ಗ್ಯಾಂಗ್‌ಸ್ಟರ್‌ ಲಾರೆನ್ಸ್‌ ಬಿಶ್ನಾಯ್‌ನಿಂದ ಸಲ್ಮಾನ್‌ ಖಾನ್‌ಗೆ ಬಂದ ಬೆದರಿಕೆ ಕರೆ ಹುಸಿಯಾದದ್ದು ಎಂದು ಮುಂಬಯಿ ಪೊಲೀಸರು ಖಚಿತಪಡಿಸಿದ್ದಾರೆ. ಇದು ಪಬ್ಲಿಸಿಟಿ ಸ್ಟಂಟ್‌ ಎಂದು ತನಿಖಾಧಿಕಾರಿಗಳು ಹೇಳಿದ್ದು, ಬಾಲಿವುಡ್‌ನಲ್ಲಿನ ಊಹಾಪೋಹಗಳಿಗೆ ತೆರೆಬಿದ್ದಿದೆ.

ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಮತ್ತು ಅವರ ತಂದೆ, ಚಿತ್ರಸಾಹಿತಿ ಸಲಿಂ ಖಾನ್‌ ಅವರನ್ನು ಕೊಲ್ಲುವ ಬೆದರಿಕೆ ಪತ್ರ ಬಾಲಿವುಡ್‌ನಲ್ಲಿ ಸಂಚಲನ ಸೃಷ್ಟಿಸಿದೆ. ಪಂಜಾಬ್‌ ಮೂಲದ ಗಾಯಕ ಸಿಧು ಮೂಸೆವಾಲಾ ಹತ್ಯೆಗೆ ಸಂಬಂಧಿಸಿದಂತೆ ಸಂಶಯಾದಸ್ಪದ ಆರೋಪಿ ಲಾರೆನ್ಸ್‌ ಬಿಶ್ನಾಯ್‌ ಕಡೆಯಿಂದಲೇ ಸಲ್ಮಾನ್‌ಗೆ ಬೆದರಿಕೆ ಕರೆ ಬಂದಿದೆ. ಮುಂಬೈ ಮೂಲದ ಗ್ಯಾಂಗ್‌ಸ್ಟರ್‌ ಲಾರೆನ್‌ ಬಿಶ್ನಾಯ್‌ ಕಡೆಯ ವ್ಯಕ್ತಿ, ಕೆನಡಾ ಮೂಲದ ಶಾರ್ಪ್‌ ಶೂಟರ್‌ ವಿಕ್ರಂ ಬ್ರಾರ್‌ ಈ ಹತ್ಯೆ ಸಂಚು ನಡೆಸಿದ ಬಗ್ಗೆ ವರದಿಯಾಗಿತ್ತು. ವಿಕ್ರಂ ಬ್ರಾರ್‌ ಮತ್ತು ಆತನ ಸಂಗಡಿಗರು ಸಲ್ಮಾನ್‌ರ ಚಲನವಲನ ಗಮನಿಸುತ್ತಿದ್ದು ಹತ್ಯೆಗೆ ರೂಪುರೇಷೆ ನಡೆಸಿರುವ ಕುರಿತೆಲ್ಲಾ ವದಂದಿಗಳು ಹರಡಿದ್ದವು. ಈ ಹಿನ್ನೆಲೆಯಲ್ಲಿ ಪೊಲೀಸರು ಸಲ್ಮಾನ್‌ಗೆ ಭದ್ರತೆ ನೀಡಿದ್ದರು. ಇದೀಗ ಪೊಲೀಸರು ಇದೊಂದು ಪಬ್ಲಿಸಿಟಿ ಸ್ಟಂಟ್‌ ಎಂದಿದ್ದಾರೆ. ಹಾಗಾಗಿ ಬಾಲಿವುಡ್‌ನಲ್ಲಿ ಸೃಷ್ಟಿಯಾಗಿದ್ದ ಆತಂಕ ಕಡಿಮೆಯಾಗಿದೆ.

Previous articleಸೆಟ್ಟೇರಿದ ಡಿ.ಸತ್ಯಪ್ರಕಾಶ್‌ ನಿರ್ಮಾಣದ ಹೊಸ ಸಿನಿಮಾ
Next articleಮಾಲಿವುಡ್‌ಗೆ ಹೊಂಬಾಳೆ ಫಿಲಂಸ್‌; ಪೃಥ್ವಿರಾಜ್‌ ನಟಿಸಿ, ನಿರ್ದೇಶಿಸಲಿರುವ ಸಿನಿಮಾ

LEAVE A REPLY

Connect with

Please enter your comment!
Please enter your name here