ತೆಲುಗು ಚಿತ್ರರಂಗ ಹಿರಿಯ ನಟ ಕೃಷ್ಣಂರಾಜು ‘ರಾಧೆ ಶ್ಯಾಮ್‌’ ಸಿನಿಮಾದ ವಿಶಿಷ್ಟ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರತಂಡ ಅವರ ಪಾತ್ರದ ಲುಕ್‌ ಬಿಡುಗಡೆಗೊಳಿಸಿದೆ.

ಪ್ರಭಾಸ್‌ ಮತ್ತು ಪೂಜಾ ಹೆಗ್ಡೆ ಅಭಿನಯದ ‘ರಾಧೆ ಶ್ಯಾಮ್‌’ ತೆಲುಗು ಮತ್ತು ಹಿಂದಿ ದ್ವಿಭಾಷಾ ಸಿನಿಮಾದಲ್ಲಿನ ಕೃಷ್ಣಂರಾಜು ಅವರ ಪಾತ್ರ ರಿವೀಲ್‌ ಆಗಿದೆ. ಹಿರಿಯ ನಟ ಕೃಷ್ಣಂರಾಜು ಅವರು ನಟ ಪ್ರಭಾಸ್‌ ಅವರ ದೊಡ್ಡಪ್ಪ. ಚಿತ್ರೀಕರಣ ಆರಂಭಿಸುವ ಮುನ್ನ ಚಿತ್ರದಲ್ಲಿ ಕೃಷ್ಣಂರಾಜು ವಿಶೇಷ ಪಾತ್ರವೊಂದರಲ್ಲಿ ನಟಿಸಲಿದ್ದಾರೆ ಎನ್ನಲಾಗಿತ್ತು. ಆದರೆ ಈ ಬಗ್ಗೆ ಸುಳಿವು ಇರಲಿಲ್ಲ. ಇದೀಗ ಚಿತ್ರದ ನಿರ್ಮಾಣ ಸಂಸ್ಥೆ ಹಿರಿಯ ನಟನ ಪಾತ್ರದ ಲುಕ್‌ ಬಿಡುಗಡೆಗೊಳಿಸಿದೆ. ರಾಧಾಕೃಷ್ಣಕುಮಾರ್‌ ನಿರ್ದೇಶನದ ಈ ಸಿನಿಮಾದಲ್ಲಿ ಅವರು ಆಧ್ಮಾತ್ಮ ಗುರು ಪರಮಹಂಸ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. “ಲೆಜೆಂಡರಿ ನಟ ಕೃಷ್ಣಂರಾಜು ಅವರು ನಮ್ಮ ಚಿತ್ರದಲ್ಲಿ ಸ್ಪಿರಿಚ್ಯುಯೆಲ್‌ ಗುರು ಆಗಿ ನಟಿಸುತ್ತದ್ದಾರೆ” ಎಂದು ನಿರ್ಮಾಣ ಸಂಸ್ಥೆ ಕೃಷ್ಣಂರಾಜು ಕ್ಯಾರಕ್ಟರ್‌ ಲುಕ್‌ನೊಂದಿಗೆ ಟ್ವೀಟ್‌ ಮಾಡಿದೆ.

‘ಜಿಲ್‌’ ಸಿನಿಮಾ ಖ್ಯಾತಿಯ ರಾಧಾಕೃಷ್ಣ ಕುಮಾರ್ ನಿರ್ದೇಶನದ ‘ರಾಧೆ ಶ್ಯಾಮ್‌’ ಚಿತ್ರದೊಂದಿಗೆ ವರ್ಷಗಳ ನಂತರ ಪ್ರಭಾಸ್‌ ರೊಮ್ಯಾಂಟಿಕ್ ಹೀರೋ ಆಗಿ ತೆರೆಗೆ ಮರಳುತ್ತಿದ್ದಾರೆ. ಇಲ್ಲಿ ಅವರ ಪಾತ್ರದ ಹೆಸರು ವಿಕ್ರಮಾದಿತ್ಯ. ಕನ್ನಡ ಮೂಲದ ಪೂಜಾ ಹೆಗ್ಡೆ ಚಿತ್ರದ ಹಿರೋಯಿನ್‌. ಸಚಿನ್‌ ಖೇಡೇಕರ್‌, ಪ್ರಿಯದರ್ಶಿ ಪುಲಿಕೊಂಡ, ಭಾಗ್ಯಶ್ರೀ, ಮುರಳಿ ಶರ್ಮ, ಕುನಾಲ್ ರಾಯ್ ಕಪೂರ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಎಪ್ಪತ್ತರ ದಶಕದ ಯೂರೋಪ್‌ ಬ್ಯಾಕ್‌ಡ್ರಾಮ್‌ನಲ್ಲಿ ನಡೆಯುವ ಪ್ರೇಮಕಥಾನಕ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಎರಡು ವೀಡಿಯೋ ಹಾಡುಗಳು ಅಭಿಮಾನಿಗಳನ್ನು ರಂಜಿಸುತ್ತಿವೆ. 2022ರ ಜನವರಿ 14ರಂದು ಸಂಕ್ರಾಂತಿಗೆ ಸಿನಿಮಾ ತೆರೆಕಾಣಲಿದೆ.

LEAVE A REPLY

Connect with

Please enter your comment!
Please enter your name here