ಪೂಜಾ ಕೊಲ್ಲೂರು ನಿರ್ದೇಶನದ ‘ಮಾರ್ಟಿನ್‌ ಲೂಥರ್‌ ಕಿಂಗ್’ ತೆಲುಗು ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ಯೋಗಿ ಬಾಬು ಅವರ ಯಶಸ್ವೀ ತಮಿಳು ಸಿನಿಮಾ ‘ಮಂಡೇಲಾ’ ತೆಲುಗು ರಿಮೇಕಿದು. ಸಂಪೂರ್ಣೇಶ್‌ ಬಾಬು ಚಿತ್ರದ ಶೀರ್ಷಿಕೆ ಪಾತ್ರದಲ್ಲಿ ನಟಿಸಿದ್ದಾರೆ.

ಸಂಪೂರ್ಣೇಶ್ ಬಾಬು ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ಮಾರ್ಟಿನ್ ಲೂಥರ್ ಕಿಂಗ್’ ತೆಲುಗು ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದೆ. ಇದು ಪೂಜಾ ಕೊಲ್ಲೂರು ನಿರ್ದೇಶನದ ಸಿನಿಮಾ. ಟ್ರೇಲರ್‌, ಹಳ್ಳಿಯ ಮುಗ್ಧ ವ್ಯಕ್ತಿಯೊಬ್ಬನ ಸುತ್ತ ಸುತ್ತುತ್ತದೆ. ಸ್ವಂತ ಹೆಸರೇ ಇಲ್ಲದ ವ್ಯಕ್ತಿಗೆ ಆ ಹಳ್ಳಿಯಲ್ಲಿ ತಮಗೆ ಬೇಕಾದ ರೀತಿಯಲ್ಲಿ ಜನರು ಅವನನ್ನು ಕರೆಯುತ್ತಿರುತ್ತಾರೆ. ಒಂದು ಬಾರಿ ಊರಿನ ಕಚೇರಿಗೆ ಕೆಲಸ ನಿಮ್ಮಿತ್ತ ತೆರಳುವ ಅವನ ಹೆಸರನ್ನು ಕೇಳಿದಾಗ ತನಗೆ ಹೆಸರೇ ಇಲ್ಲವೆಂದು ಹೇಳುತ್ತಾನೆ. ಅದೇ ಕಚೇರಿಯಲ್ಲಿ ಸರ್ಕಾರಿ ನೌಕರಿಯಲ್ಲಿದ್ದ ಯುವತಿಯೊಬ್ಬಳು ‘ಮಾರ್ಟಿನ್‌ ಲೂಥರ್‌ ಕಿಂಗ್‌’ ಎಂದು ನಾಮಕರಣ ಮಾಡಿ, ‘ಇನ್ನು ಮುಂದೆ ನಿನ್ನ ಹೆಸರು ಏನು ಎಂದು ಯಾರೇ ಕೇಳಿದರೂ ‘ಮಾರ್ಟಿನ್‌ ಲೂಥರ್‌ ಕಿಂಗ್‌’ ಎಂದು ಹೇಳಬೇಕು’ ಎನ್ನುತ್ತಾಳೆ.

ಹಳ್ಳಿಯಲ್ಲಿ ರಾಜಕೀಯ ಗುದ್ದಾಟಗಳು ಶುರುವಾಗುತ್ತವೆ. ಓಟಿಗಾಗಿ ಲಕ್ಕವಿಲ್ಲದಷ್ಟು ಹಣ ವ್ಯಯವಾಗುತ್ತದೆ. ರಾಜಕೀಯ ಮುಖಂಡರು ಮನೆಮನೆಗೆ ತೆರಳಿ ಹಣ, ವಸ್ತುಗಳನ್ನು ಹಂಚುತ್ತಾರೆ. ಮಾರ್ಟೀನ್‌ ಅವೆಲ್ಲವನ್ನು ಕಲೆಹಾಕಿ ಮನೆ, TV ಮತ್ತು ಅವನ ಅಗತ್ಯತೆಯ ವಸ್ತುಗಳನ್ನು ಅದರಿಂದ ಕೊಂಡುಕೊಂಡು ಉಳಿದ ಹಣದಲ್ಲಿ ತಾನೂ ರಾಜಕೀಯ ಪ್ರವೇಶಿಸುತ್ತಾನೆ. ಟ್ರೇಲರ್‌ನ ದೃಶ್ಯಗಳು ಹಾಸ್ಯಮಯವಾಗಿವೆ. ‘ಮಾರ್ಟಿನ್ ಲೂಥರ್ ಕಿಂಗ್’ ಚಿತ್ರವು ಯೋಗಿ ಬಾಬು ಅವರು ನಟಿಸಿ ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದಿದ್ದ ‘ಮಂಡೇಲಾ’ ತಮಿಳು ಚಲನಚಿತ್ರದ ತೆಲುಗು ರಿಮೇಕ್. ಈ ಚಿತ್ರದಲ್ಲಿ ಶರಣ್ಯ ಪ್ರದೀಪ್, ವೆಂಕಟೇಶ್ ಮಹಾ ಮತ್ತು ನರೇಶ್ ಇತರ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರವನ್ನು Reliance Entertainment ಮತ್ತು Mahayana Motion Pictures ಅಡಿ YNOT Studios ಸಹಯೋಗದೊಂದಿಗೆ ಎಸ್ ಶಶಿಕಾಂತ್ ಮತ್ತು ಚಕ್ರವರ್ತಿ ರಾಮಚಂದ್ರ ನಿರ್ಮಿಸಿದ್ದಾರೆ. ಸ್ಮರಣ್ ಸಾಯಿ ಸಂಗೀತ ಸಂಯೋಜನೆ ಚಿತ್ರಕ್ಕಿದೆ. ಅಕ್ಟೋಬರ್‌ 27ರಂದು ಸಿನಿಮಾ ತೆರೆಕಾಣಲಿದೆ.

LEAVE A REPLY

Connect with

Please enter your comment!
Please enter your name here