ಸಿಂಪಲ್‌ ಸುನಿ ನಿರ್ದೇಶನದಲ್ಲಿ ಗಣೇಶ್‌ ಮತ್ತು ನಿಶ್ವಿಕಾ ಅಭಿನಯದ ‘ಸಖತ್’ ಸಿನಿಮಾ 25 ದಿನಗಳನ್ನು ಪೂರೈಸಿದೆ. ನೆಟ್‌ಫ್ಲಿಕ್ಸ್‌ ಓಟಿಟಿಗೆ ಸಿನಿಮಾ ಬಿಕರಿಯಾಗಿದ್ದು, ಗೆದ್ದ ಹುಮ್ಮಸ್ಸಿನಲ್ಲಿದೆ ಚಿತ್ರತಂಡ.

“ಸಿನಿಮಾ ಬಗ್ಗೆ ಪ್ರೇಕ್ಷಕರಿಂದ ಒಳ್ಳೆ ರೆಸ್ಪಾನ್ಸ್ ಸಿಕ್ತಿದೆ. ಫ್ಯಾಮಿಲಿ ಆಡಿಯನ್ಸ್ ಸಿನಿಮಾ ಎಂಜಾಯ್ ಮಾಡ್ತಿದ್ದಾರೆ. ಕೋವಿಡ್ ಭಯದಿಂದ ನಮಗೆ ತುಸು ಹೊಡೆತ ಬಿದ್ದಿದ್ದು ನಿಜ. ಆದರೂ ಸಿನಿಮಾದ ಬಗ್ಗೆ ಬಂದ ಒಳ್ಳೆಯ ಬಾಯ್ಮಾತಿನ ಪ್ರಚಾರದಿಂದಾಗಿ ಮೂರು ವಾರಗಳ ನಂತರವೂ ಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ” ಎಂದರು ನಟ ಗಣೇಶ್‌. ನಿರ್ದೇಶಕ ಸಿಂಪಲ್‌ ಸುನಿ ಕಾಂಬಿನೇಷನ್‌ನಲ್ಲಿ ಇದು ಅವರಿಗೆ ಎರಡನೇ ಸಿನಿಮಾ. ಅವರ ಚಿತ್ರವೀಗ 25ನೇ ದಿನದತ್ತ ದಾಪುಗಾಲಿಟ್ಟಿದ್ದು, ಇದೇ ಖುಷಿಯಲ್ಲಿ ‘ಸಖತ್’ ಬಳಗ ಒಂದಷ್ಟು ವಿಚಾರಗಳ ಬಗ್ಗೆ ಮಾಹಿತಿ ಹಂಚಿಕೊಂಡಿತು.

ನಿರ್ದೇಶಕ ಸಿಂಪಲ್ ಸುನಿ, “ಕೊರೋನಾ ಹಾಗೂ ಬೇರೆ ಸಿನಿಮಾಗಳ ನಡುವೆಯೂ ಸಖತ್ ಗೆದ್ದಿದೆ. 2ನೇ ವಾರಕ್ಕೆ ನಾವು ಹಾಕಿದ ಬಂಡವಾಳ ವಾಪಸ್ ಬಂದಿದ್ದು, 3 ವಾರದಲ್ಲಿ ಬರುವುದೆಲ್ಲವೂ ಲಾಭವಾಗಲಿದೆ. ಇನ್ನೊಂದು ಮುಖ್ಯ ವಿಷಯವೇನೆಂದರೆ ಸಿನಿಮಾ ನೆಟ್‌ಫ್ಲಿಕ್ಸ್‌ಗೆ ಮಾರಾಟವಾಗಿದ್ದು, ಸದ್ಯದಲ್ಲೇ OTT ಯಲ್ಲಿ ಪ್ರದರ್ಶನಗೊಳ್ಳಲಿದೆ. ಟಿವಿ ಪ್ರಸಾರದ ಹಕ್ಕನ್ನು ಉದಯ ಟಿವಿ ಖರೀದಿಸಿದೆ” ಎಂದರು. ಕೆವಿಎನ್ ಪ್ರೊಡಕ್ಷನ್ ಹೌಸ್ ನಿರ್ಮಿಸಿರುವ ಸಖತ್ ಸಿನಿಮಾ ಬಿಸಿನೆಸ್ ವಿಚಾರದಲ್ಲಿ ತಮಗೆ ತೃಪ್ತಿ ತಂದಿದೆ. ಖುಷಿಯಾಗಿದ್ದೇವೆ ಎಂದು ಸಂಸ್ಥೆಯ ಸುಪ್ರೀತ್‌ ಅಭಿಪ್ರಾಯ ವ್ಯಕ್ತಪಡಿಸಿದರು.

ಕೊರೋನಾ ಹಾಗೂ ಬೇರೆ ಸಿನಿಮಾಗಳ ನಡುವೆಯೂ ಸಖತ್ ಸಿನಿಮಾ ಸಕ್ಸಸ್ ಖುಷಿಯಲ್ಲಿದೆ. ಪರಭಾಷಾ ಸಿನಿಮಾಗಳಿಗೆ ಸೆಡ್ಡು ಹೊಡೆದು 25ನೇ ದಿನದತ್ತ ಮುನ್ನುಗುತ್ತಿರುವುದು ಇಡೀ ಸಖತ್ ಬಳಗಕ್ಕೆ ಖುಷಿಕೊಟ್ಟಿದೆ. ಗಣೇಶ್ ಅಭಿನಯದ ಸಖತ್ ಸಿನಿಮಾ ನವೆಂಬರ್ 26 ರಂದು ರಾಜ್ಯಾದ್ಯಂತ ರಿಲೀಸ್ ಆಗಿತ್ತು. ಗಣಿಗೆ ಜೋಡಿಯಾಗಿ ನಿಶ್ವಿಕಾ ನಾಯ್ಡು ಹಾಗೂ ಸುರಭಿ ನಟಿಸಿದ್ದಾರೆ. ನಿಶಾ ವೆಂಕಟ್ ಕೊಂಕಣಿ, ಸುಪ್ರಿತ್ ನಿರ್ಮಾಣ ಮಾಡಿದ್ದಾರೆ. ರಂಗಾಯಣ ರಘು, ರವಿಶಂಕರ್ ಗೌಡ, ಸಾಧು ಕೋಕಿಲ, ಧರ್ಮಣ್ಣ ಮತ್ತಿತರರು ಅಭಿನಯಿಸಿದ್ದಾರೆ. ‘ಸಖತ್‌’ ಚಿತ್ರತಂಡ ಅಗಲಿದ ನಟ ಪುನೀತ್‌ ರಾಜಕುಮಾರ್‌ ನೆನಪಿಗೆ ಒಂದು ಲಿರಿಕಲ್‌ ವೀಡಿಯೋ ಮಾಡಿ ರಿಲೀಸ್‌ ಮಾಡಿದೆ.

LEAVE A REPLY

Connect with

Please enter your comment!
Please enter your name here