ಥಿಯೇಟರ್‌ನಲ್ಲಿ ತೆರೆಕಂಡು ವಿಮರ್ಶಕರು ಹಾಗೂ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾದ ‘ಗರುಡ ಗಮನ ವೃಷಭ ವಾಹನ’ ಜೀ5 ನಲ್ಲಿ ಇದೇ 13ರಿಂದ ಸ್ಟ್ರೀಮ್‌ ಆಗಲಿದೆ. ಇದಕ್ಕಾಗಿ ಜೀ5 ರೂಪಿಸಿರುವ ಶಿವರಾಜಕುಮಾರ್‌ ಮತ್ತು ರಾಜ್‌ ಬಿ. ಶೆಟ್ಟಿ ಪ್ರೊಮೋಷನ್‌ ವೀಡಿಯೋ ಗಮನಸೆಳೆಯುತ್ತಿದೆ.

ಶಿವರಾಜ್ ಕುಮಾರ್ ಮತ್ತು ಹರ್ಷ ಕಾಂಬಿನೇಷನ್‌ನ ‘ಭಜರಂಗಿ 2’ ಸಿನಿಮಾ ಜೀ5 ಒಟಿಟಿಯಲ್ಲಿ ದೊಡ್ಡ ಸಂಖ್ಯೆಯಲ್ಲಿ ವೀಕ್ಷಣೆ ಪಡೆಯುತ್ತಿದೆ. ಈ ಸಿನಿಮಾದ ಬೆನ್ನಲ್ಲೇ ರವಿಚಂದ್ರನ್ ನಟನೆಯ ‘ಕನ್ನಡಿಗ’ ಸಿನಿಮಾಗೂ ಒಟಿಟಿಯಲ್ಲಿ ಉತ್ತಮ ರೆಸ್ಪಾನ್ಸ್‌ ಸಿಕ್ಕಿದೆ. ಇದೀಗ ರಾಜ್‌ ಬಿ.ಶೆಟ್ಟಿ ನಟಿಸಿ, ನಿರ್ದೇಶಿಸಿರುವ ‘ಗರುಡ ಗಮನ ವೃಷಭ ವಾಹನ’ ಜೀ5 ನಲ್ಲಿ ಇದೇ 13ರಿಂದ ಸ್ಟ್ರೀಮ್‌ ಆಗಲಿದೆ. ನವೆಂಬರ್ 19ರಂದು ‘ಗರುಡ ಗಮನ ವೃಷಭ ವಾಹನ’ ಥಿಯೇಟರ್‌ನಲ್ಲಿ ತೆರೆಕಂಡಿತ್ತು. ರಿಷಬ್ ಶೆಟ್ಟಿ ಮತ್ತು ರಾಜ್‌ ಶೆಟ್ಟಿ ನಟನೆಯ ಚಿತ್ರ ಆಕರ್ಷಕ ನಿರೂಪಣೆಯಿಂದಾಗಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿತ್ತು. ಈಗ ಹೊಸ ವರ್ಷದಲ್ಲಿ ಓಟಿಟಿಗೆ ಬರುತ್ತಿರುವ ಸಿನಿಮಾದ ಡಿಜಿಟಲ್‌ ಪ್ರೊಮೋಷನ್‌ಗೆ ಶಿವರಾಜಕುಮಾರ್ ನೆರವಾಗಿದ್ದಾರೆ.

‘ಗರುಡ ಗಮನ ವೃಷಭ ವಾಹನ’ ಜೀ5ನಲ್ಲಿ ಬಿಡುಗಡೆಯಾಗುತ್ತಿರುವ ಸಂದರ್ಭದಲ್ಲಿ ಶಿವರಾಜಕುಮಾರ್‌ ಅವರು ನಟ, ನಿರ್ದೇಶಕ ರಾಜ್ ಬಿ. ಶೆಟ್ಟಿ ಅವರಿಗೆ ಕರೆ ಮಾಡಿ ಅಭಿನಂದಿಸಿದ್ದಾರೆ. ಅದಕ್ಕೂ ಮುನ್ನ ಶಿವರಾಜಕುಮಾರ್‌, “ಮಂಗಳಾದೇವಿಯಲ್ಲಿ ನೀವೇನ್‌ ಡಾನ್‌ ಆ? ನಾನು ಬರ್ತಾ ಇದೀನಿ. ನೀನಾ?, ನಾನಾ? ನೋಡೇ ಬಿಡೋಣ” ಎಂದು ರಾಜ್‌ ಬಿ. ಶೆಟ್ಟಿ ಅವರಿಗೆ ಕೇಳಿದ್ದಾರೆ. ಕರೆ ಬಗ್ಗೆ ರಾಜ್‌ ಬಿ.ಶೆಟ್ಟಿ ಅವರಿಗೆ ಮಾಹಿತಿ ಇರಲಿಲ್ಲ. ಇದರಿಂದ ತಬ್ಬಿಬ್ಬಾದ ಅವರಿಗೆ ಗಾಬರಿಯಾಗಿದೆ. ನಂತರ ತಾವು ‘ಭಜರಂಗಿ’ ಎಂದಾಗ ಶೆಟ್ಟರಿಗೆ ಖುಷಿಯಾಗಿದೆ. ಹೊಸಬರ ಸಿನಿಮಾಗಳು, ನಟರು, ತಂತ್ರಜ್ಞರ ಬೆಂಬಲಕ್ಕೆ ನಿಲ್ಲುವ ಶಿವರಾಜ್‌ ‘GGVV’ ಪ್ರೊಮೋಷನ್‌ ವೀಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ. ಥಿಯೇಟರ್‌ಗಳಲ್ಲಿ ಗಮನ ಸೆಳೆದ ‘GGVV’ಗೆ ಓಟಿಟಿಯಲ್ಲೂ ಉತ್ತಮ ಪ್ರತಿಕ್ರಿಯೆ ನಿರೀಕ್ಷಿಸುತ್ತಿದ್ದೇವೆ ಎಂದು ಜೀ5 ಹೇಳಿಕೊಂಡಿದೆ.

LEAVE A REPLY

Connect with

Please enter your comment!
Please enter your name here