ಜಿ ವಿ ಪ್ರಕಾಶ್‌ ಕುಮಾರ್‌ ನಟನೆಯ ‘ಕಳ್ವನ್‌’ ತಮಿಳು ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದೆ. ಪಿ ವಿ ಶಂಕರ್‌ ನಿರ್ದೇಶನದ ಚಿತ್ರದ ನಾಯಕಿ ಧೀನಾ. ಹಿರಿಯ ಚಿತ್ರನಿರ್ದೇಶಕ ಭಾರತೀರಾಜ ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದಾರೆ. ‘ಕಳ್ವನ್‌’ ಇದೇ ಏಪ್ರಿಲ್‌ 4ರಂದು ತೆರೆಕಾಣಲಿದೆ.

ಖ್ಯಾತ ಛಾಯಾಗ್ರಾಹಕ ಪಿ ವಿ ಶಂಕರ್ ನಿರ್ದೇಶನ, ಜಿ ವಿ ಪ್ರಕಾಶ್ ಕುಮಾರ್‌ ಮತ್ತು ಧೀನಾ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ‘ಕಳ್ವನ್‌’ ಮಲಯಾಳಂ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದೆ. ಕಡಂಬೂರು ಅರಣ್ಯದ ಮೂಲಕ ಪಣಮಕಾಡಿಗೆ ನುಗ್ಗಿರುವ ಆನೆಗಳ ಹಿಂಡಿನ ಸುದ್ದಿಯ ಘೋಷಣೆಯೊಂದಿಗೆ ಟ್ರೇಲರ್ ಪ್ರಾರಂಭವಾಗುತ್ತದೆ. ಘೋಷಣೆಯಲ್ಲಿ ಇರುಟ್ಟಿಪಾಳ್ಯಂ ಗ್ರಾಮಸ್ಥರು ಅರಣ್ಯಕ್ಕೆ ತೆರಳದಂತೆ ಸೂಚನೆ ನೀಡಲಾಗುತ್ತಿರುತ್ತದೆ. ಈ ಕುರಿತಾಗಿ ನಾಯಕ (ಪ್ರಕಾಶ್) ಮತ್ತು ನಾಯಕಿ‌ (ಧೀನಾ) ತಾವು ರೂಪಿಸಿರುವ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಮುಂದಾಗುತ್ತಾರೆ. ಅವರ ನಿರೀಕ್ಷೆಯಂತೆ ಆನೆಗಳ ಹಿಂಡೇ ಅಲ್ಲಿ ಧಾವಿಸಿರುತ್ತದೆ. ಅವರ ಯೋಜನೆಗಳ ಕೆಲವು ವಿವರಗಳನ್ನು ಸಹ ಟ್ರೇಲರ್‌ನಲ್ಲಿ ತೋರಿಸಲಾಗಿದೆ.

ಚಿತ್ರದ ಶೀರ್ಷಿಕೆ ‘ಕಳ್ವನ್’ ಅಂದರೆ ‘ಕಳ್ಳ’ ಎಂದರ್ಥ. ನಿಜವಾದ ಕಳ್ಳ ಯಾರು ಎಂಬುದನ್ನು ನಿಗೂಢವಾಗಿರಿಸಲಾಗಿದೆ. ಇದೊಂದು ಆಕ್ಷನ್ – ಡ್ರಾಮಾ ಕಥಾಹಂದರವಾಗಿದ್ದು, ಚಿತ್ರದಲ್ಲಿ ಭಾರತಿರಾಜ, ಇವಾನಾ, ಜಿ ಜ್ಞಾನಸಂಬಂಧಂ ಮತ್ತು ವಿನೋತ್ ಮತ್ತು ಮುನ್ನಾ ಪ್ರಮುಖ ಪಾತ್ರಗಳಲ್ಲಿದ್ದಾರೆ. ಚಲನಚಿತ್ರಕ್ಕೆ ಶಂಕರ್ ಮತ್ತು ರಮೇಶ್ ಅಯ್ಯಪ್ಪನ್ ಅವರೇ ಚಿತ್ರಕಥೆ ಬರೆದಿದ್ದು, ನಿರ್ದೇಶಕ ಶಂಕರ್ ಅವರೇ ಛಾಯಾಗ್ರಹಣ ನಿರ್ವಹಿಸಿದ್ದಾರೆ. ರೇಮಂಡ್ ಡೆರಿಕ್ ಕ್ರಾಸ್ತಾ ಅವರ ಸಂಕಲನ, ಪ್ರಕಾಶ್ ಕುಮಾರ್‌ ಅವರು ಸಂಗೀತ ಸಂಯೋಜಿಸಿದ್ದು, ಚಿತ್ರವನ್ನು Axess Film Factory Production ಬ್ಯಾನರ್‌ ಅಡಿಯಲ್ಲಿ ಜಿ ದಿಲ್ಲಿ ಬಾಬು ಅವರು ನಿರ್ಮಿಸಿದ್ದಾರೆ. ಸಿನಿಮಾ ಇದೇ ಏಪ್ರಿಲ್‌ 4ರಂದು ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.

LEAVE A REPLY

Connect with

Please enter your comment!
Please enter your name here