ಉದ್ಯಮಿ ಮುಖೇಶ್‌ ಅಂಬಾನಿ ಕಿರಿಯ ಪುತ್ರ ಅನಂತ್‌ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್‌ ವಿವಾಹ ಪೂರ್ವ ಸಮಾರಂಭದಲ್ಲಿ ಭಾರತದ ಹಲವು ಸಿನಿಮಾ ತಾರೆಯರು ಪಾಲ್ಗೊಂಡಿದ್ದಾರೆ. ಬಾಲಿವುಡ್‌ನ ಸ್ಟಾರ್‌ ಹೀರೋಗಳಾದ ಶಾರುಖ್‌, ಅಮೀರ್ ಮತ್ತು ಸಲ್ಮಾನ್‌ ಖಾನ್‌ ಸಮಾರಂಭದಲ್ಲಿ ಹಾಡಿಗೆ ಒಟ್ಟಿಗೆ ಹೆಜ್ಜೆ ಹಾಕಿದ್ದು ವಿಶೇಷ.

ಉದ್ಯಮಿ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ – ರಾಧಿಕಾ ಮರ್ಚೆಂಟ್ ವಿವಾಹಪೂರ್ವ ಸಮಾರಂಭದಲ್ಲಿ ಭಾರತದ ಸಿನಿಮಾ ತಾರೆಯರನೇಕರು ಪಾಲ್ಗೊಂಡಿದ್ದರು. ಶಾರುಖ್ ಖಾನ್, ಅಮೀರ್‌ ಖಾನ್ ಮತ್ತು ಸಲ್ಮಾನ್ ಖಾನ್ ‘RRR’ ಸಿನಿಮಾ ‘ನಾಟು ನಾಟು’ ಗೀತೆಗೆ ಹೆಜ್ಜೆ ಹಾಕಿದ್ದು ವಿಶೇಷ. ಇವರಿಗೆ ರಾಮ್‌ ಚರಣ್‌ ಕೂಡ ಜೊತೆಯಾಗಿದ್ದರು. ವಿವಾಹಪೂರ್ವ ಸಮಾರಂಭದಲ್ಲಿ Meta CEO ಮಾರ್ಕ್ ಜುಕರ್‌ಬರ್ಗ್ ಹಾಗೂ ಅವರ ಪತ್ನಿ ಪ್ರಿಸ್ಸಿಲ್ಲಾ ಚಾನ್, ಗಾಯಕಿ ರಿಹಾನ್ನಾ, ಗೀತರಚನೆಕಾರ, ನಿರ್ಮಾಪಕ ಆಡಮ್ ಬ್ಲಾಕ್‌ಸ್ಟೋನ್, ಶಾರುಖ್ ಖಾನ್ ಹಾಗೂ ಅವರ ಕುಟುಂಬ, ಸಲ್ಮಾನ್ ಖಾನ್, ರಣವೀರ್ ಸಿಂಗ್ – ದೀಪಿಕಾ ಪಡುಕೋಣೆ ದಂಪತಿ, ರಾಣಿ ಮುಖರ್ಜಿ, ಅರ್ಜುನ್ ಕಪೂರ್, ಬೋನಿ ಕಪೂರ್, ಅಯಾನ್ ಮುಖರ್ಜಿ, ಅಟ್ಲಿ, ಆಲಿಯಾ ಭಟ್ – ರಣವೀರ್‌‌ ಕಪೂರ್,‌ ರಜನೀಕಾಂತ್‌, ಅಮಿತಾಬ್‌ ಬಚ್ಚನ್‌, ಅಭಿಷೇಕ್‌ ಬಚ್ಚನ್‌, ಐಶ್ವರ್ಯಾ ರೈ ಮತ್ತು ಗಾಯಕರಾದ ಶ್ರೇಯಾ ಘೋಷಲ್‌, ಅರ್ಜಿತ್‌ ಸಿಂಗ್‌ ಸೇರಿದಂತೆ ಅನೇಕ ತಾರೆಯರು, ಕ್ರಿಕೆಟಿಗರು ಮತ್ತು ಜನಪ್ರಿಯ ಕ್ರೀಡಾ ತಾರೆಯರು ಭಾಗವಹಿಸಿದ್ದರು.

ಮುಕೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಅವರ ವಿವಾಹ ಪೂರ್ವ ಆಚರಣೆಗಳು ಸಾಂಪ್ರದಾಯಿಕ ಅನ್ನ ಸೇವೆಯೊಂದಿಗೆ ಪ್ರಾರಂಭವಾಯಿತು. ಇದು ಜಾಮ್‌ ನಗರದ ರಿಲಯನ್ಸ್ ಟೌನ್‌ಶಿಪ್ ಬಳಿಯ ಜೋಗ್ವಾಡ್ ಗ್ರಾಮದಲ್ಲಿ ನಡೆದಿದ್ದು, ಮುಕೇಶ್ ಅಂಬಾನಿ, ಅನಂತ್ ಅಂಬಾನಿ, ರಾಧಿಕಾ ಮರ್ಚೆಂಟ್ ಮತ್ತು ಅಂಬಾನಿ ಮತ್ತು ಮರ್ಚೆಂಟ್ ಕುಟುಂಬದ ಇತರ ಸದಸ್ಯರು ಹಳ್ಳಿಗರಿಗೆ ಸಾಂಪ್ರದಾಯಿಕ ಗುಜರಾತಿ ಆಹಾರವನ್ನು ಬಡಿಸಿದ್ದರು. ಈ ಎಲ್ಲಾ ಸಮಾರಂಭಗಳು ಮಾರ್ಚ್‌ 1ರಿಂದ ಮಾರ್ಚ್‌ 3ರವರೆಗೆ ನಡೆದಿವೆ. ವರದಿಯ ಪ್ರಕಾರ ಇವರ ವಿವಾಹ ಪೂರ್ವ ಕಾರ್ಯಕ್ರಮಕ್ಕೆ ಅಂದಾಜು 1260 ಕೋಟಿ ರೂಪಾಯಿ ವೆಚ್ಚವಾಗಿದೆ ಎನ್ನಲಾಗಿದೆ. ಅನಂತ್ ಅಂಬಾನಿ – ರಾಧಿಕಾ ಮರ್ಚೆಂಟ್ ಅವರ ವಿವಾಹವು ಇದೇ ಜುಲೈ 12 ರಂದು ಜರುಗಲಿದೆ.

LEAVE A REPLY

Connect with

Please enter your comment!
Please enter your name here