‘ಕೊಟ್ಟಾಯಂ ಪ್ರದೀಪ್‌’ ಎಂದೇ ಕರೆಸಿಕೊಳ್ಳುತ್ತಿದ್ದ ಮಲಯಾಳಂ ನಟ ಪ್ರದೀಪ್‌ ಕೆ.ಆರ್‌. ಇಂದು ಅಗಲಿದ್ದಾರೆ. ಒರು ವಡಕ್ಕನ್‌ ಸೆಲ್ಫೀ, ಲೈಫ್‌ ಆಫ್‌ ಜೋಸುಟ್ಟಿ, ಅಮರ್‌ ಅಕ್ಬರ್‌ ಆಂಥೋನಿ ಅವರ ಕೆಲವು ಜನಪ್ರಿಯ ಸಿನಿಮಾಗಳು.

ಮಲಯಾಳಂ ಚಿತ್ರರಂಗದ ಹಿರಿಯ ನಟ ಪ್ರದೀಪ್‌ ಕೆ.ಆರ್‌. (61 ವರ್ಷ) ಹೃದಯಾಘಾತದಿಂದ ಇಂದು ಅಗಲಿದ್ದಾರೆ. ‘ಏ ನಾಡು ಏನಾಲೆ ವಾರೆ’ (1999) ಚಿತ್ರದ ಮೂಲಕ ಬೆಳ್ಳಿತೆರೆ ಅಭಿಯಾನ ಶುರುಮಾಡಿದ ಅವರು ನಟನೆಗೆ ಪ್ರಾಮುಖ್ಯತೆ ಇರುವ ಹತ್ತಾರು ಪಾತ್ರಗಳ ಮೂಲಕ ಸಿನಿಪ್ರೇಮಿಗಳ ನೆನಪಿನಲ್ಲುಳಿದಿದ್ದಾರೆ. ಗೌತಮ್‌ ಮೆನನ್‌ ನಿರ್ದೇಶನದ ‘ವಿನ್ನೈತ್ತಾಂಡಿ ವರುವಾಯ’ (2010) ತಮಿಳು ಸಿನಿಮಾ ಅವರಿಗೆ ಹೆಸರು ತಂದುಕೊಟ್ಟಿತು. ಮಲಯಾಳಂ, ತಮಿಳಿನ ಎಪ್ಪತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದು, ಹೆಚ್ಚಾಗಿ ಹಾಸ್ಯಪ್ರಧಾನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ಧಾರೆ. ಸಿನಿಮಾಗಳ ಟೈಟಲ್‌ ಕಾರ್ಡ್‌ನಲ್ಲಿ ಅವರ ಹೆಸರು ‘ಕೊಟ್ಟಾಯಂ ಪ್ರದೀಪ್‌’ ಎಂದಿರುತ್ತಿತ್ತು. ಅಡು ಒರು ಭೀಗರ ಜೀವಿ ಆನು, ಒರು ವಡಕ್ಕನ್‌ ಸೆಲ್ಫೀ, ಲೈಫ್‌ ಆಫ್‌ ಜೋಸುಟ್ಟಿ, ಕುಂಜಿರಮಯನಂ, ಅಮರ್‌ ಅಕ್ಬರ್‌ ಆಂಥೋನಿ ಅವರ ಕೆಲವು ಪ್ರಮುಖ ಚಿತ್ರಗಳು. ಪ್ರದೀಪ್‌ ಅವರ ನಿಧನಕ್ಕೆ ಮಲಯಾಳಂ ಚಿತ್ರರಂಗದ ಪ್ರಮುಖರು ಸಂತಾಪ ಸೂಚಿಸಿದ್ದಾರೆ.

Previous articleಪುನೀತ್ ರಾಜಕುಮಾರ್ ಬಯೋಗ್ರಫಿ ‘ನೀನೇ ರಾಜಕುಮಾರ’
Next articleಟ್ರೈಲರ್‌ | ದುಲ್ಕರ್‌ ಸಲ್ಮಾನ್‌ ‘ಹೇ ಸಿನಾಮಿಕಾ’; ತ್ರಿಕೋನ ಪ್ರೇಮದ ತಮಿಳು ಸಿನಿಮಾ

LEAVE A REPLY

Connect with

Please enter your comment!
Please enter your name here