ಬಹುನಿರೀಕ್ಷಿತ ಹ್ಯಾರಿ ಪಾಟರ್‌ ರೀಯೂನಿಯನ್‌ ಸ್ಪೆಷಲ್‌ 2022ರ ಜನವರಿ 1ರಂದು ಅಮೇಜಾನ್‌ ಪ್ರೈಮ್‌ನಲ್ಲಿ ಸ್ಟ್ರೀಮ್‌ ಆಗಲಿದೆ. ‘ಹ್ಯಾರಿಪಾಟರ್‌ 20ನೇ ವಾರ್ಷಿಕೋತ್ಸವದ ಸಂಭ್ರಮವನ್ನು ನಮ್ಮಲ್ಲಿ ವೀಕ್ಷಿಸಿ’ ಎಂದು ಅಮೇಜಾನ್‌ ಇಂದು ಟ್ವೀಟ್‌ ಮಾಡಿದೆ.

‘ಹ್ಯಾರಿ ಪಾಟರ್‌ 20ನೇ ವಾರ್ಷಿಕೋತ್ಸವ: ರಿಟರ್ನ್‌ ಟು ಹಾಗ್ವಾರ್ಟ್ಸ್‌’ ವಿವಿಧ ಪ್ಲಾಟ್‌ಫಾರ್ಮ್‌ಗಳಲ್ಲಿ ಜಾಗತಿಕವಾಗಿ 2022ರ ಜನವರಿ 1ರಂದು ಸ್ಟ್ರೀಮ್‌ ಆಗುತ್ತಿವೆ. ಭಾರತದಲ್ಲಿ ಅಮೇಜಾನ್‌ ಪ್ರೈಮ್‌ ವೀಡಿಯೋ ಈ ಹಕ್ಕುಗಳನ್ನು ಖರೀದಿಸಿದ್ದು, ಹೊಸವರ್ಷದ ಮೊದಲ ದಿನದಂದೇ ಪ್ರಸಾರ ಮಾಡಲಿದೆ. ಸ್ಟ್ರೀಮಿಂಗ್‌ ಸಮಯವಿನ್ನೂ ನಿಗದಿಯಾಗಿಲ್ಲ. ಅಮೇರಿಕಾದಲ್ಲಿ HBO max, ಇಂಗ್ಲೆಂಡ್‌ನಲ್ಲಿ Sky Max ಮತ್ತು Sky Showcase, ಆಸ್ಟ್ರೇಲಿಯಾದಲ್ಲಿ Foxtel ‘ಹ್ಯಾರಿ ಪಾಟರ್‌: ರಿಟರ್ನ್‌ ಟು ಹಾಗ್ವಾರ್ಟ್ಸ್‌’ ಪ್ರಸಾರ ಮಾಡುತ್ತಿದ್ದು, ಅಮೇಜಾನ್‌ ಪ್ರೈಮ್‌ ಮೂಲಕ ಭಾರತೀಯರಿಗೆ ಈ ಸರಣಿ ಸಿಗಲಿದೆ. ಇನ್ನು ಇಲ್ಲಿಯವರೆಗಿನ ಎಲ್ಲಾ ಎಂಟು ಹ್ಯಾರಿ ಪಾಟರ್‌ ಸರಣಿ ಸಿನಿಮಾಗಳು ಅಮೆಜಾನ್‌ ಪ್ರೈಮ್‌ನಲ್ಲಿವೆ. ‘ಹ್ಯಾರಿ ಪಾಟರ್‌: ಹಾಗ್ವಾರ್ಟ್ಸ್‌ ಟೂರ್ನ್‌ಮೆಂಟ್‌ ಆಫ್‌ ಹೌಸಸ್‌’ ಕ್ವಿಝ್‌ ಸ್ಪರ್ಧೆಯನ್ನೂ ಪ್ರೈಮ್‌ ಹೋಸ್ಟ್‌ ಮಾಡುತ್ತಿದೆ. ‘ಹ್ಯಾರಿ ಪಾಟರ್‌: ರಿಟರ್ನ್‌ ಟು ಹಾಗ್ವಾರ್ಟ್ಸ್‌’ನಲ್ಲಿ ಪ್ರಮುಖ ಕಲಾವಿದರಾದ ಡೇನಿಯಲ್‌ ರ್ಯಾಡ್‌ಕ್ಲಿಫ್‌ (ಹ್ಯಾರಿ ಪಾಟರ್‌), ಎಮ್ಮಾ ವಾಟ್ಸನ್‌ (ಹರ್ಮಿಯೋನ್‌ ಗ್ರೇಂಜರ್‌), ರೂಪರ್ಟ್‌ ಗ್ರಿಂಟ್‌ (ರಾನ್‌ ವೀಸ್ಲೇ) ಸೇರಿದಂತೆ ಹ್ಯಾರಿ ಪಾಟರ್‌ ಸರಣಿಯ ಎಲ್ಲಾ ಕಲಾವಿದರೂ, ಫ್ರಾಂಚೈಸಿಗಳ ನಿರ್ದೇಶಕರು, ನಿರ್ಮಾಪಕರು ಪಾಲ್ಗೊಳ್ಳಲಿದ್ದಾರೆ.

LEAVE A REPLY

Connect with

Please enter your comment!
Please enter your name here