ಸಾಕಷ್ಟು ಸುದ್ದಿ ಮಾಡುತ್ತಿರುವ ಉಪೇಂದ್ರ ನಟಿಸಿ, ನಿರ್ದೇಶಿಸುತ್ತಿರುವ ‘UI’ ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ಚಿತ್ರದಲ್ಲಿ ಯತೇಚ್ಛವಾಗಿ ಗ್ರಾಫಿಕ್ಸ್‌, ಆರ್ಟಿಫಿಷಿಯಲ್‌ ಇಂಟಲಿಜೆನ್ಸ್‌ ಇಮೇಜಸ್‌ ಬಳಕೆಯಾಗಿರುವುದಕ್ಕೆ ಟೀಸರ್‌ ಸಾಕ್ಷ್ಯ ನುಡಿಯುತ್ತಿದೆ. ಜಿ ಮನೋಹರ್‌ ಮತ್ತು ಕೆ ಪಿ ಶ್ರೀಕಾಂತ್‌ ನಿರ್ಮಿಸುತ್ತಿರುವ ದುಬಾರಿ ಬಜೆಟ್‌ PAN ಇಂಡಿಯಾ ಚಿತ್ರವಿದು.

ಉಪೇಂದ್ರ ಅವರ ಬಹುನಿರೀಕ್ಷಿತ ‘UI’ ಚಿತ್ರದ ಫಸ್ಟ್‌ಲುಕ್‌ ಟೀಸರ್‌ ಬಿಡುಗಡೆಯಾಗಿದೆ. ಉಪೇಂದ್ರ ಅವರು 8 ವರ್ಷಗಳ ಬಳಿಕ ನಿರ್ದೇಶಿಸುತ್ತಿರುವ ಸಿನಿಮಾ ಇದಾಗಿದ್ದು, ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಹಾಲಿವುಡ್‌ ನಂಟಿರುವಂತೆ ಈ ಟೀಸರ್‌ ಮೂಡಿಬಂದಿದೆ. ಟೀಸರ್‌ ಆರಂಭವಾದಾಗ ಆನಿಮೇಟೆಡ್‌ ಚಿತ್ರದ ರೀತಿ ಕಾಣಿಸುತ್ತದೆ. ನಂತರ ದಟ್ಟವಾದ ಕಾಡು, ನದಿ, ಪರ್ವತಗಳು ಕಾಣಸಿಗುತ್ತವೆ. ಸಾಧು ಕೋಕಿಲ ಅವರು ಜೋಕರ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಂತರ ರವಿಶಂಕರ್‌ ಬರುತ್ತಾರೆ. ಕೊನೆಯಲ್ಲಿ ಉಪೇಂದ್ರ ಅವರು ಕೊಂಬಿರುವ ಕುದುರೆ ಮೇಲೆ ಬಂದು ವಿಭಿನ್ನವಾದ ಲುಕ್‌ ನೀಡಿದ್ದಾರೆ.

ಚಿತ್ರದಲ್ಲಿ ಸನ್ನಿ ಲಿಯೋನ್, ಮುರಳಿ ಶರ್ಮಾ, ನಿಧಿ ಸುಬ್ಬಯ್ಯ, ಇಂದ್ರಜಿತ್ ಲಂಕೇಶ್ ಮತ್ತು ಮುರಳಿ ಕೃಷ್ಣ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಅಜನೀಶ್ ಬಿ ಲೋಕನಾಥ್ ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದು, ಚಿತ್ರವನ್ನು Lahari Films ಬ್ಯಾನರ್‌ನಡಿಯಲ್ಲಿ ಜಿ ಮನೋಹರನ್ ಮತ್ತು ಕೆಪಿ ಶ್ರೀಕಾಂತ್ ನಿರ್ಮಿಸುತ್ತಿದ್ದಾರೆ. ಈ ಸಿನಿಮಾ ಉಪೇಂದ್ರ ಅವರ 11ನೇ ನಿರ್ದೇಶನದ ಚಿತ್ರವಾಗಿದ್ದು, 2015ರಲ್ಲಿ ಬಿಡುಗಡೆಯಾದ ‘ಉಪ್ಪಿ 2’ ಚಿತ್ರದ ನಂತರ ಅವರು ನಿರ್ದೇಶನಕ್ಕೆ ಮರಳಿದ್ದಾರೆ. ಚಿತ್ರ 100 ಕೋಟಿಗೂ ಅಧಿಕ ಬಜೆಟ್‌ನಲ್ಲಿ ತಯಾರಾಗುತ್ತಿದೆ ಎನ್ನಲಾಗಿದೆ.

LEAVE A REPLY

Connect with

Please enter your comment!
Please enter your name here