ವೆಂಕಿ ಅಟ್ಲೂರಿ ನಿರ್ದೇಶನದಲ್ಲಿ ಧನುಷ್‌ರ ತೆಲುಗು – ತಮಿಳು ದ್ವಿಭಾಷಾ ಸಿನಿಮಾ ಸೆಟ್ಟೇರಿದೆ. ಮೋಷನ್‌ ಪೋಸ್ಟರ್‌ ಬಿಡುಗಡೆಯಾಗಿದ್ದು, ಜ್ಯೂನಿಯರ್‌ ಕಾಲೇಜು ಉಪನ್ಯಾಸಕನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಧನುಷ್‌.

ನಟ ಧನುಷ್‌ ಇಂದು ತಮ್ಮ ಹೊಸ ಸಿನಿಮಾ ಘೋಷಿಸಿದ್ದಾರೆ. ವೆಂಕಿ ಅಟ್ಲೂರಿ ನಿರ್ದೇಶನದ ಸಿನಿಮಾ ತೆಲುಗು (ಸರ್‌) ಮತ್ತು ತಮಿಳು (ವಾಥಿ) ದ್ವಿಭಾಷೆಗಳಲ್ಲಿ ಸಿದ್ಧವಾಗಲಿದೆ. ಟ್ವಿಟರ್‌ನಲ್ಲಿ ಧನುಷ್‌ ತ‌ಮ್ಮ ನೂತನ ಸಿನಿಮಾದ ಪೋಸ್ಟರ್‌ ಹಂಚಿಕೊಂಡಿದ್ದಾರೆ. ಸಿತಾರಾ ಎಂಟರ್‌ಟೇನ್‌ಮೆಂಟ್ಸ್‌ನ ಸೂರ್ಯದೇವರ ನಾಗವಂಶಿ ಮತ್ತು ಫಾರ್ಚೂನ್‌ ಫೋರ್‌ ಸಿನಿಮಾಸ್‌ನ ಸಾಯಿ ಸೌಜನ್ಯ ಚಿತ್ರ ನಿರ್ಮಿಸುತ್ತಿದ್ದು, ‘ರಂಗ್‌ ದೇ’ ಖ್ಯಾತಿಯ ವೆಂಕಿ ಅಟ್ಲೂರಿ ಸಿನಿಮಾ ನಿರ್ದೇಶಿಸಲಿದ್ದಾರೆ. ನಿರ್ಮಾಪಕ ನಾಗವಂಶಿ ಅವರು ಚಿತ್ರದ ಮೋಷನ್‌ ಪೋಸ್ಟರ್‌ ಶೇರ್‌ ಮಾಡಿ, “ಇದು ಸಾಮಾನ್ಯ ವ್ಯಕ್ತಿಯ ಮಹತ್ವಾಕಾಂಕ್ಷೆಯ ಜರ್ನೀ” ಎಂದು ಟ್ವೀಟ್‌ ಮಾಡಿದ್ದಾರೆ. ಮೋಷನ್‌ ಪೋಸ್ಟರ್‌ ಹೇಳುವಂತೆ ಚಿತ್ರದಲ್ಲಿ ಧನುಷ್‌ ಜ್ಯೂನಿಯರ್‌ ಕಾಲೇಜಿನ ಉಪನ್ಯಾಸಕರಾಗಿ ಕಾಣಿಸಿಕೊಳ್ಳುವ ಸೂಚನೆ ಸಿಗುತ್ತದೆ.

ಸಂಯುಕ್ತಾ ಮೆನನ್‌ ಚಿತ್ರದ ನಾಯಕಿ. ಸಾಯಿ ಕುಮಾರ್‌, ತನಿಕೆಲ್ಲಾ ಭರಣಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಲಿದ್ದಾರೆ. ಜಿ.ವಿ.ಪ್ರಕಾಶ್‌ ಕುಮಾರ್‌ ಸಂಗೀತ ಸಂಯೋಜಿಸುತ್ತಿದ್ದು, ದಿನೇಶ್‌ ಕೃಷ್ಣನ್‌ ಸಿನಿಮಾಟೋಗ್ರಫಿ ಹೊಣೆ ಹೊತ್ತಿದ್ದಾರೆ. 2022ರ ಜನವರಿಯಲ್ಲಿ ಚಿತ್ರೀಕರಣಕ್ಕೆ ಚಾಲನೆ ಸಿಗಲಿದೆ. ಕೆಲವು ದಿನಗಳ ಹಿಂದೆ ನಟ ಧನುಷ್‌ ತಮಿಳು, ತೆಲುಗು ಮತ್ತು ಹಿಂದಿಯಲ್ಲಿ ತಯಾರಾಗಲಿರುವ ತಮ್ಮ ಪ್ಯಾನ್‌ ಇಂಡಿಯಾ ಸಿನಿಮಾ ಕುರಿತು ಸುದ್ದಿ ನೀಡಿದ್ದರು. ‘ಲವ್‌ ಸ್ಟೋರಿ’ ಖ್ಯಾತಿಯ ಶೇಖರ್‌ ಕಮ್ಮುಲು ಈ ಚಿತ್ರದ ನಿರ್ದೇಶಕರು ಎಂದು ಗೊತ್ತಾಗಿತ್ತು. ಇನ್ನು ಧನುಷ್‌ ಅಭಿನಯದ ‘ಅತ್ರಂಗಿ ರೇ’ ಹಿಂದಿ ಸಿನಿಮಾ ನಾಳೆಯಿಂದ ಡಿಸ್ನೀ ಪ್ಲಸ್‌ ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮ್‌ ಆಗಲಿದೆ. ಅವರ ‘ದಿ ಗ್ರೇ ಮ್ಯಾನ್‌ʼ, ‘ತಿರುಚಿತ್ರಂಬಲಂ’, ‘ನಾನೇ ವರುವೆನ್‌’ ಚಿತ್ರಗಳು ತೆರೆಗೆ ಸಿದ್ಧವಾಗುತ್ತಿವೆ.

LEAVE A REPLY

Connect with

Please enter your comment!
Please enter your name here