‘ಯೆಹ್‌ ರಿಶ್ತಾ ಕ್ಯಾ ಕೆಹ್ಲಾತಾ ಹೈ’ ಧಾರಾವಾಹಿ ಖ್ಯಾತಿಯ ನಟಿ ಹೀನಾ ಖಾನ್‌ ತಮ್ಮ ‘Seven One’ ವೆಬ್‌ ಸರಣಿ ಕುರಿತು ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಾಕಿದ್ದಾರೆ. ಅದೀಬ್‌ ರೈಸ್‌ ನಿರ್ದೇಶನದ ಸರಣಿಯಲ್ಲಿ ಅವರದ್ದು ಪೊಲೀಸ್‌ ಅಧಿಕಾರಿ ಪಾತ್ರ.

ನಟಿ ಹೀನಾ ಖಾನ್‌ ತಾವು ನಟಿಸಲಿರುವ ನೂತನ ವೆಬ್‌ ಸರಣಿ ‘Seven One’ ಕುರಿತು ಇನ್‌ಸ್ಟಾಗ್ರಾಮ್‌ ಅಕೌಂಟ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಸೀರೀಸ್‌ನಲ್ಲಿ ಪೊಲೀಸ್‌ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರವರು. ‘ಯೆಹ್‌ ರಿಶ್ತಾ ಕ್ಯಾ ಕೆಹ್ಲಾತಾ ಹೈ’ ಧಾರಾವಾಹಿ ಖ್ಯಾತಿಯ ನಟಿ, “With great pride and excitement, we are thrilled to share the first look of the fantastic Hina Khan in our upcoming series ‘SEVEN ONE’. We promise this crime drama will keep you on the edge of your seat and watch out for @realhinakhan in a never seen before avatar as the dynamic Inspector Radhika Shroff.” ಎಂದು ಸಂದೇಶ ಹಾಕಿದ್ದಾರೆ. Madmidaas Films ನಿರ್ಮಿಸುತ್ತಿರುವ ಸರಣಿಯನ್ನು ಅದೀಬ್‌ ರೈಸ್‌ ನಿರ್ದೇಶಿಸುತ್ತಿದ್ದಾರೆ. ವಿಕ್ರಂ ಕೊಚ್ಚಾರ್‌, ಅಶ್ವಿನ್‌ ಕೌಲ್‌, ಭುವನ್‌ ಅರೋರಾ, ಶಾಬಾದ್‌ ಕಮಲ್‌ ಸರಣಿಯ ಇತರೆ ಪ್ರಮುಖ ಕಲಾವಿದರು.

ಸರಣಿ ಕುರಿತು ಮಾತನಾಡಿರುವ ಹೀನಾ ಖಾನ್‌, “ನಾನಿಲ್ಲಿ ಕ್ಲಿಷ್ಟಕರ ಕೇಸ್‌ ಕುರಿತು ತನಿಖೆ ನಡಿಸುವ ಪೊಲೀಸ್‌ ಆಫೀಸರ್‌ ‘ರಾಧಿಕಾ ಶ್ರಾಫ್‌’ ಪಾತ್ರ ನಿರ್ವಹಿಸುತ್ತಿದ್ದೇನೆ. ಆಕೆ ಬಾಲಿವುಡ್‌ನಲ್ಲಿ ತೋರಿಸುವ ಪೊಲೀಸ್‌ರಂತಲ್ಲ. ಅತಾರ್ಕಿಕ ಸ್ಟಂಟ್ಸ್‌ಗಳು, ಡ್ರಾಮಾ, ಚೇಸ್‌ಗಳು, ಬಿಲ್ಡ್‌ಅಪ್‌ ತೋರಿಸುವಂತಹ ಪಾತ್ರ ಅದಲ್ಲ” ಎಂದಿದ್ದಾರೆ. ತೋಳ್ಬಲಕ್ಕಿಂತ ಬುದ್ಧಿವಂತಿಕೆಯಿಂದ ಕೇಸುಗಳನ್ನು ಪರಿಹರಿಸುವ ಪಾತ್ರ ಹೀರಾರದ್ದು ಎನ್ನುವುದು ಅವರ ಮಾತುಗಳಿಂದ ತಿಳಿದುಬರುತ್ತದೆ. ಈ ಹಿಂದೆ ಹೀನಾ ಅವರು ವಿಕ್ರಂ ಭಟ್‌ ನಿರ್ದೇಶನದ ‘Damaged 2’ ಸರಣಿಯಲ್ಲಿ ನಟಿಸಿದ್ದರು. ‘Seven One’ ಅವರ ಎರಡನೇ ವೆಬ್‌ ಸರಣಿ. ‘ಯೆಹ್‌ ರಿಶ್ತಾ ಕ್ಯಾ ಕೆಹ್ಲಾತಾ ಹೈ’ ಸರಣಿ ಮೂಲಕ ಅವರು ಕಿರುತೆರೆ ವೀಕ್ಷಕರಿಗೆ ಚಿರಪರಿಚಿತರಾಗಿದ್ದಾರೆ. ಇದಾದ ನಂತರ ಬಿಗ್‌ಬಾಸ್‌ ರಿಯಾಲಿಟಿ ಶೋ ಸ್ಪರ್ಧಿಯಾಗಿಯೂ ಅವರು ವೀಕ್ಷಕರನ್ನು ರಂಜಿಸಿದ್ದರು.

Previous articleಶ್ರೀಮಹದೇವ್‌ – ಅದಿತಿ ‘ಗಜಾನನ ಅಂಡ್ ಗ್ಯಾಂಗ್’ ಜೂನ್‌ 3ಕ್ಕೆ ತೆರೆಗೆ
Next articleಮುದ್ದಾದ ಬಲೆ ಹೆಣೆದವನ ಸಾಕ್ಷ್ಯಚಿತ್ರ ‘ದ ಟಿಂಡರ್ ಸ್ವಿಂಡ್ಲರ್’

LEAVE A REPLY

Connect with

Please enter your comment!
Please enter your name here