‘ಆ ದಿನಗಳು’ ಸಿನಿಮಾ ಖ್ಯಾತಿಯ ಕೆ.ಎಂ.ಚೈತನ್ಯ ನಿರ್ದೇಶನದ ‘ಅಬ್ಬಬ್ಬ’ ಟ್ರೈಲರ್‌ ಬಿಡುಗಡೆಯಾಗಿದ್ದು, ಜುಲೈ 1ರಂದು ಸಿನಿಮಾ ತೆರೆಕಾಣಲಿದೆ. ಲಿಖಿತ್‌ ಶೆಟ್ಟಿ ಮತ್ತು ಅಮೃತಾ ಅಯ್ಯಂಗಾರ್‌ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದಾರೆ.

”ತುಂಬ ದಿನಗಳ ನಂತರ ಒಂದೊಳ್ಳೆ ಕಾಮಿಡಿ ಸಿನಿಮಾ ಕನ್ನಡಿಗರಿಗೆ ಸಿಗಲಿದೆ. ಯೂತ್‌ಫುಲ್ ಕಂಟೆಂಟ್ ಇರುವ, ಇತ್ತೀಚಿನ ದಿನಗಳಿಗೆ ಅಪರೂಪದ ಚಿತ್ರ” ಎಂದು ‘ಅಬ್ಬಬ್ಬ’ ಟ್ರೈಲರ್‌ ರಿಲೀಸ್‌ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ ನಟ ಸುದೀಪ್‌. ‘ಆ ದಿನಗಳು’ ಖ್ಯಾತಿಯ ನಿರ್ದೇಶಕ ಕೆ.ಎಂ.ಚೈತನ್ಯ ಈ ಚಿತ್ರದೊಂದಿಗೆ ಮರಳಿದ್ದಾರೆ. ‘ಫ್ಯಾಮಿಲಿ ಪ್ಯಾಕ್’ ಖ್ಯಾತಿಯ ಲಿಖಿತ್ ಶೆಟ್ಟಿ ಮತ್ತು ಅಮೃತ ಅಯ್ಯಂಗಾರ್ ಈ ಚಿತ್ರದ ಪ್ರಮುಖ ಕಲಾವಿದರು. ಅವರೊಂದಿಗೆ ಅಜಯ್ ರಾಜ್, ತಾಂಡವ್ ರಾಮ್, ಧನರಾಜ್ ಆಚಾರ್ ಇದ್ದಾರೆ. ಬೆಂಗಳೂರು ಮೂಲದ ಮೀರಾಮಾರ್ ಜಾಹೀರಾತು ನಿರ್ಮಾಣ ಸಂಸ್ಥೆಯ ಆನ್ ಆಗಸ್ಟೇನ್ (ಮಲಯಾಳಂ ನಟಿ) ಹಾಗೂ ವಿವೇಕ್ ಥಾಮಸ್ ಚಿತ್ರ ನಿರ್ಮಿಸಿದ್ದಾರೆ. ಜಾಹೀರಾತುಗಳಿಗೆ ಸಂಗೀತ ಸಂಯೋಜಿಸಿರುವ ಅನುಭವಿ ಸಂಗೀತ ಸಂಯೋಜಕ ದೀಪಕ್‌ ಅಲೆಕ್ಸಾಂಡರ್‌ ಅವರಿಗೆ ಇದು ಮೊದಲ ಫೀಚರ್‌ ಸಿನಿಮಾ. ಮನೋಹರ್‌ ಜೋಷಿ ಛಾಯಾಗ್ರಹಣ, ಹರಿದಾಸ್‌ ಸಂಕಲನ, ವಿಶ್ವಾಸ್‌ ಕಶ್ಯಪ್‌ ಕಲಾ ನಿರ್ದೇಶನ ಚಿತ್ರಕ್ಕಿದೆ. ಜುಲೈ 1ರಂದು ಸಿನಿಮಾ ತೆರೆಕಾಣುತ್ತಿದ್ದು, ಕೆ.ಆರ್.ಜಿ ಸಂಸ್ಥೆಯ ಮೂಲಕ ಚಿತ್ರ ಬಿಡುಗಡೆಯಾಗುತ್ತಿದೆ.

LEAVE A REPLY

Connect with

Please enter your comment!
Please enter your name here