ದೊಡ್ಡ ದೊಡ್ಡ ಹಿಟ್‌ ಸಿನಿಮಾಗಳನ್ನು ಕೊಟ್ಟಿರುವ ನಿರ್ದೇಶಕ ಸಂಜಯ್‌ ಲೀಲಾ ಬನ್ಸಾಲಿ ಅವರ ಕನಸಿನ ಕೂಸು ‘ಹೀರಾಮಂಡಿ: ದ ಡೈಮಂಡ್‌ ಬಜಾರ್‌’ ವೆಬ್‌ ಸರಣಿ. ಇದೀಗ ಸರಣಿಯ ಟ್ರೇಲರ್‌ ರಿಲೀಸ್‌ ಆಗಿದೆ. ಸರಣಿಯಲ್ಲಿನ ವಿಶ್ಯುಯೆಲ್ಸ್‌ ನೋಡಿದ ಬಿ-ಟೌನ್‌ ಮಂದಿ ನಿರ್ದೇಶಕನ ಕೆಲಸಕ್ಕೆ ಬೆರಗಾಗಿದ್ದಾರೆ.

ಬಾಲಿವುಡ್‌ ಸ್ಟಾರ್‌ ನಿರ್ದೇಶಕ ಸಂಜಯ್‌ ಲೀಲಾ ಬನ್ಸಾಲಿ ಒಂದು ಸಿನಿಮಾ ಮಾಡುತ್ತಾರೆ ಅಂದ್ರೆ ವೀಕ್ಷಕರಿಗೆ ಅದರ ಮೇಲೆ ಬೆಟ್ಟದಷ್ಟು ನಿರೀಕ್ಷೆ ಮೂಡುತ್ತದೆ. ಬನ್ಸಾಲಿ ಏನೇ ಮಾಡಿದರೂ ಅದು ತುಂಬಾ ವಿಭಿನ್ನ ಹಾಗೂ ಗ್ರ್ಯಾಂಡ್‌ ಆಗಿ ಇರುತ್ತೆ ಎನ್ನುವ ನಂಬಿಕೆ. ಸಂಜಯ್‌ ಲೀಲಾ ಬನ್ಸಾಲಿ ಅವರ ಸಿನಿಮಾ ಅಂದ್ರೆ, ಅದ್ಧೂರಿ ಸೆಟ್‌ ಹಾಗೂ ಪ್ರತಿಭಾವಂತ ಕಲಾವಿದರ ಬಳಗ ಇದ್ದೇ ಇರುತ್ತದೆ. ಅವರ ನಿರೂಪಣೆಯ ಶೈಲಿ, ಕಥೆ ಹೇಳುವ ವಿಧಾನ ಎಲ್ಲವೂ ವಿಭಿನ್ನವಾಗಿಯೇ ಇರುತ್ತದೆ. ಹೀಗಾಗಿ ಅವರ ‘ಹೀರಾಮಂಡಿ: ದ ಡೈಮಂಡ್‌ ಬಜಾರ್‌ ವೆಬ್‌ ಸರಣಿ’ ಬಗೆಗಿನ ನಿರೀಕ್ಷೆ ಕೊಂಚ ಹೆಚ್ಚಾಗಿಯೇ ಇದೆ. 14 ವರ್ಷಗಳ ಅವರ ಕನಸು ಈಗ ನನಸಾಗಲಿದೆ. ‘ಹೀರಾಮಂಡಿ: ದ ಡೈಮಂಡ್‌ ಬಜಾರ್‌’ ವೆಬ್‌ ಸರಣಿಯ ಟ್ರೇಲರ್‌ ಬಿಡುಗಡೆಯಾಗಿದೆ. ಅನುಭವಿ ಕಲಾವಿದರ ನಟನೆ, ಅದ್ದೂರಿ ಸೆಟ್​, ಹಿನ್ನೆಲೆ ಸಂಗೀತ, ಕಲಾವಿದರ ಕಾಸ್ಟ್ಯೂಮ್​ ಎಲ್ಲವೂ ಗಮನ ಸೆಳೆಯುತ್ತಿದೆ. ಈ ಟ್ರೇಲರ್‌ ನೋಡಿದ ವಿಕ್ಕಿ ಕೌಶಲ್‌, ಆಲಿಯಾ ಭಟ್‌, ರಶ್ಮಿಕ್ ಮಂದಣ್ಣ ಸೇರಿದಂತೆ ಹಲವರು ಬನ್ಸಾಲಿ ಅವರ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಡಿಸುತ್ತಿದ್ದಾರೆ.

ಸ್ವಾತಂತ್ರ್ಯಪೂರ್ವದ ಕಥೆಯನ್ನು ಈ ವೆಬ್‌ ಸರಣಿ ಮೂಲಕ ಹೇಳಲು ಹೊರಟಿದ್ದಾರೆ ನಿರ್ದೇಶಕ ಬನ್ಸಾಲಿ. ಹೀರಾಮಂಡಿಯಲ್ಲಿ ಮುಕುಟವಿಲ್ಲದ ರಾಣಿಯಂತೆ ತನ್ನದೇ ಅಧಿಕಾರ ಚಲಾಯಿಸುವ ಮಲ್ಲಿಕಾ ಜಾನ್‌ ಪಾತ್ರದಲ್ಲಿ ಮನಿಶಾ ಕೊಯಿರಾಲಾ ಕಾಣಿಸಿಕೊಂಡಿದ್ದಾರೆ. ಹೈಫೈ ವೇಶ್ಯಾವಾಟಿಕೆ ಮನೆಯನ್ನ ನಡೆಸಿಕೊಂಡುವ ಹೋಗುವ ಮಲ್ಲಿಕಾಗೆ ತನ್ನ ವಿರೋಧಿಯ ಮಗಳು ಎದುರಾದಾಗ ನಡೆಯುವ ಸಂಘರ್ಷ ಹಾಗೂ ಬ್ರಿಟಿಷರ ವಿರುದ್ಧದ ಹೋರಾಟವನ್ನ ಈ ಸರಣಿಯಲ್ಲಿ ನೋಡಬಹುದಾಗಿದೆ. ಎದುರಾಳಿಯ ಮಗಳ ಪಾತ್ರದಲ್ಲಿ ಸೋನಾಕ್ಷಿ ಸಿನ್ಹಾ ನಟಿಸಿದ್ದಾರೆ. ಈ ಅದ್ಧೂರಿ ವೆಬ್‌ ಸರಣಿ ನೆಟ್​ಫ್ಲಿಕ್ಸ್​ನಲ್ಲಿ ಮೇ 1ರಿಂದ​ ವೀಕ್ಷಣೆಗೆ ಲಭ್ಯವಾಗಲಿದೆ. ಮನಿಶಾ ಕೊಯಿರಾಲಾ, ಸೋನಾಕ್ಷಿ ಸಿನ್ಹಾ ಜೊತೆ ಅದಿತಿ ರಾವ್​ ಹೈದರಿ, ರಿಚಾ ಚಡ್ಡಾ, ಶರ್ಮಿನ್​ ಸೇಗಲ್​, ಸಂಜೀದಾ ಶೇಖ್​ ಈ ವೆಬ್​ ಸರಣಿಯಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

LEAVE A REPLY

Connect with

Please enter your comment!
Please enter your name here