ಪ್ರಜ್ವಲ್‌ ಎಸ್‌.ಪಿ. ಚೊಚ್ಚಲ ನಿರ್ದೇಶನದ ‘ಬಾಂಡ್‌ ರವಿ’ ಸಿನಿಮಾ ಸೆಟ್ಟೇರಿದೆ. ‘ಪ್ರೀಮಿಯರ್‌ ಪದ್ಮಿನಿ’, ‘ರತ್ನನ್‌ ಪ್ರಪಂಚ’ಖ್ಯಾತಿಯ ಪ್ರತಿಭಾವಂತ ನಟ ಪ್ರಮೋದ್‌ ಈ ಚಿತ್ರದ ಹೀರೋ.

ಅನುಭವಿ ಚಿತ್ರನಿರ್ದೇಶಕರಾದ ಎಸ್.ಮಹೇಂದ್ರರ್, ಪ್ರಶಾಂತ್ ರಾಜ್, ಕಾಂತಾ ಕನ್ನಹಳ್ಳಿ ಅವರಿಗೆ ಸಹಾಯಕರಾಗಿ ಕೆಲಸ ಮಾಡಿ ಅನುಭವ ಪಡೆದಿರುವ ಪ್ರಜ್ವಲ್‌ ಎಸ್‌.ಪಿ. ‘ಬಾಂಡ್‌ ರವಿ’ ಸಿನಿಮಾ ಮೂಲಕ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ. ನಿರ್ದೇಶನ ವಿಭಾಗ, ಬರಹಗಾರರಾಗಿ ಅವರಿಗೆ ಹನ್ನೊಂದು ವರ್ಷಗಳ ಅನುಭವವಿದೆ. ‘ಪ್ರೀಮಿಯರ್‌ ಪದ್ಮಿನಿ’, ‘ರತ್ನನ್‌ ಪ್ರಪಂಚ’ ಖ್ಯಾತಿಯ ಪ್ರತಿಭಾವಂತ ನಟ ಪ್ರಮೋದ್‌ ಈ ಚಿತ್ರದ ಹೀರೋ. ಹಣೆಯಲ್ಲಿ ರಕ್ತ, ಕೈಯಲ್ಲಿ ಬೇಡಿ ತೊಟ್ಟಿರುವ ಖಡಕ್‌ ಅವತಾರದಲ್ಲಿ ಪ್ರಮೋದ್‌ ಫಸ್ಟ್‌ಲುಕ್‌ ರಿಲೀಸ್‌ ಆಗಿದೆ. ಇದೊಂದು ಕಮರ್ಷಿಯಲ್ ಎಮೋಷನಲ್ ಥ್ರಿಲ್ಲರ್ ಜಾನರ್ ಸಿನಿಮಾ ಎಂದು ಹೇಳಿಕೊಳ್ಳುತ್ತಾರೆ ನಿರ್ದೇಶಕ ಪ್ರಜ್ವಲ್‌. ಲೈಫ್ ಲೈನ್ ಫಿಲಂಸ್‌ ಬ್ಯಾನರ್‌ನಡಿ ನರಸಿಂಹಮೂರ್ತಿ ಚಿತ್ರ ನಿರ್ಮಿಸುತ್ತಿದ್ದಾರೆ. ಮಲ್ಲಿಕಾರ್ಜುನ್ ಕಾಶಿ ಹಾಗೂ ಝೇವಿಯರ್ ಫರ್ನಾಂಡಿಸ್ ಸಹ ನಿರ್ಮಾಪಕರು. ರವಿಕಾಳೆ, ಧರ್ಮ, ವಿಜಯ್ ಚೆಂಡೂರ್, ಶೋಭರಾಜ್ ಪ್ರಮುಖ ಕಲಾವಿದರು. ಕೆ.ಎಸ್.ಚಂದ್ರಶೇಖರ್ ಛಾಯಾಗ್ರಹಣ, ಅರ್ಜುನ್ ಕಿಟ್ಟು ಸಂಕಲನ, ಸುನಿಲ್ ಮತ್ತು ದೇವರಾಜ್ ಸಂಭಾಷಣೆ, ಮನೋಮೂರ್ತಿ ಸಂಗೀತ ಸಿನಿಮಾಗಿದೆ. ಜಯಂತ್ ಕಾಯ್ಕಿಣಿ, ನಾಗೇಂದ್ರ ಪ್ರಸಾದ್ ಗೀತೆಗಳನ್ನು ರಚಿಸಿದ್ದಾರೆ.

Previous article‘ಗಿರ್ಕಿ’ ಮೋಷನ್‌ ಪೋಸ್ಟರ್‌ ಬಿಡುಗಡೆ ಮಾಡಿದ ಶಿವರಾಜಕುಮಾರ್‌
Next articleಕಮರ್ಶಿಯಲ್ ಚಿತ್ರಜಗದಲ್ಲಿ ವಿರಳವಾದ ಸ್ತ್ರೀ ಪ್ರಧಾನ ಸಿನಿಮಾ ‘ಹೇ ಸಿನಮಿಕಾ’

LEAVE A REPLY

Connect with

Please enter your comment!
Please enter your name here