ಅಬ್ರಿದ್‌ ಶೈನ್‌ ನಿರ್ದೇಶನದಲ್ಲಿ ನಿವಿನ್‌ ಪೌಲಿ ನಟಿಸಿರುವ ಟೈಮ್‌ ಟ್ರಾವೆಲ್‌ ಸಿನಿಮಾ ‘ಮಹಾವೀರ್ಯಾರ್‌’ ಟೀಸರ್‌ ಬಿಡುಗಡೆಯಾಗಿದೆ. ನಟರಾದ ನಿವಿನ್‌ ಮತ್ತು ಅಸಿಫ್‌ ಅಲಿ ದಶಕದ ನಂತರ ಈ ಚಿತ್ರದಲ್ಲಿ ಜೊತೆಯಾಗಿ ನಟಿಸಿದ್ದಾರೆ.

ನಿವಿನ್‌ ಪೌಲಿ ಮತ್ತು ಬಹುಭಾಷಾ ನಟಿ ಶಾನ್ವಿ ಶ್ರೀವಾತ್ಸವ್‌ ಜೋಡಿಯ ಬಹುಕೋಟಿ ವೆಚ್ಚದ ‘ಮಹಾವೀರ್ಯಾರ್‌’ ಮಲಯಾಳಂ ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ನಿವಿನ್ ಪೌಲಿ ಜತೆಗೆ ಆಸಿಫ್ ಅಲಿ ಮುಖ್ಯಭೂಮಿಕೆಯಲ್ಲಿರುವ ಈ ಸಿನಿಮಾ ಸಂಪೂರ್ಣ ಫ್ಯಾಂಟಸಿ ಹಿನ್ನೆಲೆಯ ಕಥಾನಕ. ಟೈಮ್​ ಟ್ರಾವೆಲಿಂಗ್ ಸೇರಿ ಕಾನೂನು, ಕಟ್ಟಳೆ ಬಗ್ಗೆಯೂ ಚಿತ್ರ ಮಾತನಾಡಲಿದೆ. ನಟ ನಿವಿನ್ ಅವರ ಹೋಮ್ ಬ್ಯಾನರ್ ನಿವಿನ್ ಜೂನಿಯರ್ ಪಿಕ್ಚರ್ಸ್ ಸಂಸ್ಥೆ ಅಡಿ ಚಿತ್ರ ನಿರ್ಮಾಣವಾಗಿದೆ. ಪಿ.ಎಸ್.ಶ್ಯಾಮ್​ನಾಸ್ ​ಅವರ ಇಂಡಿಯನ್ ಮೂವಿ ಮೇಕರ್ಸ್ ನಿರ್ಮಾಣ ಸಹಯೋಗ ಚಿತ್ರಕ್ಕಿದೆ.

ಈ ಹಿಂದೆ ನಿವಿನ್ ಜತೆಗೆ ‘1983’ ಮತ್ತು ‘ಆ್ಯಕ್ಷನ್ ಹೀರೋ ಬಿಜು’ ಸಿನಿಮಾಗಳನ್ನು ನಿರ್ದೇಶಿಸಿದ್ದ ಅಬ್ರಿದ್ ಶೈನ್, ‘ಮಹಾವೀರ್ಯಾರ’ ಚಿತ್ರಕ್ಕೂ ಆ್ಯಕ್ಷನ್ ಕಟ್ ಹೇಳಿದ್ದು, ಮೂರನೇ ಬಾರಿ ಜೊತೆಯಾಗಿದ್ದಾರೆ. ಪ್ರಮುಖ ಪಾತ್ರಗಳಲ್ಲಿರುವ ನಿವಿನ್ ಮತ್ತು ಆಸಿಫ್ ಅಲಿ ದಶಕದ ಬಳಿಕ ಇಲ್ಲಿ ಜೊತೆಯಾಗಿ ನಟಿಸಿದ್ದಾರೆ. ಲಾಲ್, ಲಾಲು ಅಲೆಕ್ಸ್, ಸಿದ್ದೀಕಿ, ವಿಜಯ್ ಮೆನನ್, ಮೇಜರ್ ರವಿ, ಮಲ್ಲಿಕಾ ಸುಕುಮಾರನ್, ಕೃಷ್ಣಪ್ರಸಾದ್, ಸೂರಜ್ ಎಸ್ ಕುರುಪ್, ಸುಧೀರ್ ಕರಾಮನ ಇತರರಿದ್ದಾರೆ. ಬಹುಕೋಟಿ ಬಜೆಟ್​ನ ಈ ಸಿನಿಮಾಗೆ ರಾಜಸ್ಥಾನ, ಕೇರಳ ಸೇರಿದಂತೆ ಹಲವೆಡೆ ನಡೆದಿದೆ. ಚಂದ್ರು ಸೆಲ್ವರಾಜ್ ಛಾಯಾಗ್ರಹಣ, ಇಶಾನ್ ಛಾಬ್ರಾ ಸಂಗೀತ, ಮನೋಜ್ ಸಂಕಲನ, ಅನೀಸ್ ನಡೋಡಿ ಕಲಾ ನಿರ್ದೇಶನ ಚಿತ್ರಕ್ಕಿದೆ.

Previous articleಸತ್ಯ, ಆತ್ಮಸಾಕ್ಷಿಯನ್ನು ಕೆದಕುವ ‘ಜಲ್ಸಾ’
Next article‘ಗಿರ್ಕಿ’ ಮೋಷನ್‌ ಪೋಸ್ಟರ್‌ ಬಿಡುಗಡೆ ಮಾಡಿದ ಶಿವರಾಜಕುಮಾರ್‌

LEAVE A REPLY

Connect with

Please enter your comment!
Please enter your name here