ನಿವೇದಿತಾ ಶಿವರಾಜಕುಮಾರ್‌ ನಿರ್ಮಾಣದ ‘ಫೈರ್‌ ಪ್ಲೈ’ ಸಿನಿಮಾ ಸೆಟ್ಟೇರಿದೆ. ಮಗಳ ಚಿತ್ರಕ್ಕೆ ಗೀತಾ ಶಿವರಾಜಕುಮಾರ್‌ ಕ್ಲ್ಯಾಪ್‌ ಮಾಡಿದರು. ಈ ಹಿಂದೆ PRK ಪ್ರೊಡಕ್ಷನ್ಸ್‌ನ ‘ಮಾಯಾಬಜಾರ್‌’ ಚಿತ್ರಕ್ಕೆ ಸಹಾಯಕ ನಿರ್ದೇಶಕರಾಗಿದ್ದ ವಂಶಿ ನಟಿಸಿ, ನಿರ್ದೇಶಿಸುತ್ತಿರುವ ಚಿತ್ರವಿದು.

‘ನವಿರಾಗಿ ಶುರುವಾದ ಕಥೆಗೆ ಹೆಸರೊಂದು ಮೂಡಿದೆ. ಹೆಸರ ಜೊತೆಗೆ ಬರುವೆವು’ ಎಂದು ನಿವೇದಿತಾ ಶಿವರಾಜಕುಮಾರ್‌ ಮೊನ್ನೆ ಟ್ವೀಟ್‌ ಮಾಡಿದ್ದರು. ಇಂದು ಅವರ ನಿರ್ಮಾಣದ ಸಿನಿಮಾ ‘ಫೈರ್‌ ಫ್ಲೈ’ ಶುರುವಾಗಿದೆ. ತಮ್ಮ ಶ್ರೀ ಮುತ್ತು ಸಿನಿ ಸರ್ವೀಸ್‌ ಬ್ಯಾನರ್‌ನಡಿ ಹೊಸ ಪ್ರತಿಭೆಗಳನ್ನು ಪ್ರೋತ್ಸಾಹಿಸುವುದು ಅವರ ಉದ್ದೇಶ. ಈ ಹಿನ್ನೆಲೆಯಲ್ಲಿ ವಂಶಿ ನಟಿಸಿ, ನಿರ್ದೇಶಿಸುತ್ತಿರುವ ಸಿನಿಮಾ ಸೆಟ್ಟೇರಿದೆ. ಬೆಂಗಳೂರಿನ ಕಾಡು ಮಲ್ಲೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಸರಳವಾಗಿ ಮುಹೂರ್ತ ನೆರವೇರಿದೆ. ಶಿವರಾಜಕುಮಾರ್ – ಗೀತಾ ದಂಪತಿ ಮಗಳ ಚೊಚ್ಚಲ ನಿರ್ಮಾಣ ಸಿನಿಮಾಗೆ ಶುಭ ಹಾರೈಸಿದರು. ‘ನಮ್ಮ ಸಂಸ್ಥೆಯಡಿ ಯುವ ಪ್ರತಿಭಾವಂತರ ವಿಶಿಷ್ಟ ಕಂಟೆಂಟ್‌ಗಳನ್ನು ತೆರೆಗೆ ತರುತ್ತೇವೆ. ಒಳ್ಳೆಯ ಚಿತ್ರಗಳನ್ನು ನಿರ್ಮಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ’ ಎನ್ನುತ್ತಾರೆ ನಿವೇದಿತಾ.

ಚಿತ್ರದ ಹೀರೋ ವಂಶಿ ನಿರ್ದೇಶನದ ಹೊಣೆಯನ್ನೂ ಹೊತ್ತಿದ್ದಾರೆ. ಈ ಹಿಂದೆ PRK ಪ್ರೊಡಕ್ಷನ್ಸ್‌ನ ‘ಮಯಾಬಜಾರ್’ ಚಿತ್ರದಲ್ಲಿ ಅವರು ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಇತ್ತೀಚೆಗೆ ಬಂದ ‘ಪೆಂಟಗನ್’ ಚಿತ್ರದಲ್ಲೂ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದರು. ಈಗ ನಿವೇದಿತಾ ಬಂಡವಾಳ ಹೂಡುತ್ತಿರುವ ಮೊದಲ ಚಿತ್ರಕ್ಕೆ ನಿರ್ದೇಶನ ಮಾಡುವ ಮೂಲಕ ವಂಶಿ ಸ್ವತಂತ್ರ ನಿರ್ದೇಶಕರಾಗಿ ಮತ್ತು ಪೂರ್ಣಪ್ರಮಾಣದ ಹೀರೋ ಆಗಿ ಹೊಸ ಜರ್ನಿ ಆರಂಭಿಸುತ್ತಿದ್ದಾರೆ. ಜಯ್ ರಾಮ್ ಸಹ-ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ. ಅಭಿಲಾಷ್ ಕಲ್ಲಟ್ಟಿ ಛಾಯಾಗ್ರಹಣ, ಚರಣ್ ರಾಜ್ ಸಂಗೀತ ನಿರ್ದೇಶನ, ರಘು ನಿಡುವಳ್ಳಿ ಸಂಭಾಷಣೆ ಚಿತ್ರಕ್ಕೆ ಇರಲಿದೆ.

Previous article‘ಗುಂಟೂರ್‌ ಕಾರಂ’ ಶ್ರೀಲೀಲಾ ಫಸ್ಟ್‌ಲುಕ್‌ | ಟಾಲಿವುಡ್‌ನಲ್ಲಿ ಮಿಂಚುತ್ತಿರುವ ಕನ್ನಡತಿ
Next article‘ಮಾರಕಾಸ್ತ್ರ’ ಟೀಸರ್‌ | ಮಾಲಾಶ್ರೀ ಮುಖ್ಯ ಪಾತ್ರದಲ್ಲಿರುವ ಆಕ್ಷನ್‌ – ಥ್ರಿಲ್ಲರ್‌

LEAVE A REPLY

Connect with

Please enter your comment!
Please enter your name here