘For Indian Comedy. Every breath, every word. Thank you to the Emmys for this incredible honour’ ಎಂದು ಬರೆದಿದ್ದಾರೆ. ಇದು ಅಂತಾರಾಷ್ಟ್ರೀಯ ಎಮ್ಮಿ ಪ್ರಶಸ್ತಿಗೆ ವೀರ್ ದಾಸ್ ಅವರ ಎರಡನೇ ನಾಮನಿರ್ದೇಶನ.

ಏಕ್ತಾ ಕಪೂರ್‌ ಅಂತರರಾಷ್ಟ್ರೀಯ ಎಮ್ಮಿ ನಿರ್ದೇಶನಾಲಯ ಪ್ರಶಸ್ತಿಯನ್ನು ಪಡೆದ ಮೊದಲ ಭಾರತೀಯ ಮಹಿಳಾ ಚಲನಚಿತ್ರ ನಿರ್ಮಾಪಕಿಯಾಗಿದ್ದಾರೆ. ಈ ವಿಶೇಷ ಸಂದರ್ಭವನ್ನು ತಮ್ಮ Instagram ಖಾತೆಯಲ್ಲಿ ಹಂಚಿಕೊಂಡು, ‘ಇದು ನಿಮಗಾಗಿ ಭಾರತ, ನಾವು ನಿಮ್ಮ Emmyಯನ್ನು ಮನೆಗೆ ತರುತ್ತಿದ್ದೇವೆ’ ಎಂದು ಬರೆದಿದ್ದಾರೆ. ಏಕ್ತಾ ಈ ಕುರಿತು ʼಜಾಗತಿಕ ಮಟ್ಟದಲ್ಲಿ ಪ್ರತಿಷ್ಠಿತ ‘ಎಮ್ಮಿಸ್ ಡೈರೆಕ್ಟರೇಟ್’ ಪ್ರಶಸ್ತಿಯನ್ನು ಸ್ವೀಕರಿಸಿರುವುದು ನನಗೆ ಸಂತಸ ತಂದಿದೆ. ನಾನು ಯಾವಾಗಲೂ ಕಥೆಗಳನ್ನು ಹೇಳಲು ಬಯಸುತ್ತೇನೆ. ಏಕೆಂದರೆ ಪ್ರೇಕ್ಷಕರು ನನಗೆ ಕೇಳಲು, ನೋಡಲು ಮತ್ತು ಪ್ರತಿನಿಧಿಸಲು ಅವಕಾಶ ನೀಡಿದ್ದಾರೆ. ನನಗೆ ಬೆಂಬಲ ನೀಡಿರುವ ಅವರ ಪ್ರೀತಿಗೆ ನಾನು ಋಣಿ. ಈ ಪ್ರಯಾಣದ ತಿರುವುಗಳು ಭಾರತದ ಮತ್ತು ಅದರಾಚೆಗಿನ ಜನರು ಧಾರೆಯೆರೆದ ಪ್ರೀತಿಯ ಶಕ್ತಿಗೆ ಸಾಕ್ಷಿಯಾಗಿದೆ. ನನ್ನ ಮನಸ್ಸು ಕೃತಜ್ಞತೆಯಿಂದ ತುಂಬಿದೆ ಮತ್ತು ನಿಮ್ಮೆಲ್ಲ ಪ್ರೀತಿಗೆ ಧನ್ಯವಾದಗಳು’ ಎಂದಿದ್ದಾರೆ.

LEAVE A REPLY

Connect with

Please enter your comment!
Please enter your name here