‘ಹೊಂದಿಸಿ ಬರೆಯಿರಿ’ ಟೀಸರ್‌ನಲ್ಲಿ ಕಾಲೇಜ್ ನೆನಪುಗಳ ಕಟ್ಟಿಕೊಡಲಾಗಿದೆ. ವಿದ್ಯಾರ್ಥಿ ಜೀವನದ ಏರಿಳಿತಗಳನ್ನು ತೋರಿಸಲಾಗಿದೆ. ಈಗಾಗಲೇ ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ.

ಇಂಜಿನಿಯರಿಂಗ್ ಕಾಲೇಜ್ ಫ್ರೊಫೆಸರ್ ಆಗಿದ್ದ ರಾಮೇನಹಳ್ಳಿ ಜಗನ್ನಾಥ್ ‘ಹೊಂದಿಸಿ ಬರೆಯಿರಿ’ ಸಿನಿಮಾ ಮೂಲಕ ನಿರ್ದೇಕರಾಗಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ರಾಕ್‌ಲೈನ್ ಪ್ರೊಡಕ್ಷನ್ ಹೌಸ್‌ನಲ್ಲಿ ಡೈರೆಕ್ಷನ್ ವಿಭಾಗದಲ್ಲಿ ಕೆಲಸ ಮಾಡಿರುವ ಅನುಭವವಿರುವ ಜಗನ್ನಾಥ್ ಈ ಸಿನಿಮಾ ಮೂಲಕ ಪೂರ್ಣಪ್ರಮಾಣದ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ. ಫಸ್ಟ್‌ಲುಕ್‌ ಮೂಲಕ ಗಮನ ಸೆಳೆದಿದ್ದ ‘ಹೊಂದಿಸಿ ಬರೆಯಿರಿ’ ಇಂದು ಟೀಸರ್‌ನೊಂದಿಗೆ ನಿರೀಕ್ಷೆ ಹೆಚ್ಚು ಮಾಡಿದೆ.

ನೆನಪು, ಕನಸು ಹಾಗೂ ವಾಸ್ತವ.. ಈ ಮೂರು ಪರಿಕಲ್ಪನೆಗಳ ಮೇಲೆ ಅನಾವರಣವಾಗುವ ಸಿನಿಮಾ ‘ಹೊಂದಿಸಿ ಬರೆಯಿರಿ’. ಅದರಂತೆ ಟೀಸರ್‌ನಲ್ಲಿ ಕಾಲೇಜ್ ನೆನಪುಗಳ ಕಟ್ಟಿಕೊಡಲಾಗಿದೆ. ವಿದ್ಯಾರ್ಥಿ ಜೀವನದ ಏರಿಳಿತಗಳನ್ನು ತೋರಿಸಲಾಗಿದೆ. ಪ್ರಾಮಿಸಿಂಗ್‌ ಆಗಿರುವ ಟೀಸರ್‌ನಲ್ಲಿ ‘ಚೂರಿಕಟ್ಟೆ’ ಖ್ಯಾತಿಯ ಪ್ರವೀಣ್, ‘ಗುಳ್ಟು’ ಖ್ಯಾತಿಯ ನವೀನ್, ‘ವಾಸ್ತುಪ್ರಕಾರ’ದಿಂದ ಪರಿಚಿತರಾದ ಐಶಾನಿ ಶೆಟ್ಟಿ, ‘ಕೆಜಿಎಫ್’ ಸಿನಿಮಾದಲ್ಲಿ ರಾಕಿಭಾಯ್‌ಗೆ ಅಮ್ಮನಾಗಿ ನಟಿಸಿದ್ದ ಅರ್ಚನಾ ಜೋಯಿಸ್, ಸಂಯುಕ್ತ ಹೊರನಾಡು, ‘ಇಷ್ಟದೇವತೆ’ ಧಾರಾವಾಹಿ ಖ್ಯಾತಿಯ ಶ್ರೀಮಹಾದೇವ್, ‘ಗಾಳಿಪಟ’ ಸಿನಿಮಾದ ಭಾವನಾರಾವ್ ಹೀಗೆ ಯುವ ತಾರೆಯರ ದಂಡೇ ಇದೆ.

ಈಗಾಗಲೇ ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ‘ಟಗರು’ ಖ್ಯಾತಿಯ ಮಾಸ್ತಿ, ‘ಪೊಗರು’ ಖ್ಯಾತಿಯ ಪ್ರಶಾಂತ್ ರಾಜಪ್ಪ ಹಾಗೂ ಜಗನ್ನಾಥ್ ಸೇರಿದಂತೆ ಮೂವರು ಈ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ. ‘ಗುಳ್ಟು’ ಚಿತ್ರಕ್ಕೆ ಸಿನಿಮಾಟೋಗ್ರಫಿ ಮಾಡಿದ್ದ ಶಾಂತಿ ಸಾಗರ್‌ ಈ ಚಿತ್ರಕ್ಕೆ ಕ್ಯಾಮೆರಾ ಹಿಡಿದಿದ್ದಾರೆ. ಜೋ ಕೋಸ್ಟ ಸಂಗೀತ, ಕೆ ಕಲ್ಯಾಣ್, ಹೃದಯಶಿವ ಹಾಗೂ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್ ಗೀತೆಗಳನ್ನು ರಚಿಸಿದ್ದಾರೆ. ದೊಡ್ಡ ತಾರಾಬಳಗವೇ ನಟಿಸಿರುವ ‘ಹೊಂದಿಸಿ ಬರೆಯಿರಿ’ ಚಿತ್ರವನ್ನು ‘ಸಂಡೇ ಸಿನಿಮಾಸ್’ ಬ್ಯಾನರ್‌ನಡಿ ರಾಮೇನಹಳ್ಳಿ ಜಗನ್ನಾಥ್ ಹಾಗೂ ಅವರ ಸ್ನೇಹಿತರು ನಿರ್ಮಾಣ ಮಾಡಿದ್ದಾರೆ.

LEAVE A REPLY

Connect with

Please enter your comment!
Please enter your name here