ತರಂಗ ವಿಶ್ವ ಮತ್ತು ವಿಲೋಕ್‌ ರಾಜ್‌ ಅಭಿನಯದ ‘ಗಿರ್ಕಿ’ ಮೋಷನ್‌ ಪೋಸ್ಟರನ್ನು ನಟ ಶಿವರಾಜಕುಮಾರ್‌ ರಿಲೀಸ್‌ ಮಾಡಿದ್ದಾರೆ. ದಿವ್ಯಾ ಉರುಡುಗ ಮತ್ತು ರಾಶಿ ಮಹದೇವ್‌ ನಾಯಕಿಯರು. ಕಾಮಿಡಿ, ಲವ್‌, ಥ್ರಿಲ್ಲರ್‌ ಕತೆಯ ಸಿನಿಮಾ ಮೇ ತಿಂಗಳಲ್ಲಿ ತೆರೆಕಾಣಲಿದೆ.

ವೀರೇಶ್‌ ಪಿ.ಎಂ. ನಿರ್ದೇಶನದಲ್ಲಿ ತರಂಗ ವಿಶ್ವ ಮತ್ತು ವಿಲೋಕ್‌ ರಾಜ್‌ ನಟಿಸಿರುವ ‘ಗಿರ್ಕಿ’ ಸಿನಿಮಾದ ಮೋಷನ್‌ ಪೋಸ್ಟರ್‌ ರಿಲೀಸ್‌ ಆಗಿದೆ. ಯೋಗರಾಜ್‌ ಭಟ್‌ ಅವರೊಂದಿಗೆ ಕೆಲಸ ಮಾಡಿರುವ ನಿರ್ದೇಶಕ ವೀರೇಶ್‌ ಪಿ.ಎಂ. ಅವರೇ ಈ ಚಿತ್ರಕ್ಕೆ ಕತೆ, ಚಿತ್ರಕಥೆ ಮತ್ತು ಸಂಭಾಷಣೆ ರಚಿಸಿದ್ದಾರೆ. ಎದಿತ್ ಫಿಲಂ ಫ್ಯಾಕ್ಟರಿ ಮತ್ತು ವಾಸುಕಿ ಮೂವೀಸ್ ಸಹಯೋಗದೊಂದಿಗೆ ತರಂಗ ವಿಶ್ವ ನಿರ್ಮಿಸಿರುವ ‘ಗಿರ್ಕಿ’ ಮೋಷನ್‌ ಪೋಸ್ಟರ್‌ A2 Musicನಲ್ಲಿ ಬಿಡುಗಡೆಯಾಗಿದೆ. ಲವ್‌, ಥ್ರಿಲ್ಲರ್‌ ಮತ್ತು ಕಾಮಿಡಿ ಕಥಾಹಂದರದ ಸಿನಿಮಾ ಮೇ ತಿಂಗಳಲ್ಲಿ ತೆರೆಕಾಣಲಿದ್ದು, ಪ್ರಚಾರಕಾರ್ಯ ಶುರುವಾಗಿದೆ.

ವಾಸುಕಿ ಭುವನ್ ಸಹ ನಿರ್ಮಾಣವಿರುವ ಚಿತ್ರಕ್ಕೆ ವೀರ್ ಸಮರ್ಥ್ ಸಂಗೀತ ಸಂಯೋಜಿಸಿದ್ದಾರೆ. ಯೋಗರಾಜ್ ಭಟ್, ಜಯಂತ ಕಾಯ್ಕಿಣಿ, ವೀರೇಶ್.ಪಿ.ಎಂ ಹಾಡುಗಳನ್ನು ಬರೆದಿದ್ದು, ನವೀನ್ ಕುಮಾರ್ ಛಲ್ಲ ಛಾಯಾಗ್ರಹಣ, ಮಧು ತುಂಬಕೆರೆ ಸಂಕಲನ, ವಿನೋದ್‌ ಮಾಸ್ಟರ್‌ ಸಾಹಸ ಮತ್ತು ರಾಮು, ಮೋಹನ್‌ ನೃತ್ಯ ನಿರ್ದೇಶನ ಚಿತ್ರಕ್ಕಿದೆ. ಹಾಸ್ಯನಟನಾಗಿ ಪರಿಚಿತರಾಗಿರುವ ತರಂಗ ವಿಶ್ವ ಹಾಗೂ ವಿಲೋಕ್ ರಾಜ್ ನಾಯಕರಾಗಿ ನಟಿಸಿದ್ದು, ‘ಬಿಗ್ ಬಾಸ್’ ಖ್ಯಾತಿಯ ದಿವ್ಯ ಉರುಡುಗ ಹಾಗೂ ರಾಶಿ ಮಹದೇವ್ ಚಿತ್ರದ ನಾಯಕಿಯರು.

Previous article‘ಮಹಾವೀರ್ಯಾರ್‌’ ಟೀಸರ್; ನಿವಿನ್‌ ಪೌಲಿ, ಶಾನ್ವಿ ಶ್ರೀವಾತ್ಸವ್‌ ಸಿನಿಮಾ
Next article‘ಬಾಂಡ್‌ ರವಿ’ ಪ್ರಮೋದ್‌; ಪ್ರಜ್ವಲ್‌ ನಿರ್ದೇಶನದ ಥ್ರಿಲ್ಲರ್‌ ಸಿನಿಮಾ

LEAVE A REPLY

Connect with



Please enter your comment!
Please enter your name here