‘KGF’ ಸಿನಿಮಾ ಮೂಲಕ ಭಾರತೀಯ ಚಿತ್ರರಂಗದಲ್ಲಿ ದಾಖಲೆ ಬರೆದ ಹೊಂಬಾಳೆ ಫಿಲಂಸ್‌ ಮಾಲಿವುಡ್‌ಗೆ ಅಡಿಯಿಟ್ಟಿದೆ. ಹೊಂಬಾಳೆ ಬ್ಯಾನರ್‌ ನಿರ್ಮಾಣದ ಚಿತ್ರವನ್ನು ಖ್ಯಾತ ಮಲಯಾಳಂ ನಟ, ನಿರ್ದೇಶಕ ಪೃಥ್ವಿರಾಜ್‌ ಸುಕುಮಾರನ್‌ ನಿರ್ದೇಶಿಸಲಿದ್ದಾರೆ.

ಖ್ಯಾತ ಮಲಯಾಳಂ ನಟ, ನಿರ್ದೇಶಕ ಪೃಥ್ವಿರಾಜ್‌ ಸುಕುಮಾರನ್‌ ನಿರ್ದೇಶಿಸಲಿರುವ ಚಿತ್ರವನ್ನು ಹೊಂಬಾಳೆ ಫಿಲಂಸ್‌ ನಿರ್ಮಿಸಲಿದೆ. ಈ ಮೂಲಕ ಹೊಂಬಾಳೆ ಚಿತ್ರನಿರ್ಮಾಣ ಸಂಸ್ಥೆ ಅಧಿಕೃತವಾಗಿ ಮಲಯಾಳಂ ಸಿನಿಮಾರಂಗಕ್ಕೆ ಕಾಲಿಟ್ಟಂತಾಗಿದೆ. ಇದೊಂದು ಆಕ್ಷನ್‌ ಪ್ಯಾಕ್ಡ್‌ ಸೋಶಿಯೋ – ಥ್ರಿಲ್ಲರ್‌ ಆಗಿದ್ದು, ಚಿತ್ರಕ್ಕೆ ‘ಟೈಸನ್‌’ ಎಂದು ನಾಮಕರಣ ಮಾಡಲಾಗಿದೆ. ಮುರಳಿ ಗೋಪಿ ಚಿತ್ರಕಥೆ ಹೆಣೆದಿರುವ ಸಿನಿಮಾ 2023ರ ಕೊನೆಗೆ ಮೂಲ ಮಲಯಾಳಂ ಸೇರಿದಂತೆ ಕನ್ನಡ, ತಮಿಳು, ತೆಲುಗು ಮತ್ತು ಹಿಂದಿ ಭಾಷೆಗಳಲ್ಲೂ ತೆರೆಕಾಣಲಿದೆ. ಹೊಂಬಾಳೆ ಫಿಲಂಸ್‌ ಚಿತ್ರದ ಪೋಸ್ಟರ್‌ ಟ್ವೀಟ್‌ ಮಾಡಿದೆ. ಆದರೆ ಪೋಸ್ಟರ್‌ನಲ್ಲಿ ಸಿನಿಮಾದ ಕತೆಯ ಕುರಿತಾಗಿ ಯಾವುದೇ ಸುಳಿವು ಸಿಗುವುದಿಲ್ಲ. ‘The bell won’t save you..!’ ಎನ್ನುವುದು ‘TYSON’ ಚಿತ್ರದ ಅಡಿಬರಹ.

ಯಶ್‌ ಅಭಿನಯದ ‘KGF2’ ಚಿತ್ರದೊಂದಿಗೆ ಭಾರತೀಯ ಸಿನಿಮಾರಂಗದಲ್ಲಿ ಛಾಪು ಮೂಡಿಸಿರುವ ಹೊಂಬಾಳೆ ಫಿಲಂಸ್‌ ಬ್ಯಾನರ್‌ನಡಿ ಈಗ ಆರು ದೊಡ್ಡ ಬಜೆಟ್‌ ಸಿನಿಮಾಗಳು ಸಿದ್ಧವಾಗುತ್ತಿವೆ. ಒಂದು ಕಡೆ ಪ್ರಭಾಸ್‌ ನಟನೆಯ ‘ಸಲಾರ್’ ಸಿದ್ಧವಾಗುತ್ತಿದೆ. ಯಶ್, ಸುಧಾ ಕೊಂಗರ, ಪ್ರಶಾಂತ್ ನೀಲ್, ರಕ್ಷಿತ್ ಶೆಟ್ಟಿ, ಪೃಥ್ವಿರಾಜ್ ಸುಕುಮಾರನ್ ಮುಂತಾದವರು ಹೊಂಬಾಳೆ ಜತೆ ಕಾರ್ಯನಿರ್ವಹಿಸುತ್ತಿದ್ದಾರೆ. ಮೂಲಗಳ ಪ್ರಕಾರ, ‘ಟೈಸನ್‌’ ಹೈಬಜೆಟ್‌ನ ಬೃಹತ್‌ ಕ್ಯಾನ್ವಾಸ್‌ನಲ್ಲಿ ತಯಾರಾಗಲಿದೆ. ಖ್ಯಾತನಾಮ ನಟರು ಹಾಗೂ ಉತ್ಕೃಷ್ಟ ತಂತ್ರಜ್ಞರ ತಂಡವನ್ನೊಳಗೊಂಡಿರಲಿದ್ದು ಈ ಬಗ್ಗೆ ಸದ್ಯದಲ್ಲೇ ಮಾಹಿತಿ ಸಿಗಲಿದೆ.

Previous articleನಟ ಸಲ್ಮಾನ್‌ಗೆ ಬೆದರಿಕೆ; ಇದು ಲಾರೆನ್ಸ್‌ ಬಿಶ್ನಾಯ್‌ ಗ್ಯಾಂಗ್‌ ಪಬ್ಲಿಸಿಟಿ ಸ್ಟಂಟ್‌!
Next article‘ಅಬ್ಬಬ್ಬ’ ಹಾಸ್ಯ ಚಿತ್ರದೊಂದಿಗೆ ಮರಳಿದ ಚೈತನ್ಯ; ಜುಲೈ 1ರಂದು ತೆರೆಗೆ

LEAVE A REPLY

Connect with

Please enter your comment!
Please enter your name here