ಹರ್ಷ ನಿರ್ದೇಶನದಲ್ಲಿ ಗೋಪಿಚಂದ್‌ ನಟಿಸುತ್ತಿರುವ ‘ಭೀಮ’ ಸಿನಿಮಾಗೆ ಚಾಲನೆ ಸಿಕ್ಕಿದೆ. ಮಾಳವಿಕಾ ಶರ್ಮ ಮತ್ತು ಪ್ರಿಯಾ ಭವಾನಿ ಶಂಕರ್‌ ಚಿತ್ರದ ಇಬ್ಬರು ನಾಯಕಿಯರಾಗಿ ಆಯ್ಕೆಯಾಗಿದ್ದಾರೆ. ಸಂಗೀತ ಸಂಯೋಜನೆ ರವಿ ಬಸ್ರೂರು ಅವರದು.

‘ಭಜರಂಗಿ’, ‘ವೇದ’ ಸಿನಿಮಾ ಖ್ಯಾತಿಯ ಹರ್ಷ ‘ಭೀಮ’ ತೆಲುಗು ಚಿತ್ರನಿರ್ದೇಶನ ಮೂಲಕ ಟಾಲಿವುಡ್‌ ಪ್ರವೇಶಿಸುತ್ತಿದ್ದಾರೆ. ಗೋಪಿಚಂದ್‌ ಚಿತ್ರದ ಹೀರೋ. ಇದೊಂದು ಆಕ್ಷನ್‌ ಚಿತ್ರವಾಗಿದ್ದು, ಹೈದರಾಬಾದ್‌ನಲ್ಲಿ ಚಿತ್ರೀಕರಣ ನಡೆಯುತ್ತಿದೆ. ಇದೀಗ ಚಿತ್ರದ ನಾಯಕಿಯರ ಆಯ್ಕೆಯೂ ನಡೆದಿದೆ. ನಿರ್ಮಾಣ ಸಂಸ್ಥೆ ತನ್ನ ಟ್ವಿಟರ್‌ ಖಾತೆ ಮೂಲಕ ನಾಯಕನಟಿಯರನ್ನು ಪರಿಚಯಿಸಿದೆ. ‘ಕಲ್ಯಾಣಂ ಕಮನೀಯಂ’ ಸಿನಿಮಾ ಖ್ಯಾತಿಯ ತಮಿಳು ನಟಿ ಪ್ರಿಯಾ ಭವಾನಿ ಶಂಕರ್ ಮತ್ತು ‘ರೆಡ್‌’, ‘ನೆಲ ಟಿಕೆಟ್‌’ ಚಿತ್ರಗಳ ಖ್ಯಾತಿಯ ತೆಲುಗು ನಟಿ ಮಾಳವಿಕಾ ಶರ್ಮಾ ‘ಭೀಮ’ ಚಿತ್ರದಲ್ಲಿ ನಾಯಕಿಯರಾಗಿ ಅಭಿನಯಿಸುತ್ತಿದಾರೆ. ಸ್ವಾಮಿ ಜೆ ಗೌಡ ಛಾಯಾಗ್ರಹಣ, ರಮಣ ವಂಕ ನಿರ್ಮಾಣ ವಿನ್ಯಾಸ, ಕಿರಣ್ ಸಂಕಲನ ಚಿತ್ರಕ್ಕಿದೆ. ಅಜ್ಜು ಮಹಾಕಾಳಿ ಸಂಭಾಷಣೆ ರಚಿಸಿದ್ದಾರೆ. ಚಿತ್ರ ನಿರ್ಮಿಸುತ್ತಿರುವ ಶ್ರೀ ಸತ್ಯ ಸಾಯಿ ಆರ್ಟ್ಸ್‌ ತನ್ನ ಟ್ವಿಟ್ಟರ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡು, ‘Welcomes onboard the stunning actress Malavika Shram and the charismatic actress Priya Bhaskar’ ಎಂದು ಟ್ವೀಟ್‌ ಮಾಡಿದೆ. ‘KGF’ ಸರಣಿ ಸಿನಿಮಾ ಖ್ಯಾತಿಯ ರವಿ ಬಸ್ರೂರು ಈ ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದಾರೆ.

Previous articleಪ್ರಭಾಸ್‌ ‘ಯೋಗಿ’ ಮರುಬಿಡುಗಡೆ | ಇದು ಕನ್ನಡ ಸೂಪರ್‌ಹಿಟ್‌ ‘ಜೋಗಿ’ ರೀಮೇಕ್‌
Next articleಸೆಟ್ಟೇರಿದ ‘Chef ಚಿದಂಬರ’ | ಅನಿರುದ್ಧ ನಟನೆಯ ಡಾರ್ಕ್‌ ಕಾಮಿಡಿ ಸಿನಿಮಾ

LEAVE A REPLY

Connect with

Please enter your comment!
Please enter your name here