ನಿನ್ನೆಯ ಒಡಿಸಾ ರೈಲು ದುರಂತಕ್ಕೆ ಭಾರತೀಯ ಸಿನಿಮಾರಂಗದ ಹಲವು ನಟ, ನಟಿಯರು ಕಂಬನಿ ಮಿಡಿದಿದ್ದಾರೆ. ಸಲ್ಮಾನ್‌ ಖಾನ್‌, ಚಿರಂಜೀವಿ, ಸೋನು ಸೂದ್‌, ಜ್ಯೂನಿಯರ್‌ NTR, ಕಿರಣ್‌ ಖೇರ್‌, ಮನೋಜ್‌ ಭಾಜಪೈ ಮುಂತಾದವರು ಟ್ವಿಟರ್‌ನಲ್ಲಿ ಸಂತಾಪ ಸೂಚಿಸಿದ್ದಾರೆ.

ನಿನ್ನೆ ಒಡಿಸಾದಲ್ಲಿ ನಡೆದ ರೈಲು ದುರಂತದಲ್ಲಿ 233 ಜನರು ಮೃತರಾಗಿದ್ದು, 900ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಹಿಂದಿ ಹಾಗೂ ದಕ್ಷಿಣ ಭಾರತ ಸಿನಿಮಾರಂಗಗಳ ಹಲವು ತಾರೆಯರು ದುರಂತಕ್ಕೆ ಆಘಾತ ವ್ಯಕ್ತಪಡಿಸಿದ್ದಾರೆ. ಸಲ್ಮಾನ್‌ ಖಾನ್‌, ಚಿರಂಜೀವಿ, ಕಿರಣ್‌ ಖೇರ್‌, ಜ್ಯೂನಿಯರ್‌ ಎನ್‌ಟಿಆರ್‌, ಮನೋಜ್‌ ಭಾಜಪೈ, ಸೋನು ಸೂದ್‌ ಈ ಬಗ್ಗೆ ಟ್ವೀಟ್‌ ಮಾಡಿದ್ದು, ಸಂತ್ರಸ್ತರಿಗೆ ನೆರವಾಗಲು ಅಭಿಮಾನಿಗಳಿಗೆ ಕರೆ ಕೊಟ್ಟಿದ್ದಾರೆ. ಗಾಯಾಳುಗಳಿಗೆ ರಕ್ತದ ಅವಶ್ಯಕತೆಯಿದ್ದು ಬ್ಲಡ್‌ಬ್ಯಾಂಕ್‌ಗಳ ಮೂಲಕ ಸಂತ್ರಸ್ತರ ನೆರವಿಗೆ ಧಾವಿಸುವಂತೆ ಚಿರಂಜೀವಿ ಅಭಿಮಾನಿಗಳಿಗೆ ಸಲಹೆ ಮಾಡಿದ್ದಾರೆ. ಈ ಸಂಕಷ್ಟದ ಸಮಯದಲ್ಲಿ ತಾವು ಜೊತೆಗಿದ್ದು ಸಂತ್ರಸ್ತ ಕುಟುಂಬಗಳಿಗೆ ಧೈರ್ಯ ತುಂಬಬೇಕಿದೆ ಎಂದಿದ್ದಾರೆ ನಟ ಜ್ಯೂನಿಯರ್‌ ಎನ್‌ಟಿಆರ್‌.

Previous articleಸೆಟ್ಟೇರಿದ ‘ರುದ್ರ ಗರುಡ ಪುರಾಣ’ | ಪೊಲೀಸ್‌ ಅಧಿಕಾರಿಯಾಗಿ ರಿಷಿ
Next articleಸಸ್ಪೆನ್ಸ್‌ – ಥ್ರಿಲ್ಲರ್‌ ‘ಐರಾವನ್‌’ | ಜೂನ್‌ 16ರಂದು ಸಿನಿಮಾ ತೆರೆಗೆ

LEAVE A REPLY

Connect with

Please enter your comment!
Please enter your name here