ಟ್ರೈಲರ್‌ ಮೂಲಕ ಸದ್ದು ಮಾಡಿದ ‘ಗಜಾನನ ಅಂಡ್‌ ಗ್ಯಾಂಗ್‌’ ಸಿನಿಮಾ ಜೂನ್‌ 3ರಂದು ತೆರೆಕಾಣಲಿದೆ. ಕಾಲೇಜಿನ ಗೆಳೆಯರ ಸ್ನೇಹ, ಪ್ರೀತಿ, ವೈಷಮ್ಯದ ಸುತ್ತ ಸಾಗುವ ಕಥಾನಕ. ಕಿರುತೆರೆಯ ಚಿರಪರಿಚಿತ ನಟ ಶ್ರೀಮಹದೇವ್‌ ಮತ್ತು ಅದಿತಿ ಪ್ರಭುದೇವ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.

ಕಿರುತೆರೆ ಜನಪ್ರಿಯ ನಟ ಶ್ರೀಮಹದೇವ್‌ ಮತ್ತು ಅದಿತಿ ಪ್ರಭುದೇವ ಜೋಡಿಯ ‘ಗಜಾನನ ಅಂಡ್‌ ಗ್ಯಾಂಗ್‌’ ಸಿನಿಮಾದ ಬಿಡುಗಡೆ ದಿನಾಂಕ ನಿಗಧಿಯಾಗಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದಿದ್ದರೆ ಕಳೆದ ಫೆಬ್ರವರಿ 4ರಂದು ಸಿನಿಮಾ ತೆರೆಕಾಣಬೇಕಿತ್ತು. ಕೋವಿಡ್‌ನಿಂದಾಗಿ ಮುಂದೂಡಲ್ಪಟ್ಟಿದ್ದ ಸಿನಿಮಾ ಇದೀಗ ಹೊಸ ಬಿಡುಗಡೆ ದಿನಾಂಕ ಪ್ರಕಟಿಸಿದೆ. ‘ಗಜಾನನ ಅಂಡ್ ಗ್ಯಾಂಗ್’ ಜೂನ್ 3ರಂದು ರಾಜ್ಯಾದ್ಯಂತ 300ಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ ರಿಲೀಸ್ ಆಗುತ್ತಿದೆ. ಈ ಬಗ್ಗೆ ಸಿನಿಮಾ ತಂಡ ಅಧಿಕೃತ ಘೋಷಣೆ ಮಾಡಿದೆ. ‘ನಮ್ ಗಣಿ ಬಿಕಾಂ ಪಾಸ್‌’ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದ ನಿರ್ದೇಶಕ ಮತ್ತು ನಟ ಅಭಿಷೇಕ್‌ ‘ಗಜಾನನ ಅಂಡ್ ಗ್ಯಾಂಗ್’ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದು, ನಿರ್ದೇಶನದ ಜತೆಗೆ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

“‘ಗಜಾನನ ಅಂಡ್ ಗ್ಯಾಂಗ್’ ಕಾಲೇಜ್ ಸ್ಟೋರಿ. ಕಾಲೇಜಿನ ಹೀರೋ, ಹೀರೋಯಿನ್, ಗೆಳೆಯರು ಹಾಗೂ ವಿಲನ್‌ ಸುತ್ತ ಚಿತ್ರದ ಕತೆ ಸಾಗುತ್ತದೆ. ಹಾಸ್ಯಮಿಶ್ರಿತ ಸಂಭಾಷಣೆಗಳು ಪ್ರೇಕ್ಷಕರಿಗೆ ಮುದ ನೀಡಲಿದ್ದು, ಸೆಂಟಿಮೆಂಟ್ ದೃಶ್ಯಗಳು ಮನಕಲುಕುತ್ತವೆ. ಒಟ್ಟಾರೆ ಇದೊಂದು ಫ್ಯಾಮಿಲಿ ಪ್ಯಾಕ್‌ ಮೂವೀ” ಎನ್ನುತ್ತಾರೆ ನಿರ್ದೇಶಕ ಅಭಿಷೇಕ್‌. ಯು.ಎಸ್‌.ನಾಗೇಶ್‌ ಕುಮಾರ್‌ ನಿರ್ಮಾಣದ ಚಿತ್ರಕ್ಕೆ ಪ್ರದ್ಯುತನ್‌ ಸಂಗೀತ, ಉದಯ ಲೀಲಾ ಛಾಯಾಗ್ರಹವಿದೆ. ಬಿಗ್‌ಬಾಸ್‌ ಖ್ಯಾತಿಯ ರಘು ಗೌಡ, ಚೇತನ್‌ ದುರ್ಗ, ನಾಟ್ಯರಂಗ, ಅಶ್ವಿನ್‌ ಹಾಸನ್‌, ಶಮಂತ್‌ ಅಲಿಯಾಸ್‌ ಬ್ರೋ ಗೌಡ ಚಿತ್ರದಲ್ಲಿ ನಟಿಸಿದ್ದಾರೆ.

LEAVE A REPLY

Connect with

Please enter your comment!
Please enter your name here