ಎರಡು ವರ್ಷಗಳ ಹಿಂದೆ ಬಿಡುಗಡೆಯಾಗಿದ್ದ ‘ಓದೆಲಾ ರೈಲ್ವೆ ಸ್ಟೇಷನ್’ ತೆಲುಗು ಚಿತ್ರ ವಸಿಷ್ಠ ಸಿಂಹ ಅವರಿಗೆ ಜನಪ್ರಿಯತೆ ತಂದುಕೊಟ್ಟಿತ್ತು. ಇದೀಗ ಚಿತ್ರದ ಸರಣಿ ‘ಓದೆಲಾ ರೈಲ್ವೆ ಸ್ಟೇಷನ್ 2’ ಸೆಟ್ಟೇರಿದೆ. ಸರಣಿಯಲ್ಲಿ ತಮನ್ನಾ ಅವರು ವಸಿಷ್ಠ ಅವರಿಗೆ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ವಸಿಷ್ಠ ಸಿಂಹ ಅವರು ಕನ್ನಡದ ಜೊತೆಗೆ ಪರಭಾಷೆಗಳಲ್ಲೂ ಅಭಿನಯಿಸುತ್ತಿದ್ದಾರೆ. ‘ಓದೆಲಾ ರೈಲ್ವೆ ಸ್ಟೇಷನ್’ ಸಿನಿಮಾ ಮೂಲಕ ನಾಯಕನಾಗಿ ಅವರು ತೆಲುಗು ಸಿನಿಪ್ರಿಯರಿಗೆ ಪರಿಚಯವಾಗಿದ್ದರು. 2022ರಲ್ಲಿ Aha OTTಯಲ್ಲಿ ಬಿಡುಗಡೆಯಾಗಿದ್ದ ‘ಓದೆಲಾ ರೈಲ್ವೆ ಸ್ಟೇಷನ್’ ಸಿನಿಮಾದಲ್ಲಿ ವಸಿಷ್ಠ ಅವರು ‘ತಿರುಪತಿ’ ಹೆಸರಿನ ಧೋಬಿ ಪಾತ್ರ ನಿರ್ವಹಿಸಿದ್ದರು. ಇದೀಗ ‘ಓದೆಲಾ ರೈಲ್ವೆ ಸ್ಟೇಷನ್‌ ಭಾಗ 2’ ಸೆಟ್ಟೇರಿದೆ. ಉತ್ತರ ಪ್ರದೇಶದ ವಾರಣಾಸಿಯಲ್ಲಿ ಸಿನಿಮಾದ ಮುಹೂರ್ತ ನೆರವೇರಿದೆ. ಚಿತ್ರದ ನಾಯಕಿಯಾಗಿ ತಮನ್ನಾ ನಟಿಸುತ್ತಿದ್ದು ಚಿತ್ರೀಕರಣಕ್ಕೆ ಚಾಲನೆ ಸಿಕ್ಕಿದೆ.

ಮೊದಲ ಭಾಗದಲ್ಲಿ ನಟಿ ಹೆಬ್ಹಾ ಪಟೇಲ್ ಜೊತೆ ವಸಿಷ್ಠ ಸಿಂಹ ಅಭಿನಯಿಸಿದ್ದರು. ಎರಡನೇ ಭಾಗದಲ್ಲಿ ತಮನ್ನಾ ಭಾಟಿಯಾ ಅವರ ಜೊತೆ ವಸಿಷ್ಠ ಸಿಂಹ ನಟಿಸುತ್ತಿದ್ದಾರೆ. ಹೆಬ್ಹಾ ಪಟೇಲ್ ಕೂಡ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಚಿತ್ರವನ್ನು Madhu Creations ಮತ್ತು Sampath Nandi ಬ್ಯಾನರ್ ಅಡಿಯಲ್ಲಿ ಡಿ ಮಧು ನಿರ್ಮಿಸುತ್ತಿದ್ದು, ಅಶೋಕ ತೇಜ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಸೌಂದರ್ ರಾಜನ್ ಛಾಯಾಗ್ರಹಣ, ಅಜನೀಶ್ ಲೋಕನಾಥ್ ಚಿತ್ರಕ್ಕೆ ಸಂಗೀತ ಸಂಯೋಜನೆ ಚಿತ್ರಕ್ಕಿರಲಿದೆ.

LEAVE A REPLY

Connect with

Please enter your comment!
Please enter your name here