ಹಂಸಲೇಖ ಅವರು ತಮ್ಮ ರಚನೆ, ಸಂಗೀತ ಸಂಯೋಜನೆಯ ‘ಸಂವಿಧಾನ ಗೀತೆ’ಯ ವೀಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಒಂದೂವರೆ ನಿಮಿಷಗಳ ಈ ಗೀತೆ ಅವರ ಸ್ಟುಡಿಯೋದಲ್ಲಿ ಸಂಯೋಜನೆಗೊಂಡಿದೆ.

ಕನ್ನಡ ಚಿತ್ರರಂಗದ ಮೇರು ಸಂಗೀತ ಸಂಯೋಜಕ, ಗೀತರಚನೆಕಾರ ಹಂಸಲೇಖ ಅವರು ಇತ್ತೀಚೆಗೆ ಮೈಸೂರಿನ ಪ್ರಕರಣವೊಂದರ ಕಾರಣಕ್ಕಾಗಿ ಸುದ್ದಿಯಲ್ಲಿದ್ದಾರೆ. ಪ್ರಕರಣದ ಸಂಬಂಧ ಅವರ ಮೇಲೆ ದೂರು ದಾಖಲಾಗಿದ್ದು, ಹಂಸಲೇಖ ಅವರು ವಿಚಾರಣೆಗೆ ಹೋಗಿ ಬಂದದ್ದಾಗಿತ್ತು. ಹೈಕೋರ್ಟ್‌ ಅವರ ವಿಚಾರಣೆಗೆ ತಡೆಯಾಜ್ಞೆ ನೀಡಿರುವುದು ನಿನ್ನೆಯ ಬೆಳವಣಿಗೆ. ಈ ಮಧ್ಯೆ ಹಂಸಲೇಖ ‘ಸಂವಿಧಾನ ಗೀತೆ’ ರಚಿಸಿ, ಸಂಗೀತ ಸಂಯೋಜಿಸಿದ್ದಾರೆ. ಹಂಸಲೇಖರ ಸ್ಟುಡಿಯೋದಲ್ಲಿ ಅವರ ಶಿಷ್ಯರು ಈ ಗೀತೆಗೆ ದನಿಯಾಗಿದ್ದಾರೆ. ಹಂಸಲೇಖ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೋ ಪೋಸ್ಟ್ ಮಾಡಿದ್ದಾರೆ. “ನಾನೂ… ನೀನೂ… ನಮಗಾಗಿರೋದೇ ಕಾನೂನು” ಎಂದು ಶುರುವಾಗುವ ಸರಳ ಪದಗಳ ಒಂದೂವರೆ ನಿಮಿಷಗಳ ಗೀತೆ ಇಂಪಾದ ಸಂಗೀತದೊಂದಿಗೆ ಗಮನ ಸೆಳೆಯುತ್ತದೆ. ಹಂಸಲೇಖರ ಅಭಿಮಾನಿಗಳು ಗೀತೆಯನ್ನು ಮೆಚ್ಚಿ ಕಾಮೆಂಟ್ ಮಾಡಿದ್ದು, ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್‌ಗಳಲ್ಲಿ ವೀಡಿಯೋ ಶೇರ್ ಮಾಡುತ್ತಿದ್ದಾರೆ.

Previous articleವೀಡಿಯೋ | ಪ್ರಭಾಸ್ – ಪೂಜಾ ಹೆಗ್ಡೆ ‘ರಾಧೆ ಶ್ಯಾಮ್’ ಸಿನಿಮಾ; ರೊಮ್ಯಾಂಟಿಕ್ ಸಾಂಗ್
Next articleಗ್ರಾಮೀಣ ಬದುಕಿಗೆ ಕನ್ನಡಿ ಹಿಡಿಯುವ ‘ಭೋರ್’; ಎಂಎಕ್ಸ್‌ ಪ್ಲೇಯರ್‌ನಲ್ಲಿ ಸ್ಟ್ರೀಮ್ ಆಗುತ್ತಿದೆ ಹಿಂದಿ ಸಿನಿಮಾ

LEAVE A REPLY

Connect withPlease enter your comment!
Please enter your name here