ಸುಧೀರ್‌ ಬಾಬು ಅಭಿನಯದ ‘ಹರೋಮ್‌ಹರ’ PAN ಇಂಡಿಯಾ ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ನಟ ಸುದೀಪ್‌ ಕನ್ನಡ ಅವತರಣಿಕೆಯ ಟೀಸರ್‌ ರಿಲೀಸ್‌ ಮಾಡಿ ಶುಭಹಾರೈಸಿದ್ದಾರೆ. ಜ್ಞಾನಸಾಗರ ದ್ವಾರಕಾ ನಿರ್ದೇಶನದ ಚಿತ್ರದ ನಾಯಕಿ ಮಾಳವಿಕಾ ಶರ್ಮಾ.

ಜ್ಞಾನಸಾಗರ ದ್ವಾರಕಾ ನಿರ್ದೇಶನದಲ್ಲಿ ಸುಧೀರ್‌ ಬಾಬು ನಟಿಸುತ್ತಿರುವ ‘ಹರೋಮ್‌ಹರ’ ತೆಲುಗು ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ಇದು ಸುಧೀರ್‌ ಅವರ ಮೊದಲ ಪ್ಯಾನ್‌ ಇಂಡಿಯಾ ಪ್ರಾಜೆಕ್ಟ್‌. ಮೂಲ ತೆಲುಗು ಸೇರಿದಂತೆ ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಸಿನಿಮಾ ತೆರೆಕಾಣಲಿದೆ. ನಟ ಸುದೀಪ್‌ ಕನ್ನಡ ಅವತರಣಿಕೆಯ ಟೀಸರ್‌ ಬಿಡುಗಡೆ ಮಾಡಿ ಶುಭಹಾರೈಸಿದ್ದಾರೆ. ತೆಲುಗಿನಲ್ಲಿ ಪ್ರಭಾಸ್, ಮಲಯಾಳಂನಲ್ಲಿ ಮಮ್ಮೂಟಿ, ತಮಿಳಿನಲ್ಲಿ ವಿಜಯ್ ಸೇತುಪತಿ ಮತ್ತು ಹಿಂದಿ ಭಾಷೆಯಲ್ಲಿ ಟೈಗರ್ ಶ್ರಾಫ್ ಟೀಸರ್ ರಿಲೀಸ್‌ ಮಾಡಿದ್ದಾರೆ. ಸಿನಿಮಾದಲ್ಲಿ ಸುಧೀರ್ ಬಾಬುಗೆ ನಾಯಕಿಯಾಗಿ ಮಾಳವಿಕ ಶರ್ಮಾ ನಟಿಸುತ್ತಿದ್ದಾರೆ. ಚಿತ್ರದ ಪ್ರಮುಖ ಪಾತ್ರದಲ್ಲಿ ಸುನಿಲ್ ನಟಿಸಿದ್ದು, ಖಳನಾಯಕನಾಗಿ ಕನ್ನಡಿಗ ಅರ್ಜುನ್ ಗೌಡ ಅಭಿನಯಿಸಿದ್ದಾರೆ.

ಕೊನೆಯ ಹಂತದ ಚಿತ್ರೀಕರಣದಲ್ಲಿರುವ ಈ ಸಿನಿಮಾದ ಚಿತ್ರಕಥೆಯು 1989ರಲ್ಲಿ ಚಿತ್ತೂರು ಜಿಲ್ಲೆಯ ಕುಪ್ಪಂನಲ್ಲಿ ನಡೆದ ನೈಜ ಘಟನೆಗಳನ್ನು ಆಧರಿಸಿದೆ. Sree Subrahmanyeswara Cinemas ಬ್ಯಾನರ್‌ ಅಡಿಯಲ್ಲಿ ಸುಮಂತ್ ಜಿ ನಾಯ್ಡು ನಿರ್ಮಿಸುತ್ತಿರುವ ಚಿತ್ರವನ್ನು ಜ್ಞಾನಸಾಗರ ದ್ವಾರಕಾ ನಿರ್ದೇಶಿಸುತ್ತಿದ್ದಾರೆ. ಚೈತಮ್ ಭಾರದ್ವಾಜ್ ಹಿನ್ನೆಲೆ ಸಂಗೀತ, ಅರವಿಂದ್ ವಿಶ್ವನಾಥನ್ ಛಾಯಾಗ್ರಹಣ ನಿರ್ವಹಿಸುತ್ತಿದ್ದಾರೆ.

LEAVE A REPLY

Connect with

Please enter your comment!
Please enter your name here